Tata Open Maharashtra tennis 2022 – ಸೆಮಿಫೈನಲ್ ಗೆ ಎಂಟ್ರಿಯಾದ ರೋಹನ್ ಬೋಪಣ್ಣ – ರಾಮ್ ಕುಮಾರ್
ಟಾಟಾ ಓಪನ್ ಮಹಾರಾಷ್ಟ್ರ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ರಾಮ್ ಕುಮಾರ್ ರಾಮನಾಥನ್ ಅವರು ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಪುಣೆಯ ಬೆಲೆವಾಡಿ ಅಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರೋಹಣ್ ಬೋಪಣ್ಣ ಮತ್ತು ರಾಮ್ ಕುಮಾರ್ ರಾಮನಾಥನ್ ಅವರು 7-6, 7-6 ನೇರ ಸೆಟ್ ಗಳಿಂದ ಆಸ್ಟ್ರೇಲಿಯಾದ ಅಲೆಕ್ಸಾಂಡರ್ ಎರ್ಲೆರ್ ಮತ್ತು ಚೆಕ್ ಗಣರಾಜ್ಯದ ಜಿರಿ ವೆಸೆಲ್ ಅವರನ್ನು ಪರಾಭವಗೊಳಿಸಿದ್ರು.
ರೋಹಣ್ ಬೋಪಣ್ಣ ಮತ್ತು ರಾಮ್ ಕುಮಾರ್ ಅವರು ಜೊತೆಯಾಗಿ ಎರಡನೇ ಎಟಿಪಿ ಟೂರ್ನಿಯನ್ನು ಆಡುತ್ತಿದ್ದಾರೆ. ಸೆಮಿಫೈನಲ್ ನಲ್ಲಿ ಬೋಪಣ್ಣ ಮತ್ತು ರಾಮ್ ಕುಮಾರ್ ಅವರು ಫ್ರೆಂಚ್ ನ ಸ್ಯಾಡಿಯೊ ಡೊಂಬಿಯಾ ಮತ್ತು ಫ್ಯಾಬಿನ್ ರೆಬೌಲ್ ಅವರನ್ನು ಎದುರಿಸಲಿದ್ದಾರೆ.
Tata Open Maharashtra tennis 2022 – Bopanna-Ramkumar enter doubles semis
ಫ್ಯಾಬಿನ್ ರೆಬೌಲ್ ಮತ್ತು ಸ್ಯಾಡಿಯೊ ಡೊಂಬಿಯಾ ಅವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 4-6, 6-3, 10-2ರಿಂದ ಫೆಡ್ರಿಕ್ ಗೈಯೊ ಮತ್ತು ಲೊರೆಂಝೋ ಮ್ಯಸೆಟೊ ಅವರನ್ನು ಸೋಲಿಸಿದ್ರು.
ಮತ್ತೊಂದೆಡೆ ಭಾರತದ ಎನ್. ಶ್ರೀರಾಮ್ ಬಾಲಾಜಿ ಮತ್ತು ವಿಷ್ಣು ವರ್ಧನ್ ಅವರು 6-1, 6-4ರಿಂದ ಅರ್ಜುನ್ ಮತ್ತು ಪುರವ್ ರಾಜ ಅವರನ್ನು ಮಣಿಸಿದ್ರು.
ಶ್ರೀರಾಮ್ ಬಾಲಾಜಿ ಮತ್ತು ವಿಷ್ಣು ವರ್ಧನ್ ಅವರು ಸೆಮಿಫೈನಲ್ ನಲ್ಲಿ ಗಿಯಾನ್‍ಲುಕಾ ಮ್ಯಾಗೆರ್ ಮತ್ತು ಎಮಿಲಿ ರುಸುವುರಿ ಅವರನ್ನು ಎದುರಿಸಲಿದ್ದಾರೆ.
ಇನ್ನು ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಯುಕಿ ಭಾಂಬ್ರಿ ಅವರು 3-6, 2-6ರಿಂದ ಎಂಟನೇ ಶ್ರೇಯಾಂಕಿತ ಆಸ್ಟ್ರೇಲಿಯಾದ ಸ್ಟೆಫಾನೊ ಟ್ರಾವಾಗಿಲಿಯಾ ವಿರುದ್ದ ಸೋಲು ಅನುಭವಿಸಿದ್ರು.