15ನೇ ಆವೃತ್ತಿಯ ಐಪಿಎಲ್ ಟೂರ್ನಿ ಅರ್ಧಶತಕ ಪೂರೈಸಿದ್ದು, ಟೂರ್ನಿಯ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದ್ರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ.
ಬ್ರೆಬೋರ್ನ್ ಮೈದಾನದಲ್ಲಿ ನಡೆಯುವ ಜಿದ್ದಾಜಿದ್ದಿನ ಪಂದ್ಯಕ್ಕಾಗಿ ಎರಡು ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಉಭಯ ತಂಡಗಳು ಇಂದಿನ ಹಣಾಹಣಿಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದು, ಪಂದ್ಯದಲ್ಲಿ ಟಾಸ್ ಗೆದ್ದಿರುವ ಕೇನ್ ವಿಲಿಯಮ್ಸನ್, ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಎರಡು ತಂಡಗಳು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದು, ಹೈದ್ರಾಬಾದ್ ಪರ, ಸೆನ್ ಅಬ್ಬೋಟ್, ಕಾರ್ತಿಕ್ ತ್ಯಾಗಿ ಹಾಗೂ ಶ್ರೇಯಸ್ ಗೋಪಾಲ್ ಕಣಕ್ಕಿಳಿಯುತ್ತಿದ್ದರೆ. ಡೆಲ್ಲಿ ಪರ ರಿಪ್ಪಲ್ ಪಟೇಲ್, ಮನ್ದೀಪ್ ಸಿಂಗ್, ಅನ್ರಿಕ್ ನೋಕಿಯಾ ಹಾಗೂ ಖಲೀಲ್ ಅಹ್ಮೆದ್ ಇಂದು ಆಡುತ್ತಿದ್ದಾರೆ.
ಟೂರ್ನಿಯಲ್ಲಿ ಎರಡು ತಂಡಗಳು ಏರಿಳಿತದ ಪ್ರದರ್ಶನ ನೀಡಿವೆ. ಡೆಲ್ಲಿ ಕ್ಯಾಪಿಟಲ್ಸ್ 9 ಪಂದ್ಯಗಳನ್ನು ಆಡಿದ್ದು, 4 ಗೆಲುವು 5 ಸೋಲಿನಿಂದ ಪಾಯಿಂಟ್ಸ್ ಟೇಬಲ್ನಲ್ಲಿ 7ನೇ ಸ್ಥಾನದಲ್ಲಿದೆ. ಇನ್ನು ಟೂರ್ನಿಯಲ್ಲಿ ಸೋಲಿನ ಆರಂಭ ಕಂಡಿದ್ದರೂ, ಭರ್ಜರಿ ಕಮ್ಬ್ಯಾಕ್ ಮಾಡಿರುವ ಹೈದ್ರಾಬಾದ್, 9 ಪಂದ್ಯದಲ್ಲಿ 5 ಗೆಲುವು, 4 ಸೋಲಿನೊಂದಿಗೆ 5ನೇ ಸ್ಥಾನದಲ್ಲಿದೆ. ಹೀಗಾಗಿ ಇಂದಿನ ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಮೇಲಕ್ಕೇರುವ ಲೆಕ್ಕಾಚಾರದೊಂದಿಗೆ ತಂಡಗಳು ಕಣಕ್ಕಿಳಿಯಲು ಸಜ್ಜಾಗಿವೆ.
ಉಭಯ ತಂಡಗಳು:
ಸನ್ರೈಸರ್ಸ್ ಹೈದ್ರಾಬಾದ್: ಅಭಿಷೇಕ್ ಶರ್ಮ, ಕೇನ್ ವಿಲಿಯಂಸನ್(ನಾಯಕ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಂ, ನಿಕೋಲಸ್ ಪೂರನ್, ಶಶಾಂಕ್ ಸಿಂಗ್, ಶ್ರೇಯಸ್ ಗೋಪಾಲ್, ಭುವನೇಶ್ವರ್ ಕುಮಾರ್, ಸೆನ್ ಅಬ್ಬೋಟ್, ಕಾರ್ತಿಕ್ ತ್ಯಾಗಿ, ಉಮ್ರಾನ್ ಮಲ್ಲಿಕ್.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್, ಮನ್ದೀಪ್ ಸಿಂಗ್, ಮಿಚೆಲ್ ಮಾರ್ಷ್, ರಿಷಬ್ ಪಂತ್, ಲಲಿತ್ ಯಾದವ್, ರೋವ್ಮನ್ ಪೋವಲ್, ರಿಪಲ್ ಪಟೇಲ್, ಶಾರ್ದೂಲ್ ಥಾಕೂರ್, ಕುಲ್ದೀಪ್ ಯಾದವ್, ಖಲೀಲ್ ಅಹ್ಮೆದ್, ಅನ್ರಿಕ್ ನೋಕಿಯಾ