ಇಂಡಿಯನ್ ಸೂಪರ್ ಲೀಗ್ (ಐಪಿಎಲ್) ಹದಿನೈದನೇ ಆವೃತ್ತಿಯಲ್ಲಿ ಸೇರ್ಪಡೆಯಾಗುತ್ತಿರುವ ಎರಡು ಹೊಸ ತಂಡಗಳ ಪೈಕಿ ಒಂದಾದ ಲಖನೌ ಸೂಪರ್ ಜೈಂಟ್ಸ್ ತಂಡದ ಲೋಗೋ ಬಿಡುಗಡೆ ಮಾಡಲಾಗಿದೆ.
ಅಹಮದಾಬಾದ್ ಫ್ರಾಂಚೈಸಿ ಹಾಗೂ ಲಖನೌ ಫ್ರಾಂಚೈಸಿ, ಐಪಿಎಲ್ ಹದಿನೈದನೇ ಆವೃತ್ತಿಯಲ್ಲಿ ಪಾಲ್ಗೊಳ್ಳಲಿದ್ದು, ಲಖನೌ ತಂಡ ತಂಡದ ಹೆಸರನ್ನು ಘೋಸಿದ್ದು, ಈಗ ತಂಡದ ಲೋಗೋ ಕೂಡ ಬಿಡುಗಡೆ ಮಾಡಿದೆ. ಆದರೆ ಅಹಮದಾಬಾದ್ ಫ್ರಾಂಚೈಸಿ ಇನ್ನೂ ತನ್ನ ತಂಡದ ಹೆಸರನ್ನು ಘೋಸಿಲ್ಲ.
ಈಗಾಗಲೇ ತಂಡದ ಹೆಸರನ್ನು ಘೋಸಿರುವ ಲಖನೌ ಫ್ರಾಂಚೈಸಿ, ಈಗ ತಂಡದ ಲೋಗೋ ಅನ್ನು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಬಿಡುಗಡೆಗೊಳಿಸಿದೆ.
ಸಂಜೀವ್ ಗೊಯಂಕಾ ಮಾಲೀಕತ್ವದ ಲಖನೌ ಫ್ರಾಂಚೈಸಿಗೆ ಈ ಹಿಂದೆ ಇದೇ ಸಂಜೀವ್ ಗೊಯಂಕಾ ಮಾಲೀಕರಾಗಿದ್ದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಹೆಸರನ್ನೇ ಬಳಸಲಾಗಿದೆ.
ಲಖನೌ ಸೂಪರ್ ಜೈಂಟ್ಸ್ ತಂಡದ ಲೋಗೋ “ನ್ಯಾಸದ ಬಗ್ಗೆ ಹೇಳುವುದಾದರೆ, ಚೆಂಡನ್ನು ಹೊಂದಿರುವಂತಹ ಬ್ಯಾಟ್ ಮಧ್ಯದಲ್ಲಿದ್ದು, ಅದರ ಎಡ ಬದಿ ಹಾಗೂ ಬಲ ಬದಿಗಳಲ್ಲಿ ತ್ರಿವರ್ಣ ಧ್ವಜದ ರೆಕ್ಕೆಗಳಿವೆ.
ಈ ಲೋಗೋದಲ್ಲಿ ಬಳಸಿರುವ ರೆಕ್ಕೆಯ ವಿನ್ಯಾಸವನ್ನು ಹಿಂದೂ ಪುರಾಣದ ಶ್ರೇಷ್ಠ ಪಕ್ಷಿ ಎಂದೇ ಕರೆಸಿಕೊಂಡಿರುವ ಗರುಡನಿಂದ ಸ್ಫೂರ್ತಿ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.
ಈ ರೆಕ್ಕೆಗಳಿಗೆ ಭಾರತ ದೇಶದ ಧ್ವಜದ ಬಣ್ಣಗಳಾದ ಕೇಸರಿ, ಬಿಳಿ ಮತ್ತು ಹಸಿರನ್ನು ಬಳಸಲಾಗಿದ್ದು, ಆ ಮೂಲಕ ಲಖನೌ ಸೂಪರ್ ಜೈಂಟ್ಸ್ ತಂಡ ಕೇವಲ ಒಂದು ರಾಜ್ಯದ ತಂಡ ಮಾತ್ರವಾಗಿರದೆ ಇಡೀ ದೇಶದ ತಂಡ ಎಂಬುದನ್ನು ಪರೋಕ್ಷವಾಗಿ ತಿಳಿಸಲಾಗಿದೆ.
ಈ ಲೋಗೋದಲ್ಲಿ ಪಕ್ಷಿಯ ದೇಹಕ್ಕೆ ನೀಲಿ ಬಣ್ಣವನ್ನು ಬಳಸಲಾಗಿದ್ದು, ಲೋಗೋದಲ್ಲಿ ಬಳಸಲಾಗಿರುವ ಚೆಂಡಿಗೆ ಕೆಂಪು ಬಣ್ಣವನ್ನು ಬಳಸಲಾಗಿದೆ ಮತ್ತು ಇದು ಜೈ ತಿಲಕ ಎಂದು ಲಕ್ನೋ ಸೂಪರ್ ಜೈಂಟ್ಸ್ ಮಾಲೀಕರು ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಟ್ವೀಟ್ ಮಾಡಿದ್ದಾರೆ.