IPL 2022 – SRH Team – ಪ್ರಖರ ಸೂರ್ಯನಂತೆ ಪ್ರಜ್ವಲಿಸುತ್ತಾ ಹೈದ್ರಬಾದ್ .. ಎಸ್ ಆರ್ ಎಚ್ ತಂಡದ ಫುಲ್ ಡಿಟೇಲ್ಸ್..!

ಸನ್ ರೈಸರ್ಸ್ ಹೈದ್ರಬಾದ್. ಐಪಿಎಲ್ ನಲ್ಲಿ ಹೈದ್ರಬಾದ್ ನಗರವನ್ನು ಪ್ರತಿನಿಧಿಸುವ ತಂಡ. ಆರಂಭದಲ್ಲಿ ಡೆಕ್ಕನ್ ಕ್ರೊನಿಕಲ್ ಮಾಲೀಕತ್ವದ ಡೆಕ್ಕನ್ ಚಾರ್ಜರ್ಸ್ ತಂಡವನ್ನು 2013ರಲ್ಲಿ ಸನ್ ಟಿವಿ ಗ್ರೂಪ್ ಖರೀದಿ ಮಾಡಿತ್ತು.
ಆರೆಂಜ್ ಆರ್ಮಿ ಖ್ಯಾತಿಯ ಎಸ್ ಆರ್ ಎಚ್ ತಂಡ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದೆ.
2008ರಿಂದ 2012ರವರೆಗೆ ಡೆಕ್ಕನ್ ಚಾರ್ಜರ್ಸ್ ತಂಡ ಐದು ಬಾರಿ ಕಣಕ್ಕಿಳಿದಿದೆ. 2009ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2010ರಲ್ಲಿ ಸೆಮಿಫೈನಲ್ ನಲ್ಲಿ ಸೋಲು ಅನುಭವಿಸಿದೆ. ಹಾಗೇ ಮೂರು ಬಾರಿ ಲೀಗ್ ಹಂತಕ್ಕೆ ಸೀಮಿತವಾಗಿದೆ.

ಇನ್ನು 2013ರಿಂದ 2021ರವರೆಗೆ ಸನ್ ರೈಸರ್ಸ್ ಹೈದ್ರಬಾದ್ ತಂಡವಾಗಿ ನಾಲ್ಕು ಬಾರಿ ಪ್ಲೇ ಆಫ್ ಗೆ ಎಂಟ್ರಿಯಾಗಿದೆ. ಮೂರು ಬಾರಿ ಮಾತ್ರ ಲೀಗ್ ಹಂತಕ್ಕೆ ಸಮಧಾನಪಟ್ಟುಕೊಂಡಿದೆ. ಇನ್ನುಳಿದಂತೆ 2016ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹಾಗೇ 2018ರಲ್ಲಿ ರನ್ನರ್ ಅಪ್ ಆಗಿದೆ.
ಒಟ್ಟಾರೆ ಹೈದ್ರಬಾದ್ ತಂಡ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿದೆ.
ಈ ಬಾರಿಯ ಐಪಿಎಲ್ ಗೆ ಎಸ್ ಆರ್ ಎಚ್ ತಂಡ ಪ್ಲಾನ್ ಮಾಡಿಕೊಂಡು ಬಲಿಷ್ಠ ತಂಡವನ್ನೇ ಕಟ್ಟಿದೆ. ಕೋಟಿ ಕೋಟಿ ಲೆಕ್ಕದಲ್ಲಿ ದುಡ್ಡು ಖರ್ಚು ಮಾಡಿ ಪ್ರಮುಖ ಆಟಗಾರರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಗಿದೆ.
ರಿಟೇನ್ ಆಟಗಾರರಿಗೆ ಮಾಡಿರುವ ಖರ್ಚು – 22 ಕೋಟಿ ರೂ.
ಖರೀದಿ ಮಾಡಿದ 20 ಆಟಗಾರರ ವೆಚ್ಚ – 67.90 ಕೋಟಿ ರೂ.
ಎಸ್ ಆರ್ ಎಚ್ ತಂಡದ ಒಟ್ಟು ಖರ್ಚು – 89.90
ಪರ್ಸ್‍ನಲ್ಲಿ ಉಳಿದ ದುಡ್ಡು – 10 ಲಕ್ಷ ರೂ.
ತಂಡದಲ್ಲಿರುವ ಒಟ್ಟು ಆಟಗಾರರು – 23
ಭಾರತದ ಆಟಗಾರರು – 15, ವಿದೇಶಿ ಆಟಗಾರರು – 8
IPL 2022 – SRH Team – Sunrisers Hyderabad 2022 Players List
ಸನ್ ರೈಸರ್ಸ್ ಹೈದ್ರಬಾದ್ ತಂಡ ನಿಗದಿತ 90 ಕೋಟಿಯಲ್ಲಿ 22 ಕೋಟಿ ರೂಪಾಯಿಯನ್ನು ರಿಟೇನ್ ಆಟಗಾರರಿಗೆ ಖರ್ಚು ಮಾಡಿದೆ. ಕೇನ್ ವಿಲಿಯಮ್ಸ್ 14 ಕೋಟಿ ಮತ್ತು ಅಬ್ದುಲ್ ಸಮಾದ್ ಮತ್ತು ಉಮ್ರಾನ್ ಮಲ್ಲಿಕ್ ಗೆ ತಲಾ ನಾಲ್ಕು ಕೋಟಿ ರೂ ವೆಚ್ಚ ಮಾಡಿದೆ. ಇನ್ನು ಉಳಿದಿರುವ 68 ಕೋಟಿಯಲ್ಲಿ 67.90 ಕೋಟಿ ರೂಪಾಯಿಯನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ಖರ್ಚು ಮಾಡಿದೆ. ಹರಾಜಿನಲ್ಲಿ 20 ಆಟಗಾರರನ್ನು ಖರೀದಿ ಮಾಡಿದೆ. ಜೇಬಿನಲ್ಲಿ 10 ಲಕ್ಷ ರೂಪಾಯಿ ಉಳಿಸಿಕೊಂಡಿದೆ. ತಂಡದಲ್ಲಿ ಒಟ್ಟು 23 ಆಟಗಾರರು ಇದ್ದು, 15 ಭಾರತದ ಮತ್ತು ಎಂಟು ಮಂದಿ ವಿದೇಶಿ ಆಟಗಾರರು ಇದ್ದಾರೆ. ಅಲ್ಲದೆ 15 ಮಂದಿ ಆಟಗಾರರು ಕೋಟ್ಯಾಧೀಶರರು ಇದ್ದಾರೆ.
ಸನ್ ರೈಸರ್ಸ್ ಹೈದ್ರಬಾದ್
ರಿಟೇನ್ ಆಟಗಾರರು
ಕೇನ್ ವಿಲಿಯಮ್ಸನ್ – 14 ಕೋಟಿ ರೂ.
ಅಬ್ದುಲ್ ಸಮಾದ್ – 4 ಕೋಟಿ ರೂ.
ಉಮ್ರಾನ್ ಮಲ್ಲಿಕ್ – 4 ಕೋಟಿ ರೂ.
ಖರೀದಿ ಮಾಡಿದ ಆಟಗಾರರು
ನಿಕೊಲಾಸ್ ಪೂರನ್ – 10.75 ಕೋಟಿ ರೂ.
ವಾಷಿಂಗ್ಟನ್ ಸುಂದರ್ – 8.75 ಕೋಟಿ ರೂ.
ರಾಹುಲ್ ತ್ರಿಪಾಠಿ – 8.5 ಕೋಟಿ ರೂ.
ರೊಮರಿಯೊ ಶೆಫರ್ಡ್ – 7.75 ಕೋಟಿ ರೂ.
ಅಭಿಷೇಕ್ ಶರ್ಮಾ – 6.5 ಕೋಟಿ ರೂ.
ಭುವನೇಶ್ವರ್ ಕುಮಾರ್ – 4.2 ಕೋಟಿ ರೂ.
ಮಾರ್ಕೊ ಜಾನ್ಸೆನ್ – 4.2 ಕೋಟಿ ರೂ.
ಟಿ. ನಟರಾಜನ್ – 4 ಕೋಟಿ ರೂ.
ಕಾರ್ತಿಕ್ ತ್ಯಾಗಿ – 4 ಕೋಟಿ ರೂ.
ಆಡೆನ್ ಮಕ್ರಾಮ್ – 2.6 ಕೋಟಿ ರೂ.
ಸೀನ್ ಅಬೋಟ್ – 2.4 ಕೋಟಿ ರೂ.
ಗ್ಲೇನ್ ಫಿಲಿಪ್ಸ್ – 1.5 ಕೋಟಿ ರೂ.
ಶ್ರೇಯಸ್ ಗೋಪಾಲ್ – 75 ಲಕ್ಷ ರೂ.
ವಿಷ್ಣು ವಿನೋದ್ – 50 ಲಕ್ಷ ರೂ.
ಫಝಲ್ ಹಾಗ್ ಫಾರೂಕಿ – 50 ಲಕ್ಷ ರೂ.
ಜೆ. ಸುಚೀತ್ – 20 ಲಕ್ಷ ರೂ.
ಆರ್. ಸಮರ್ಥ್ – 20 ಲಕ್ಷ ರೂ.
ಶಶಾಂಕ್ ಸಿಂಗ್ – 20 ಲಕ್ಷ ರೂ.
ಸೌರಭ್ ದುಬೆ – 20 ಲಕ್ಷ ರೂ.
ಪ್ರಿಯಮ್ ಗರ್ಗ್ – 20 ಲಕ್ಷ ರೂ.