ಸೌತ್ ಆಫ್ರಿಕಾ ತಂಡದ ಪ್ರಮುಖ ಆಟಗಾರರು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಿಂದ ಮಿಸ್ ಆಗುವ ಸಾಧ್ಯತೆ ಇದೆ.
ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಸೌತ್ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು, ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಆಡಲಿರುವ ಎಂಟು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಮುಖವಾಗಿ ವೇಗದ ಬೌಲರ್ಗಳಾದ ಕಗೀಸೋ ರಬಾಡ, ಲುಂಗಿ ಎನ್ಗಿಡಿ, ರಾಸಿ ವ್ಯಾನ್ ದರ್ ದುಸೇನ್, ಡೇವಿಡ್ ಮಿಲ್ಲರ್, ಕ್ವಿಂಟನ್ ಡಿಕಾಕ್, ಐಡೆನ್ ಮಾರ್ಕ್ರಂ, ಡ್ವೇನ್ ಪ್ರಿಟೋರಿಯನ್ ಹಾಗೂ ಮಾರ್ಕೋ ಜಾನ್ಸನ್ ಅವರುಗಳು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಡಲಿದ್ದಾರೆ.
ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ನಡುವೆ, ಮಾರ್ಚ್ 18-20ರವರೆಗೆ ಸೆಂಚುರಿಯನ್ ಹಾಗೂ ಜೊಹಾನ್ಸ್ಬರ್ಗ್ನಲ್ಲಿ ನಡೆಯಲಿದೆ. ಪ್ರತಿ ಆಟಗಾರ ಬಬಲ್ ಪ್ರವೇಶಿಸುವ ಮುನ್ನ ಮೂರು ದಿನಗಳ ಕಾಲ ಕಡ್ಡಾಯವಾಗಿ ಕ್ವಾರೆಂಟೇನ್ ಇರಬೇಕಿದೆ. ಈ ನಡುವೆ ಗಾಯದ ಸಮಸ್ಯೆಯಿಂದ ಚೇತರಿಕೆ ಕಾಣುತ್ತಿರುವ ಸೌತ್ ಆಫ್ರಿಕಾದ ವೇಗದ ಬೌಲರ್ ಅನ್ರಿಕ್ ನೊಕಿಯಾ, ಗಾಯದ ಸಮಸ್ಯೆಯಿಂದಾಗಿ ಐಪಿಎಲ್ನಿಂದ ಹೊರಗುಳಿದಿದ್ದಾರೆ.