ipl 2022- ಬಿಗ್ ರಿಲೀಫ್.. ಬಂದೇ ಬಿಟ್ರು.. ನೋಡಿ.. ಆಸೀಸ್ ಆಟಗಾರರು..!

ಏಪ್ರಿಲ್ 6 ರ ನಂತರ 15ನೇ ಆವೃತ್ತಿಯ ಐಪಿಎಲ್ ನಲ್ಲಿ ಆಸ್ಟ್ರೇಲಿಯನ್ ಆಟಗಾರರು ಆಡಲಿದ್ದಾರೆ. ಆಸ್ಟ್ರೇಲಿಯಾದ ಪಾಕ್ ಪ್ರವಾಸ ಮುಗಿದಿದೆ. ಹೀಗಾಗಿ ಆಸ್ಟ್ರೇಲಿಯನ್ ಆಟಗಾರರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ವಿಧಿಸಿದ್ದ ಷರತ್ತು ಕೂಡ ಕೊನೆಯಾಗಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ಒಪ್ಪಂದ ಮಾಡಿಕೊಂಡಿದ್ದ ಆಟಗಾರರು ಪಾಕ್ ಪ್ರವಾಸ ಮುಗಿಯುವ ತನಕ ಐಪಿಎಲ್ ನಲ್ಲಿ ಆಡುವಂತಿಲ್ಲ ಎಂದು ತಾಕೀತು ಮಾಡಿತ್ತು.
ಹೀಗಾಗಿ ಗ್ಲೇನ್ ಮ್ಯಾಕ್ಸ್ ವೆಲ್, ಡೇವಿಡ್ ವಾರ್ನರ್ ಪಾಕ್ ಪ್ರವಾಸದಲ್ಲಿ ಇಲ್ಲದಿದ್ರೂ ಕೂಡ ಏಪ್ರಿಲ್ 6ರ ತನಕ ಅವರು ಐಪಿಎಲ್ ಪಂದ್ಯ ಆಡಿಲ್ಲ.
ಇದೀಗ ಆಸ್ಟ್ರೇಲಿಯಾ ಆಲ್ ರೌಂಡರ್ ಪ್ಯಾಟ್ ಕಮಿನ್ಸ್ ಅವರು ಈಗಾಗಲೇ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ. ಅಲ್ಲದೆ ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದಾರೆ. ಮುಂಬೈ ಇಂಡಿಯನ್ಸ್ ಪಂದ್ಯಕ್ಕೂ ಲಭ್ಯರಾಗಲಿದ್ದಾರೆ.
ಹಾಗೇ ಮದುವೆ ಶಾಸ್ತ್ರ ಮುಗಿಸಿಕೊಂಡಿರುವ ಗ್ಲೇನ್ ಮ್ಯಾಕ್ಸ್ ವೆಲ್ ಅವರು ಕ್ವಾರಂಟೈನ್ ಅವಧಿ ಮುಗಿಸಿದ್ದು, ಏಪ್ರಿಲ್ 9ರ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ.
ಹಾಗೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡೇವಿಡ್ ವಾರ್ನರ್ ಅವರು ಏಪ್ರಿಲ್ 7ರಂದು ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಆಡಲಿದ್ದಾರೆ.

ಇನ್ನು ಜೋಶ್ ಹ್ಯಾಝಲ್ ವುಡ್ ಅವರು ಆರ್ ಸಿಬಿ ತಂಡವನ್ನು ಸೇರಿಕೊಂಡಿಲ್ಲ. ಪಾಕ್ ವಿರುದ್ಧದ ಏಕದಿನ ಕ್ರಿಕೆಟ್ ನಿಂದ ವಿಶ್ರಾಂತಿ ಪಡೆದಿರುವ ಹ್ಯಾಝಲ್ ವುಡ್ ಅವರು ಇನ್ನೂ ಕೂಡ ಭಾರತಕ್ಕೆ ಬಂದಿಲ್ಲ. ಏಪ್ರಿಲ್ 9ರ ಪಂದ್ಯಕ್ಕೆ ಅವರು ಗೈರಾಗಲಿದ್ದಾರೆ. ಆದ್ರೆ ಏಪ್ರಿಲ್ 12ರ ಪಂದ್ಯದಲ್ಲಿ ಜೋಶ್ ಹ್ಯಾಝಲ್ ವುಡ್ ಅವರು ಆರ್ ಸಿಬಿ ಪರ ಆಡುವ ಸಾಧ್ಯತೆ ಇದೆ.
ಹಾಗೇ ಆಸ್ಟ್ರೇಲಿಯಾದ ಮಾರಕ ವೇಗಿ ಮಿಟ್ವಲ್ ಮಾರ್ಶ್ ಅವರು ಇನ್ನೂ ಒಂದು ವಾರದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದಾರೆ. ಮಿಟ್ಚೆಲ್ ಮಾರ್ಶ್ ಅವರು ಪಾಕ್ ಪ್ರವಾಸದ ವೇಳೆ ಗಾಯಗೊಂಡಿದ್ದರು. ಇದೀಗ ವಿಶ್ರಾಂತಿ ಪಡೆಯುತ್ತಿದ್ದಾರೆ. ಏಪ್ರಿಲ್ 16ರ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ಇದೆ. ipl 2022- When Australian players will be seen in action
ಇನ್ನುಳಿದಂತೆ ಪಾಕ್ ಪ್ರವಾಸದಲ್ಲಿದ್ದ ಆರೋನ್ ಫಿಂಚ್, ನಥಾನ್ ಎಲಿಸ್, ಮಾರ್ಕಸ್ ಸ್ಟೋನಿಸ್, ಜೇಸನ್ ಬೆಹ್ರೆಂಡೊಫ್ ಮತ್ತು ಸೀನ್ ಅಬೋಟ್ ಅವರು ಈಗಾಗಲೇ ಭಾರತಕ್ಕೆ ಬಂದಿದ್ದಾರೆ. ಮೂರು ದಿನಗಳ ಕ್ವಾರಂಟೈನ್ ಬಳಿಕ ಅವರು ತಮ್ಮ ತಮ್ಮ ತಂಡಗಳನ್ನು ಸೇರಿಕೊಳ್ಳಲಿದ್ದಾರೆ. ಏಪ್ರಿಲ್ 10ರ ಪಂದ್ಯಗಳಿಗೆ ಈ ಐದು ಆಟಗಾರರು ಲಭ್ಯರಿದ್ದಾರೆ. ಆರೋನ್ ಫಿಂಚ್ ಅವರು ಕೆಕೆಆರ್ ತಂಡದ ಪರ ಆಡಿದ್ರೆ, ನಥಾನ್ ಎಲಿಸ್ ಅವರು ಪಂಜಾಬ್ ಕಿಂಗ್ಸ್, ಮಾರ್ಕಸ್ ಸ್ಟೋನಿಸ್ ಅವರು ಲಕ್ನೋ ಸೂಪರ್ ಜೈಂಟ್ಸ್ , ಸೀನ್ ಅಬೊಟ್ ಅವರು ಸನ್ ರೈಸರ್ಸ್ ಹೈದ್ರಬಾದ್ ತಂಡದ ಪರ ಆಡಲಿದ್ದಾರೆ.