ವಿರಾಟ್ ಕೊಹ್ಲಿ (Virat Kohli) ಆರ್ಸಿಬಿ (Royal Challengers Bangalore) ನಾಯಕತ್ವದಿಂದ ಕೆಳಗಿಳಿದ ಮೇಲೆ ಮುಂದಿನ ನಾಯಕ ಯಾರು ಅನ್ನುವ ದೊಡ್ಡ ಪ್ರಶ್ನೆ ಇದೆ. ಅತ್ತ ರೆಡಿಮೆಡ್ ಕ್ಯಾಪ್ಟನ್ನಂತಿದ್ದ ಎಬಿಡಿ ವಿಲಿಯರ್ಸ್ (AB D Villiers) ಕೂಡ ಆಟಕ್ಕೆ ಗುಡ್ ಬೈ ಹೇಳಿದ್ದಾರೆ. ಈ ಮಧ್ಯೆ ಆರ್ಸಿಬಿ (RCB) ಹಲವು ಆಟಗಾರರನ್ನು ಕ್ಯಾಪ್ಟನ್ಸಿ ಮೆಟಿರೀಯಲ್ಗಳಾಗಿ ನೋಡುತ್ತಿದೆ.
ಶ್ರೇಯಸ್ ಅಯ್ಯರ್:
ಉದಯೋನ್ಮುಖ ಆಟಗಾರ ಶ್ರೇಯಸ್ ಅಯ್ಯರ್ (Shreyas Iyer) ಮೇಲೆ ರಾಯಲ್ ಚಾಲೆಂಜರ್ಸ್ ಕಣ್ಣಿಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಮುನ್ನಡೆಸಿ ಫೈನಲ್ಗೆ ಕೊಂಡೊಯ್ದು ಅನುಭವ ಶ್ರೇಯಸ್ಗಿದೆ. ಭಾಷೆ ಹಾಗೂ ನಡತೆಯಲ್ಲೂ ಶ್ರೇಯಸ್ ಕೂಲ್ ಆಗಿದ್ದಾರೆ. ಹೀಗಾಗಿ ಹರಾಜಿನಲ್ಲಿ ದೊಡ್ಡ ಮೊತ್ತ ಕೊಟ್ಟು ಇವರನ್ನು ಖರೀದಿ ಮಾಡಲು ಆರ್ಸಿಬಿ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.
ಗ್ಲೆನ್ ಮ್ಯಾಕ್ಸ್ವೆಲ್:
ಆಸ್ಟ್ರೇಲಿಯಾದ (Australia) ಈ ಸೂಪರ್ ಹಿಟ್ಟರ್ ಕಳೆದ ಬಾರಿ ಆರ್ಸಿಬಿ ಪರ ಸ್ಥಿರ ಪ್ರದರ್ಶನ ನೀಡಿದ್ದರು. ಈ ಹಿಂದೆ ಪಂಜಾಬ್ ತಂಡವನ್ನು ಮ್ಯಾಕ್ಸಿ ಮುನ್ನಡೆಸಿದ್ದರು. ಆದರೆ ಮ್ಯಾಕ್ಸಿ ಎಲ್ಲಾ ಸೀಸನ್ ಗಳಲ್ಲೂ ಒಂದೇ ರೀತಿಯ ಪ್ರದರ್ಶನ ನೀಡುತ್ತಾರೆ ಅನ್ನುವ ಹಾಗಿಲ್ಲ. ಅಸ್ಥಿರ ಪ್ರದರ್ಶನಗಳು ಮ್ಯಾಕ್ಸಿಗೆ ಕ್ಯಾಪ್ಟನ್ಸಿ ನೀಡಲು ಹಿಂದೆ ಮುಂದೆ ಯೋಚನೆ ಮಾಡುವಂತೆ ಮಾಡಿದೆ.
ಡೇವಿಡ್ ವಾರ್ನರ್
ಐಪಿಎಲ್ ಟ್ರೋಫಿ (IPL Trophy) ಎತ್ತಿ ಹಿಡಿದ ಕೆಲವೇ ಕೆಲವು ನಾಯಕರುಗಳಲ್ಲಿ ಡೇವಿಡ್ ವಾರ್ನರ್ (David Warner) ಕೂಡ ಒಬ್ಬರು. ಕಳೆದ ಬಾರಿ ಸನ್ ರೈಸರ್ಸ್ (Sun Risers Hyderbad) ಇವರನ್ನು ಕ್ಯಾಪ್ಟನ್ಸಿಯಿಂದ ಬಿಡುಗಡೆಗೊಳಿಸಿತ್ತು. ಆದರೆ ಆರ್ಸಿಬಿ ಈ ಅನುಭವಿಯನ್ನು ನಾಯಕನನ್ನಾಗಿ ಮಾಡುವ ಸಾಧ್ಯತೆ ಇದೆ. ಅಷ್ಟಕ್ಕೂ ವಾರ್ನರ್ ಹರಾಜಿನಲ್ಲಿ ಹಾಟ್ ಫೆವರೀಟ್ ಆಟಗಾರ ಅನ್ನುವ ಬಗ್ಗೆ ಎರಡು ಮಾತಿಲ್ಲ.
ದೇವದತ್ ಪಡಿಕಲ್:
ಕಳೆದ ಎರಡು ಐಪಿಎಲ್ಗಳಲ್ಲಿ ಆರ್ಸಿಬಿ ಆರಂಭಿಕ ಸ್ಥಾನವನ್ನು ಯಶಸ್ವಿಯಾಗಿ ತುಂಬಿದ್ದು ದೇವದತ್ ಪಡಿಕಲ್ (Devdutt Padikkal). ಸದ್ಯ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆಯುವ ಕನಸಿನಲ್ಲಿರುವ ಡಿಡಿಪಿ ಆರ್ಸಿಬಿ ನಾಯತ್ವ ಹಿಡಿಯುವ ಫೆವರೀಟ್ಗಳಲ್ಲಿ ಒಬ್ಬರು.
ಮನೀಷ್ ಪಾಂಡೆ:
ವಿರಾಟ್ ಕೊಹ್ಲಿಯಷ್ಟೇ ಐಪಿಎಲ್ನಲ್ಲಿ ಅನುಭವಿ ಆಟಗಾರ ಮನೀಷ್ ಪಾಂಡೆ (Manish Pandey). ಮೊದಲ ಸೀಸನ್ನಿಂದಲೂ ಆಡುತ್ತಿರುವ ಮನೀಷ್ ಹಲವು ಫ್ರಾಂಚೈಸಿಗಳಿಗೆ ಆಡಿದ್ದಾರೆ. ಕರ್ನಾಟಕ ತಂಡವನ್ನು ಮುನ್ನಡೆಸಿದ ಅನುಭವ ಇದೆ. ಹರಾಜಿನಲ್ಲೂ ಪಾಂಡೆ ಉತ್ತಮ ಮೊತ್ತ ಪಡೆಯುವುದು ಗ್ಯಾರೆಂಟಿ. ಮನೀಷ್ ಆರ್ಸಿಬಿಗೆ ಸೂಕ್ತ ಆಯ್ಕೆ ಅನ್ನುವುದು ಕೂಡ ನಿಜ