IPL 2022- RCB – ಫಾಫ್ ಡು ಪ್ಲೆಸಸ್ ಆರ್ ಸಿಬಿಯ ಕ್ಯಾಪ್ಟನ್.. ಆದ್ರೂ ವಿರಾಟ್ ಕೊಹ್ಲಿಯೇ ಲೀಡರ್…!
ಆರ್ ಸಿಬಿಯ ನೂತನ ಕ್ಯಾಪ್ಟನ್ ಫಾಪ್ ಡುಪ್ಲೇಸಸ್ ಅಸಾಮಾನ್ಯ ಆಟಗಾರ. ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಡುಪ್ಲೇಸಸ್ ಒಬ್ಬ ಆಟಗಾರನಾಗಿ, ನಾಯಕನಾಗಿ ಅದ್ಭುತವಾದ ಸಾಧನೆಯನ್ನು ಮಾಡಿದ್ದಾರೆ.
ಐಪಿಎಲ್ ನ ನಾಯಕತ್ವ ಫಾಫ್ ಡುಪ್ಲೆಸಸ್ ಹೊಸ ಜವಾಬ್ದಾರಿ. ಹಾಗಂತ ನಾಯಕತ್ವದಲ್ಲಿ ಅನನುಭವಿ ಎಂದು ಹೇಳುವ ಹಾಗಿಲ್ಲ. ದಕ್ಷಿಣ ಆಫ್ರಿಕಾ ತಂಡದ ನಾಯಕನಾಗಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿದ್ದಾರೆ. ಹಾಗೇ ನಾಯಕನ ಟ್ರಾö್ಯಕ್ ರೆಕಾರ್ಡ್ನಲ್ಲಿ ಫಾಪ್ ಡುಪ್ಲೇಸಸ್ ಅವರು ವಿರಾಟ್ ಕೊಹ್ಲಿಗಿಂತ ಕಮ್ಮಿ ಏನು ಇಲ್ಲ. ಅಲ್ಲದೆ ಬಿಗ್ ಮ್ಯಾಚ್ ವಿನ್ನರ್ ಎಂಬ ಹೆಗ್ಗಳಿಕೆ ಫಾಪ್ ಡುಪ್ಲೇಸಸ್ ಗಿದೆ. ಅದನ್ನು ಅವರು ದಕ್ಷಿಣ ಆಫ್ರಿಕಾ ಪರವಾಗಿ ಮತ್ತು ಐಪಿಎಲ್ ನಲ್ಲಿ ಚೆನ್ನೆöÊ ತಂಡದ ಪರವಾಗಿ ಸಾಬೀತುಪಡಿಸಿದ್ದಾರೆ.
ಇನ್ನು ಫಾಫ್ ಡುಪ್ಲೇಸಸ್ ಅವರು ಒಬ್ಬ ಆಟಗಾರನಾಗಿ ವಿಶ್ವದ ಶ್ರೇಷ್ಠ ನಾಯಕರ ಗರಡಿಯಲ್ಲಿ ಆಡಿದ್ದಾರೆ. ದಕ್ಷಿಣ ಆಫ್ರಿಕಾ ಪರವಾಗಿ ಗ್ರೇಮ್ ಸ್ಮಿತ್ ಮತ್ತು ಎಬಿಡಿ ನಾಯಕತ್ವದಲ್ಲಿ ಆಡಿದ್ದಾರೆ. ಹಾಗೇ ಐಪಿಎಲ್ ನಲ್ಲಿ ಸಿಎಸ್ ಕೆ ತಂಡದ ಪರವಾಗಿ ೯ ವರ್ಷಗಳ ಕಾಲ ಆಡಿದ್ದಾರೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿಯವರ ನಾಯಕತ್ವದಲ್ಲಿ ಫಾಫ್ ಡುಪ್ಲೇಸಸ್ ಅವರು ೧೦ ವರ್ಷಗಳ ಕಾಲ ಆಡಿದ್ದಾರೆ.
ಇದೀಗ ಆರ್ ಸಿಬಿ ತಂಡದ ನಾಯಕನಾಗಿರುವ ಡುಪ್ಲೇಸಸ್ ಅವರು ಅಂತಾರಾಷ್ಟಿçÃಯ ಕ್ರಿಕೆಟ್ ಗೆ ವಿದಾಯ ಹೇಳಿರಬಹುದು. ಆದ್ರೆ ಬಿಗ್ ಬ್ಯಾಷ್, ಕೆರೆಬಿಯನ್ ಲೀಗ್, ಬಾಂಗ್ಲಾದೇಶ ಲೀಗ್, ಪಾಕಿಸ್ತಾನ ಸೂಪರ್ ಲೀಗ್‌ಗಳಲ್ಲಿ ಸಕ್ರಿಯವಾಗಿ ಆಡುತ್ತಿದ್ದಾರೆ. IPL 2022: Royal Challengers Bangalore Captain Faf du Plessis
ಆದ್ರೂ ಆರ್ ಸಿಬಿ ನಾಯಕತ್ವದ ಜವಾಬ್ದಾರಿಯನ್ನು ನಿಭಾಯಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ವಿಶ್ವ ಕ್ರಿಕೆಟ್ ನ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ, ಹೊಡಿಬಡಿ ಆಟಗಾರ ಗ್ಲೇನ್ ಮ್ಯಾಕ್ಸ್ ವೆಲ್ ಜೊತೆಗೆ ಅನುಭವಿ ಹಾಗೂ
ಯುವ ಆಟಗಾರರನ್ನು ಜೊತೆಯಾಗಿ ಮುನ್ನಡೆಸಿಕೊಂಡು ಹೋಗಬೇಕಾಗಿದೆ. ಅಷ್ಟೇ ಅಲ್ಲ, ಆರ್ ಸಿಬಿ ಅನ್ನೋ ಬ್ರಾö್ಯಂಡ್ ಗೆ ಸ್ವಲ್ಪನೂ ಕಪ್ಪುಚುಕ್ಕೆಯಾಗದಂತೆ ನೋಡಿಬೇಕಿದೆ. ಮತ್ತೊಂದೆಡೆ ಆರ್ ಸಿಬಿ ಅಭಿಮಾನಿಗಳ ನಿರೀಕ್ಷೆಗಳು ಬೆಟ್ಟದಷ್ಟಿವೆ. ಈ ಸಲ ಕಪ್ ನಮ್ದೆ ಅಂತ ಪ್ರತಿ ಐಪಿಎಲ್ ನಂತೆ ಈ ಐಪಿಎಲ್ ನಲ್ಲೂ ತಂಡದ ಮೇಲೆ ಒತ್ತಡ ಹೇರುತ್ತಿರುತ್ತಾರೆ. ಹೀಗಾಗಿ ಫಾಫ್ ಡುಪ್ಲೇಸಸ್ ಗೆ ಸಾಕಷ್ಟು ಸವಾಲುಗಳು ಇವೆ.
ಆದ್ರೆ ಈ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಕಷ್ಟವೇನೂ ಆಗಲ್ಲ. ವಿರಾಟ್ ಕೊಹ್ಲಿ ತಂಡದ ಲೀಡರ್ ಆಗಿರುವುದರಿಂದ ಕ್ಯಾಪ್ಟನ್ ಡುಪ್ಲೇಸಸ್ ಗೆ ತಂಡವನ್ನು ಮುನ್ನಡೆಸುವುದು ಅಷ್ಟೊಂದು ಕಷ್ಟವೇನೂ ಆಗಲ್ಲ.
ಒಟ್ಟಿನಲ್ಲಿ ಫಾಫ್ ಡುಪ್ಲೇಸಸ್ ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸುವ ವಿಶ್ವಾಸದಲ್ಲಿದ್ದಾರೆ. ಅವಕಾಶ ಸಿಕ್ಕಿದೆ. ತಂಡಕ್ಕೆ ಹೊರಗಿನವನು ಅನ್ನೋ ಭಾವನೆ ಬರಬಹುದು. ಆದ್ರೆ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯಬೇಕು. ಅದನ್ನು ಧೋನಿಯಿಂದ ಕಲಿತಿರುವ ಡುಪ್ಲೇಸಸ್‌ಗೆ ವಿರಾಟ್ ಕೊಹ್ಲಿಯವರ ಆಕ್ರಮಣಕಾರಿ ಪ್ರವೃತ್ತಿಯೂ ಪ್ಲಸ್ ಪಾಯಿಂಟ್ ಆಗಬಹುದು. ಹಾಗಂತ ಫಾಫ್ ಡುಪ್ಲೇಸಸ್ ಯಾರನ್ನು ಕೂಡ ಅನುಕರಣೆ ಮಾಡುವುದಿಲ್ಲ. ಹಳೆಯ ತಂಡಗಳಲ್ಲಿ ಕಲಿತಿರುವ ಪಾಠವನ್ನು ಮುಂದಿನ ದಿನಗಳಲ್ಲಿ ಆರ್ ಸಿಬಿಯಲ್ಲಿ ತನ್ನದೇ ಶೈಲಿಯಲ್ಲಿ ಅಳವಡಿಸಿಕೊಳ್ಳಲಿದ್ದಾರೆ. ಯಾಕಂದ್ರೆ ಫಾಪ್ ಡು ಪ್ಲೇಸಸ್ ಧೋನಿಯಾಗಲ್ಲ. ವಿರಾಟ್ ಕೊಹ್ಲಿಯೂ ಆಗಲ್ಲ. ಫಾಪ್ ಡುಪ್ಲೇಸಸ್ ಅಂದ್ರೆ ಫಾಫ್ ಡುಪ್ಲೇಸಸ್. ಆರ್ ಸಿಬಿಯ ಲಯನ್.. !