IPL 2022- RR Vs KKR – ಮ್ಯಾಚ್ ನಂಬರ್ 47- ರಾಜಸ್ತಾನ ರಾಯಲ್ಸ್ ಗೆ ಕೆಕೆಆರ್ ಸವಾಲು –Rajasthan Royals probable playing XI

15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 47ನೇ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಮೇ 2ರಂದು ಮುಂಬೈ ನ ವಾಂಖೇಡೆ ಅಂಗಣದಲ್ಲಿ ನಡೆಯಲಿರುವ ಈ ಪಂದ್ಯ ಸಹಜವಾಗಿಯೇ ಕುತೂಹಲವನ್ನು ಕೆರಳಿಸಿದೆ.
ಸಾಲು ಸಾಲು ಐದು ಪಂದ್ಯಗಳನ್ನು ಸೋತಿರುವ ಕೆಕೆಆರ್ ತಂಡ ಸೋಲಿನಿಂದ ಹೊರಬರುತ್ತಾ ಅನ್ನೋದನ್ನು ಕಾದು ನೋಡಬೇಕು.
ಇನ್ನೊಂದೆಡೆ, ರಾಜಸ್ತಾನ ರಾಯಲ್ಸ್ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಅನುಭವಿಸಿದೆ. ಆದ್ರೂ ಆಡಿರುವ 9 ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದಿದೆ. ಮೂರು ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಾಜಸ್ತಾನ ರಾಯಲ್ಸ್ ಪ್ಲೇ ಸ್ಥಾನಕ್ಕೇರಲು ಈ ಪಂದ್ಯದಲ್ಲಿ ಗೆಲುವನ್ನೇ ಎದುರು ನೋಡುತ್ತಿದೆ.
ಹಾಗೇ ನೋಡಿದ್ರೆ, ರಾಜಸ್ತಾನ ರಾಯಲ್ಸ್ ತಂಡದಲ್ಲಿ ಇಂದಿನ ಪಂದ್ಯಕ್ಕೆ ಬದಲಾವಣೆ ಮಾಡುವ ಸಾಧ್ಯತೆಗಳಿಲ್ಲ.

ರನ್ ಮೆಷಿನ್ ಜೋಸ್ ಬಟ್ಲರ್ ತಂಡದ ಪ್ರಮುಖ ಪಿಲ್ಲರ್. ಹಾಗೇ ದೇವದತ್ ಪಡಿಕ್ಕಲ್ ದೊಡ್ಡ ಮಟ್ಟದ ಇನಿಂಗ್ಸ್ ಆಡಬೇಕಿದೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ಸಂಜು ಸ್ಯಾಮನ್, ಡೇರಿಲ್ ಮಿಟ್ಚೆಲ್ ಆಧಾರವಾಗಬೇಕಿದೆ. ಶಿಮ್ರೋನ್ ಹೆಟ್ಮೆರ್ ಮತ್ತು ರಿಯಾನ್ ಪರಾಗ್ ಅವರು ಮ್ಯಾಚ್ ಫಿನಿಶರ್ ಜವಾಬ್ದಾರಿಯನ್ನು ನಿಭಾಗಿಸಬೇಕಿದೆ.
ಇನ್ನು ರಾಜಸ್ತಾನ ರಾಯಲ್ಸ್ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಹೇಳುವುದೇ ಬೇಡ. ತಮ್ಮ ತಮ್ಮ ಜವಾಬ್ದಾರಿಗಳನ್ನು ಉತ್ತಮವಾಗಿಯೇ ನಿಭಾಯಿಸುತ್ತಿದ್ದಾರೆ. ಟ್ರೆಂಟ್ ಬೌಲ್ಟ್, ಪ್ರಸಿದ್ಧ ಕೃಷ್ಣ ಮತ್ತು ಕುಲದೀಪ್ ಸೇನ್ ಅವರು ಅತ್ಯುತ್ತಮ ಲಯದಲ್ಲಿರುವುದು ತಂಡದ ಚಿಂತೆಯನ್ನು ದೂರ ಮಾಡಿದೆ. ಹಾಗೇ ಆರ್. ಅಶ್ವಿನ್ ಮತ್ತು ಯುಜುವೇಂದ್ರ ಚಾಹಲ್ ಸ್ಪಿನ್ ಜಾದು ಎದುರಾಳಿ ತಂಡವನ್ನು ಕಂಗೆಡಿಸುತ್ತದೆ. IPL 2022- RR Vs KKR -Match No 47-Rajasthan Royals probable playing XI –

ಹಾಗಂತ ರಾಜಸ್ತಾನ ರಾಯಲ್ಸ್ ಮೈಮರೆತ್ರೆ ಅಪಾಯ ಕೂಡ ತಪ್ಪಿದ್ದಲ್ಲ. ಎರಡನೇ ಹಂತದ ಪ್ರತಿ ಪಂದ್ಯಗಳು ಕೂಡ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಚೆನ್ನೈ ಮತ್ತು ಮುಂಬೈ ತಂಡಗಳು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ರೂ ಮತ್ತೆ ಗೆಲುವಿನ ಲಯವನ್ನು ಕಂಡುಕೊಂಡಿವೆ. ಹೀಗಾಗಿ ಇನ್ನುಳಿದ ಪಂದ್ಯಗಳಲ್ಲಿ ಗೆಲುವಿನ ಜೊತೆಗೆ ರನ್ ರೇಟ್ ಅನ್ನು ಕೂಡ ಉತ್ತಮಪಡಿಸಿಕೊಳ್ಳಬೇಕಿದೆ.
ಒಟ್ಟಿನಲ್ಲಿ ರಾಜಸ್ತಾನ ರಾಯಲ್ಸ್ ಗೆಲ್ಲುವ ನೆಚ್ಚಿನ ತಂಡವಾಗಿದ್ರೂ, ಕೆಕೆಆರ್ ಠಕ್ಕರ್ ಕೊಟ್ರೂ ಅಚ್ಚರಿ ಏನಿಲ್ಲ.
ರಾಜಸ್ತಾನ ರಾಯಲ್ಸ್ ಪ್ಲೇಯಿಂಗ್ ಇಲೆವೆನ್
ಜೋಸ್ ಬಟ್ಲರ್
ದೇವದತ್ ಪಡಿಕ್ಕಲ್
ಸಂಜು ಸ್ಯಾಮನ್ (ನಾಯಕ- ವಿಕೆಟ್ ಕೀಪರ್)
ಡೆರಿನ್ ಮಿಟ್ಚೆಲ್
ಶಿಮ್ರೋನ್ ಹೆಟ್ಮೇರ್
ರಿಯಾನ್ ಪರಾಗ್
ಆರ್. ಅಶ್ವಿನ್
ಟ್ರೆಂಟ್ ಬೌಲ್ಟ್
ಪ್ರಸಿದ್ದ್ ಕೃಷ್ಣ
ಯುಜುವೇಂದ್ರ ಚಾಹಲ್
ಕುಲದೀಪ್ ಸೇನ್