ipl 2022- 15ನೇ ಆವೃತ್ತಿಯ ಐಪಿಎಲ್ ಆಯೋಜನೆಗೆ ಮುಂದಾಗಿರುವ ದಕ್ಷಿಣ ಆಫ್ರಿಕಾ ..!
15ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಭಾರತದಲ್ಲೇ ಆಯೋಜನೆ ಮಾಡಬೇಕು ಎಂಬುದು ಬಿಸಿಸಿಐನ ಉದ್ದೇಶವಾಗಿದೆ.
ಈಗಾಗಲೇ ಬಿಸಿಸಿಐ ಮಾರ್ಚ್ ಕೊನೆಯವಾರದಿಂದ ಮೇ ತಿಂಗಳಿನ ತನಕ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲು ಬಿಸಿಸಿಐ ನಿರ್ಧರಿಸಿದೆ.
ipl 2022 South Africa sends proposal to BCCI to host T20 League
ಆದ್ರೆ ಈ ಬಾರಿಯ ಐಪಿಎಲ್ ಟೂರ್ನಿಗೂ ಕೋವಿಡ್ -19 ಸೋಂಕು ಅಡ್ಡಿಯನ್ನುಂಟು ಮಾಡುವ ಸಾಧ್ಯತೆ ಇದೆ. ಸದ್ಯ ಭಾರತದಲ್ಲಿ ಕೋವಿಡ್ ಹಾವಳಿ ಕಮ್ಮಿಯಾಗಿಲ್ಲ. ಆದ್ರೂ ಭಾರತದಲ್ಲೇ ಟೂರ್ನಿಯನ್ನು ಆಯೋಜನೆ ಮಾಡಲು ಬಿಸಿಸಿಐ ಪ್ಲಾನ್ ಮಾಡಿಕೊಂಡಿದೆ. ಈ ನಡುವೆ ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಫೆಬ್ರವರಿ 20ರಂದು ಬಿಸಿಸಿಐ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಮತ್ತು ತಾಣಗಳನ್ನು ನಿಗದಿಪಡಿಸಲಿದೆ.
ipl 2022 bcci sports karnataka
ಏತನ್ಮಧ್ಯೆ, ಭಾರತದಲ್ಲಿ ಟೂರ್ನಿಯನ್ನು ಆಯೋಜನೆ ಮಾಡಲು ಅಡ್ಡಿಯಾದ್ರೆ ಬಿ ಪ್ಲಾನ್ ನಂತೆ ಯುಎಇಗೆ ಶಿಫ್ಟ್ ಆಗುವ ಸಾಧ್ಯತೆಗಳು ಹೆಚ್ಚಿವೆ.ಯಾಕಂದ್ರೆ 2020ರಲ್ಲಿ ಪೂರ್ಣ ಪ್ರಮಾಣದಲ್ಲಿ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು. ಕಳೆದ ಬಾರಿ ಐಪಿಎಲ್ ಪಾರ್ಟ್ -2 ಯುಎಇನಲ್ಲಿ ಸಂಘಟಿಸಲಾಗಿತ್ತು. ಹೀಗಾಗಿ ಬಿಸಿಸಿಐ ಭಾರತದಲ್ಲಿ ಟೂರ್ನಿಯನ್ನು ಆಯೋಜನೆ ಮಾಡದಿದ್ರೆ ಯುಎಇಗೆ ಶಿಫ್ಟ್ ಆಗುವ ಯೋಜನೆ ಕೂಡ ಇದೆ.
ಈ ನಡುವೆ, 15ನೇ ಆವೃತ್ತಿಯ ಟೂರ್ನಿಯನ್ನು ದಕ್ಷಿಣ ಆಫ್ರಿಕಾ ಆಯೋಜನೆ ಮಾಡಲು ಮುಂದಾಗಿದೆ. ಈಗಾಗಲೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಬಿಸಿಸಿಐ ಬಳಿ ಪ್ರಸ್ತಾಪವನ್ನು ಕೂಡ ಮಾಡಿದೆ. ಐಪಿಎಲ್ ಟೂರ್ನಿಯನ್ನು ಸುಲಭವಾಗಿ ಸಂಘಟಿಸುವುದರ ಬಗ್ಗೆ ಚರ್ಚೆ ಕೂಡ ಮಾಡಿದೆ.
ಹಾಗೇ ಇದಕ್ಕೆ ಕಾರಣವೂ ಇದೆ. ಈಗಾಗಲೇ ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟೆಸ್ಟ್ ಹಾಗೂ ಏಕದಿನ ಸರಣಿಗಳು ನಡೆದಿದ್ದವು. ಜೈವಿಕ ಸುರಕ್ಷತೆಯಲ್ಲಿ ನಡೆದ ಟೂರ್ನಿಯಲ್ಲಿ ಯಾವುದೇ ತೊಂದರೆಯಾಗಿಲ್ಲ. ಹೀಗಾಗಿ ಐಪಿಎಲ್ ಟೂರ್ನಿಗೂ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂಬ ನಂಬಿಕೆಯೂ ಇದೆ.
ಒಟ್ಟಿನಲ್ಲಿ ಬಹು ನಿರೀಕ್ಷಿತ ಐಪಿಎಲ್ ಟೂರ್ನಿಯನ್ನು ಆಯೋಜನೆ ಮಾಡಲು ಯುಎಇ ಜೊತೆಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯೂ ಮುಂದಾಗಿದೆ. ಆದ್ರೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಮಾತ್ರ ಬಿಗ್ ಬಾಸ್ ಬಿಸಿಸಿಐ.