ಪ್ರಸಕ್ತ ಐಪಿಎಲ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಮುಗ್ಗರಿಸಿದ್ದ ʼರನ್ ಮಷಿನ್ʼ ವಿರಾಟ್ ಕೊಹ್ಲಿ ಕಡೆಗೂ ತಮ್ಮ ಅಸಲಿ ಖದರ್ ತೋರಿಸಿದ್ದಾರೆ. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ಕಾರಣವಾದ ವಿರಾಟ್ ಕೊಹ್ಲಿ, ತಮ್ಮ ಈ ಪ್ರದರ್ಶನದ ಮೂಲಕ ಹೊಸದೊಂದು ಸಾಧನೆ ಮಾಡಿದ್ದಾರೆ.
ತಮ್ಮ ಬ್ಯಾಟಿಂಗ್ ಮೂಲಕವೇ ಅಬ್ಬರಿಸಿರೋ ಕಿಂಗ್ ಕೊಹ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ದಶಕಗಳ ಕಾಲ ಆರ್ಸಿಬಿ ತಂಡದ ಶಕ್ತವಾಗಿರೋ ವಿರಾಟ್ ಕೊಹ್ಲಿ, ಆರ್ಸಿಬಿ ಪರವಾಗಿ 7 ಸಾವಿರಕ್ಕೂ ಹೆಚ್ಚು ರನ್ಗಳಿಸಿದ್ದಾರೆ. ಆ ಮೂಲಕ ಫ್ರಾಂಚೈಸಿ ಕ್ರಿಕೆಟ್ನಲ್ಲಿ ಒಂದೇ ತಂಡದ ಪರ ಅತ್ಯಧಿಕ ರನ್ಗಳಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಆರ್ಸಿಬಿ ಪರವಾಗಿ 6,592ಕ್ಕೂ ಹೆಚ್ಚು ರನ್ಗಳಿಸಿದ್ದು, ಉಳಿದ ರನ್ಗಳನ್ನು ಚಾಂಪಿಯನ್ಸ್ ಲೀಗ್ನಲ್ಲಿ ಬಾರಿಸಿದ್ದಾರೆ. ಕೊಹ್ಲಿ ನಂತರದಲ್ಲಿ ಒಂದೇ ತಂಡದ ಪರ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ ಪಟ್ಟಿಯಲ್ಲಿ ಸುರೇಶ್ ರೈನಾ 2ನೇ ಸ್ಥಾನದಲ್ಲಿದ್ದರೆ. ರೋಹಿತ್ ಶರ್ಮ 3ನೇ ಸ್ಥಾನದಲ್ಲಿದ್ದಾರೆ.
ಗುಜರಾತ್ ವಿರುದ್ಧದ ಪಂದ್ಯದಲ್ಲಿ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ, 54 ಬಾಲ್ಗಳಲ್ಲಿ 74 ರನ್ಗಳಿಸಿ ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೇ ವಿರಾಟ್ ಹಾಗೂ ಡುಪ್ಲೆಸ್ಸಿ ಮೊದಲ ವಿಕೆಟ್ಗೆ 115 ರನ್ಗಳಿಸಿ ಶತಕದ ಜೊತೆಯಾಟವಾಡಿದರು.
ಟಿ20ಯಲ್ಲಿ ಹೆಚ್ಚು ರನ್ಗಳು(ಒಂದು ತಂಡದ ಪರ)
RCB – ವಿರಾಟ್ ಕೊಹ್ಲಿ – 7000 ರನ್ಗಳು
CSK – ಸುರೇಶ್ ರೈನಾ – 5529 ರನ್ಗಳು
MI – ರೋಹಿತ್ ಶರ್ಮ – 4980 ರನ್ಗಳು