ಐಪಿಎಲ್ನಲ್ಲಿ ಅದ್ಭುತ ಬ್ಯಾಟಿಂಗ್ನಿಂದಲೇ ಅಬ್ಬರಿಸಿರುವ ವಿರಾಟ್ ಕೊಹ್ಲಿ, ಪ್ಲೇ-ಆಫ್ ಹಂತದಲ್ಲಿ ನಿರೀಕ್ಷಿತ ಆಟವಾಡಿಲ್ಲ. ನಿರ್ಣಾಯಕ ಕ್ವಾಲಿಫೈಯರ್-2 ಪಂದ್ಯಗಳಲ್ಲಿ ಸತತ ವೈಫಲ್ಯ ಕಂಡಿರುವ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದರು.
15ನೇ ಆವೃತ್ತಿಯ ಲ್ಲಿ ತಮ್ಮ ಖದರ್ ತೋರಿಸುವಲ್ಲಿ ವೈಫಲ್ಯ ಕಂಡಿರುವ ವಿರಾಟ್ ಕೊಹ್ಲಿ, ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈವರೆಗೂ ಮೂರು ಬಾರಿ ಮಾತ್ರ ಕ್ವಾಲಿಫೈಯರ್-2 ಪ್ರವೇಶಿಸಿದೆ. ಆದರೆ ಈ ಎಲ್ಲಾ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ, ದೊಡ್ಡ ಮೊತ್ತ ಕಲೆಹಾಕಿಲ್ಲ.
ಈ ಹಿಂದೆ ಆಡಿರುವ ಐಪಿಎಲ್ ಕ್ವಾಲಿಫೈಯರ್-2 ಪಂದ್ಯದಲ್ಲಿ ವಿರಾಟ್ ಕೊಹ್ಲಿ, 8(12) ಮತ್ತು 12(9) ರನ್ಗಳಿಗೆ ಔಟಾಗಿದ್ದಾರೆ. ಇದೀಗ 2022ರ ಐಪಿಎಲ್ನ ಕ್ವಾಲಿಫೈಯರ್-2ನಲ್ಲಿ 7(8) ರನ್ಗಳಿಗೆ ಔಟಾಗಿ ನಿರಾಸೆ ಮೂಡಿಸಿದರು. ಆ ಮೂಲಕ ಐಪಿಎಲ್ನ ಕ್ವಾಲಿಫೈಯರ್-2 ಪಂದ್ಯಗಳಲ್ಲಿನ ತಮ್ಮ ಬ್ಯಾಟಿಂಗ್ ವೈಫಲ್ಯವನ್ನ ಮುಂದುವರಿಸಿದರು.
2022ರ ಐಪಿಎಲ್ನ ಆರಂಭದಿಂದಲೂ ನೀರಸ ಪ್ರದರ್ಶನ ನೀಡುತ್ತಿರುವ ಕಿಂಗ್ ಕೊಹ್ಲಿ, 16 ಪಂದ್ಯಗಳಿಂದ 341 ರನ್ಗಳಿಸಿದ್ದಾರೆ. 22.73ರ ಸರಾಸರಿಯಲ್ಲಿ ರನ್ ಕಲೆಹಾಕಿರುವ ಕೊಹ್ಲಿ, 115.99ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಕೊಹ್ಲಿ ಅವರ ಈ ಪ್ರದರ್ಶನದಲ್ಲಿ ಕೇವಲ 2 ಅರ್ಧಶತಕ ಬಂದಿದೆ.