ಟೀಂ ಇಂಡಿಯಾದ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್, ಐಪಿಎಲ್ ಟೂರ್ನಿಯಲ್ಲೂ ತಮ್ಮದೇ ಕಮಾಲ್ ಮಾಡಿದ್ದಾರೆ. ಚಾಣಾಕ್ಷ ಬೌಲಿಂಗ್ ಮೂಲಕ ಎದುರಾಳಿಗಳಿಗೆ ಮಣ್ಣುಮುಕ್ಕಿಸುವ ಭುವಿ, ಐಪಿಎಲ್ನಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ.
ಐಪಿಎಲ್ ಟೂರ್ನಿಯಲ್ಲೂ ತಮ್ಮ ಸ್ವಿಂಗ್ ಮೋಡಿ ಮಾಡಿರುವ ಭುವನೇಶ್ವರ್ ಕುಮಾರ್, ಪವರ್-ಪ್ಲೇನಲ್ಲಿ ಅತ್ಯಧಿಕ ವಿಕೆಟ್ಗಳನ್ನು ಪಡೆದ ಮೊದಲ ಆಟಗಾರ ಎನಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಇನ್ನಿಂಗ್ಸ್ನ ಮೊದಲ ಓವರ್ನಲ್ಲೇ ಮಂದೀಪ್ ಸಿಂಗ್ ವಿಕೆಟ್ ಪಡೆದ ಭುವನೇಶ್ವರ್ ಕುಮಾರ್, ಐಪಿಎಲ್ನ ಪವರ್-ಪ್ಲೇ(1-6 ಓವರ್ಗಳು) ನಲ್ಲಿ ತಮ್ಮ 55ನೇ ವಿಕೆಟ್ ಕಬಳಿಸಿದರು. ಆ ಮೂಲಕ ಐಪಿಎಲ್ನ ಪವರ್-ಪ್ಲೇ ಹಂತದಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದಾರೆ.
ಪವರ್-ಪ್ಲೇನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ ಮೊದಲ ಸ್ಥಾನದಲ್ಲಿದ್ದರೆ, ಸಂದೀಪ್ ಶರ್ಮ(54 ವಿಕೆಟ್), ಉಮೇಶ್ ಯಾದವ್(53 ವಿಕೆಟ್) ಹಾಗೂ ಜಹೀರ್ ಖಾನ್(52 ವಿಕೆಟ್) ನಂತರದ ಸ್ಥಾನದಲ್ಲಿದ್ದಾರೆ.
ಹೆಚ್ಚು ಮೇಡೆನ್ ಓವರ್ಗಳು:
ಪವರ್ ಪ್ಲೇನಲ್ಲಿ ಹೆಚ್ಚು ವಿಕೆಟ್ ಪಡೆದ ಸಾಧನೆ ಜೊತೆಗೆ ಐಪಿಎಲ್ನಲ್ಲಿ ಹೆಚ್ಚು ಮೇಡೆನ್ ಓವರ್ ಮಾಡಿದ 2ನೇ ಆಟಗಾರ ಎನಿಸಿದ್ದಾರೆ. 14 ಮೇಡೆನ್ ಓವರ್ ಮಾಡಿರುವ ಪ್ರವೀಣ್ ಕುಮಾರ್ ಮೊದಲ ಸ್ಥಾನದಲ್ಲಿದ್ದರೆ. 10 ಮೇಡೆನ್ ಓವರ್ ಮಾಡಿರುವ ಭುವನೇಶ್ವರ್ ಕುಮಾರ್ ಹಾಗೂ ಇರ್ಫಾನ್ ಪಠಾಣ್ 2ನೇ ಸ್ಥಾನವನ್ನ ಹಂಚಿಕೊಂಡಿದ್ದಾರೆ.