IPL 2022- RR Vs KKR ಸೋಲಿನ ಸರಪಳಿಯಿಂದ ಹೊರಬರುತ್ತಾ ಕೆಕೆಆರ್ -Kolkata Knight Riders probable laying XI

ಮೇ 2. 15ನೇ ಆವೃತ್ತಿಯ ಐಪಿಎಲ್ ಟೂರ್ನಿ. ಮ್ಯಾಚ್ ನಂಬರ್ 47. ಸಮಯ ರಾತ್ರಿ 7.30. ಮುಂಬೈ ನ ವಾಂಖೇಡೆ ಅಂಗಣ. ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ತಾನ ರಾಯಲ್ಸ್ ನಡುವಿನ ಹಣಾಹಣಿ.
ಸಾಲು ಸಾಲು ಐದು ಪಂದ್ಯಗಳನ್ನು ಸೋತಿರುವ ಕೆಕೆಆರ್ ತಂಡದ ಆಟಗಾರರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಅದರಲ್ಲೂ ನಾಯಕ ಶ್ರೇಯಸ್ ಅಯ್ಯರ್ ಗೆ ತಂಡವನ್ನು ಸೋಲಿನಿಂದ ಪಾರು ಮಾಡುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ.
ಕೆಕೆಆರ್ ತಂಡದ ಪ್ಲೇ ಆಫ್ ಕನಸು ಬಹುತೇಕ ಭಗ್ನಗೊಂಡಿದೆ. ಆಡಿರುವ 9 ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. ಆರು ಪಂದ್ಯಗಳಲ್ಲಿ ಸೋತಿದೆ. ಇನ್ನುಳಿದ ಐದು ಪಂದ್ಯಗಳನ್ನು ಗೆದ್ರೂ ಕೂಡ ಪ್ಲೇ ಆಫ್ ಗೆ ಎಂಟ್ರಿ ಕೊಡುವುದು ಕಷ್ಟ. IPL 2022- RR Vs KKR – Kolkata Knight Riders probable laying XI

ಆದ್ರೂ ಕೆಕೆಆರ್ ತಂಡ ಪ್ರಯತ್ನವನ್ನಂತೂ ಮಾಡಲೇಬೇಕಿದೆ. ಇನ್ನೊಂದೆಡೆ ತಂಡದಲ್ಲಿ ಯಾವುದು ಕೂಡ ಸರಿ ಇಲ್ಲ ಎಂಬುದು ಬಹಿರಂಗಗೊಂಡಿರುವ ಸತ್ಯ. ಅದರಲ್ಲೂ ಹೆಡ್ ಕೋಚ್ ಬ್ರೆಂಡನ್ ಮೆಕಲಮ್ ಮತ್ತು ನಾಯಕ ಶ್ರೇಯಾಸ್ ಅಯ್ಯರ್ ನಡುವೆ ಹೊಂದಾಣಿಕೆ ಇಲ್ಲ ಎಂಬುದು ಕೂಡ ಗೊತ್ತಾಗಿದೆ.
ತಂಡದ ಕಾಂಬಿನೇಷನ್, ಬ್ಯಾಟಿಂಗ್ ಆರ್ಡರ್ ಸೇರಿದಂತೆ ನಾಯಕ ಮತ್ತು ಕೋಚ್ ನಡುವೆ ಗೊಂದಲಗಳಿರುವುದು ಸತ್ಯ. ಹೀಗಾಗಿ ಕೆಕೆಆರ್ ಗೊಂದಲಗಳ ನಡುವೆಯೇ ಬಲಿಷ್ಠ ರಾಜಸ್ತಾನ ರಾಯಲ್ಸ್ ತಂಡವನ್ನು ಎದುರಿಸಬೇಕಿದೆ.
ಮೇಲ್ನೋಟಕ್ಕೆ ಕೆಕೆಆರ್ ತಂಡ ಬಲಿಷ್ಠವಾಗಿದೆ. ತಂಡದಲ್ಲಿ ಸ್ಟಾರ್ ಆಟಗಾರರು ಇದ್ದಾರೆ. ಆದ್ರೆ ಸ್ಥಿರ ಪ್ರದರ್ಶನ ಮತ್ತು ಸಂಘಟಿತ ಆಟವನ್ನು ಆಡುತ್ತಿಲ್ಲ.
ಮುಖ್ಯವಾಗಿ ಸ್ಟಾರ್ ಪ್ಲೇಯರ್ಸ್ ನಿರೀಕ್ಷಿತ ಮಟ್ಟದಲ್ಲಿ ಆಡುತ್ತಿಲ್ಲ. ಆರಂಭಿಕ

ವೆಂಕಟೇಶ್ ಅಯ್ಯರ್ ವೈಫಲ್ಯ ತಂಡಕ್ಕೆ ಮೈನಸ್ ಆಗುತ್ತಿದೆ. ಇನ್ನು ಆರೋನ್ ಫಿಂಚ್, ಆಂಡ್ರ್ಯೂ ರಸೆಲ್, ಸುನೀಲ್ ನರೇನ್ ಬ್ಯಾಟಿಂಗ್ ನಲ್ಲಿ ಸ್ಥಿರ ಆಟವನ್ನಾಡುತ್ತಿಲ್ಲ. ಪ್ಯಾಟ್ ಕಮಿನ್ಸ್ ಕೂಡ ಆಲ್ ರೌಂಡವನ್ನಾಡುತ್ತಿಲ್ಲ. ನಾಯಕ ಶ್ರೇಯಸ್ ಅಯ್ಯರ್ ಮತ್ತು ನಿತೇಶ್ ರಾಣಾ ಜವಾಬ್ದಾರಿಯಿಂದ ಆಡಿದ್ರೂ ತಂಡವನ್ನು ಗೆಲುವಿನ ದಡ ಸೇರಿಸಲು ಆಗುತ್ತಿಲ್ಲ. ಉಮೇಶ್ ಯಾದವ್, ವರುಣ್ ಚಕ್ರವರ್ತಿ ಪರಿಣಾಮಕಾರಿಯಾಗುತ್ತಿಲ್ಲ.
ಹೀಗೆ ಸಮಸ್ಯೆಗಳ ಸುಳಿವಿನಲ್ಲಿರುವ ಕೆಕೆಆರ್ ತಂಡ ಸೋಲಿನ ಸರಪಳಿಯಿಂದ ಹೊರಬರಲು ಒದ್ದಾಟ ನಡೆಸುತ್ತಿದೆ. ಇನ್ನೊಂದೆಡೆ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ರಾಜಸ್ತಾನ ಬೌಲರ್ ಗಳ ಎದುರು ಕೆಕೆಆರ್ ಬ್ಯಾಟ್ಸ್ ಮೆನ್ ಗಳು ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಅನ್ನೋದನ್ನು ಕಾದು ನೋಡಬೇಕು.
ಕೆಕೆಆರ್ ಪ್ಲೇಯಿಂಗ್ ಇಲೆವೆನ್
ಆರೋನ್ ಫಿಂಚ್
ವೆಂಕಟೇಶ್ ಅಯ್ಯರ್
ಶ್ರೇಯಸ್ ಅಯ್ಯರ್ (ನಾಯಕ)
ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್ )
ನಿತೇಶ್ ರಾಣಾ
ಆಂಡ್ರೆ ರಸೇಲ್
ಸುನೀಲ್ ನರೇನ್
ಆಮಾನ್ ಖಾನ್
ಪ್ಯಾಟ್ ಕಮಿನ್ಸ್
ಉಮೇಶ್ ಯಾದವ್
ವರುಣ್ ಚಕ್ರವರ್ತಿ