IPL 2022 – ರೆಡ್ -ಡಾರ್ಕ್ ಬ್ಲೂ ನಲ್ಲಿ ಆರ್ ಸಿಬಿ ಸಿಂಹಗಳು.. ಹೊಸ ಲುಕ್, ಹೊಸ ಜೆರ್ಸಿ.. ಹೊಸ ಕ್ಯಾಪ್ಟನ್.. ಆರ್ ಸಿಬಿ ಶೈನಿಂಗ್..!

ಅದ್ದೂರಿ ಕಾರ್ಯಕ್ರಮ.. ಪ್ರೀತಿಯ ಅಭಿಮಾನಿಗಳ ಸಮ್ಮುಖದಲ್ಲಿ ಆರ್ ಸಿಬಿ ತಂಡ ತನ್ನ ನೂತನ ನಾಯಕ ಮತ್ತು ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ.
ನಾಯಕನ ಹೆಸರನ್ನು ತುಂಬಾ ಗೌಪ್ಯವಾಗಿಟ್ಟುಕೊಂಡಿದ್ದ ಆರ್ ಸಿಬಿ ಹೈಕಮಾಂಡ್ ಕೊನೆಗೂ ಬಹಿರಂಗಪಡಿಸಿದೆ. ಸಿಎಸ್ ಕೆ ತಂಡದ ಪ್ರಮುಖ ಆಟಗಾರ, ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡು ಪ್ಲೇಸಸ್ ಅವರನ್ನು ಆರ್ ಸಿಬಿ ನೂತನ ನಾಯಕನಾಗಿ ಘೋಷಣೆ ಮಾಡಿದೆ.
ಇದರ ಬೆನ್ನಲ್ಲೇ ೧೫ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಆರ್ ಸಿಬಿ ತಂಡ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ರೆಡ್ ಮತ್ತು ಡಾರ್ಕ್ ಬ್ಲೂ ಬಣ್ಣದ ಜೆರ್ಸಿಯಲ್ಲಿ ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ಆಟಗಾರರು ಕಣಕ್ಕಿಳಿಯಲಿದ್ದಾರೆ. IPL 2022 RCB Jersey

ಆರ್ ಸಿಬಿಯ ಹೊಸ ಜೆರ್ಸಿ ಬಗ್ಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಪುಳಕಗೊಂಡಿದ್ದಾರೆ. ಹೊಸ ಜೆರ್ಸಿಯ ವಿನ್ಯಾಸವನ್ನು ನಾನು ತುಂಬಾ ಇಷ್ಟಪಟ್ಟಿದ್ದೇನೆ. ಡಾರ್ಕ್ ಬ್ಲೂ ಮತ್ತು ರೆಡ್ ಕಲರ್ ನಲ್ಲಿರುವ ಜೆರ್ಸಿ ಆಮೇಝಿಂಗ್. ಧರಿಸಲು ಕೂಡ ತುಂಬಾ ಆರಾಮದಾಯಕವಾಗಿದೆ. ಹೊಸ ಜೆರ್ಸಿಯನ್ನು ಧರಿಸಿದ ಕೂಡಲೇ ನನಗೆ ವಿಶೇಷ ಅನ್ನಿಸಿಬಿಟ್ಟಿತ್ತು. ಹೊಸ ಜೆರ್ಸಿ ನನ್ನ ಅಚ್ಚುಮೆಚ್ಚಿನ ಆರ್ ಸಿಬಿ ಜೆರ್ಸಿಯಾಗಿದೆ ಎಂದು ವಿರಾಟ್ ಕೊಹ್ಲಿ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಆರ್ ಸಿಬಿ ತಂಡ ಹೊಸ ನಾಯಕ, ಹೊಸ ಜೆರ್ಸಿ, ಹೊಸ ಹುರುಪಿನೊಂದಿಗೆ ೨೦೨೨ರ ಐಪಿಎಲ್ ನಲ್ಲಿ ಆಡಲಿದೆ. ಕಳೆದ ಐಪಿಎಲ್ ನಲ್ಲಿ ಆರ್ ಸಿಬಿ ತಂಡ ಉತ್ತಮ ಪ್ರದರ್ಶನವನ್ನು ನೀಡಿತ್ತು. ಲೀಗ್ ನಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದ ಆರ್ ಸಿಬಿ ಫ್ಲೇ ಆಫ್ ನಲ್ಲಿ ನಾಲ್ಕನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯ್ತು.
ಕಳೆದ ೧೪ ವರ್ಷಗಳಿಂದ ಕಪ್ ಗೆಲ್ಲಲು ಒದ್ದಾಟ ನಡೆಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯಾದ್ರೂ ಕಪ್ ಗೆಲ್ಲುತ್ತಾ ಅನ್ನೋದನ್ನು ಕಾದು ನೋಡಬೇಕು.