IPL 2022- ಆರ್ ಸಿಬಿಯ ರಣ ಬೇಟೆಗಾರ ಗ್ಲೇನ್ ಮ್ಯಾಕ್ಸ್ ವೆಲ್..!

15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲು – ಗೆಲುವಿನ ರುಚಿಯನ್ನು ಕಂಡಿದೆ.
ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋತ ನಂತರ ಆರ್ ಸಿಬಿ ಎರಡನೇ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಮೂರು ವಿಕೆಟ್ ಗಳಿಂದ ಸೋಲಿಸಿ ರೋಚಕ ಜಯ ಸಾಧಿಸಿದೆ.
ಮೊದಲ ಪಂದ್ಯದಲ್ಲಿ ಬ್ಯಾಟ್ಸ್ ಮೆನ್ ಗಳು ಅಬ್ಬರಿಸಿದ್ರೆ, ಬೌಲರ್ ಗಳು ನಿರಾಸೆ ಮೂಡಿಸಿದ್ರು. ಆದ್ರೆ ಎರಡನೇ ಪಂದ್ಯದಲ್ಲಿ ಬೌಲರ್ ಗಳು ಲಯಕಂಡುಕೊಂಡ್ರೆ, ಸ್ಟಾರ್ ಬ್ಯಾಟ್ಸ್ ಮೆನ್ ಗಳು ಕೈಕೊಟ್ರು.
ಇದೀಗ ಆರ್ ಸಿಬಿ ಏಪ್ರಿಲ್ 5ರಂದು ರಾಜಸ್ತಾನ ರಾಯಲ್ಸ್ ವಿರುದ್ಧ ಮೂರನೇ ಪಂದ್ಯವನ್ನು ಆಡಲಿದೆ.
ಸದ್ಯದ ಮಟ್ಟಿಗೆ ಆರ್ ಸಿಬಿ ತಂಡಕ್ಕೆ 11ರ ಬಳಗದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದ್ರೂ ಆಸ್ಟ್ರೇಲಿಯಾ ಆಟಗಾರರ ಅನುಪಸ್ಥಿತಿ ಕಾಡುತ್ತಿದೆ. ಮುಖ್ಯವಾಗಿ ತಂಡದ ರಣ ಬೇಟೆಗಾರ ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ಘಾತಕ ವೇಗಿ ಜೋಶ್ ಹ್ಯಾಝಲ್ ವುಡ್. ಇವರಿಬ್ಬರು ಏಪ್ರಿಲ್ 5ರಂದು ನಡೆಯಲಿರುವ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ.
ಈಗಾಗಲೇ ಗ್ಲೇನ್ ಮ್ಯಾಕ್ಸ್ ವೆಲ್ ಅವರು ಮದುವೆ ಶಾಸ್ತ್ರ ಮುಗಿಸಿಕೊಂಡಿದ್ದಾರೆ. ಭಾರತೀಯ ಮೂಲದ ತಮಿಳುನಾಡಿನ ವಿನಿ ರಾಮನ್ ಜೊತೆ ಮದುವೆಯಾಗಿರುವ ಗ್ಲೇನ್ ಮ್ಯಾಕ್ಸ್ ವೆಲ್ ಅವರು ಸಾಮಾಜಿಕ ಜಾಲ ತಾಣದಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ. ಆರ್ ಸಿಬಿ ಅಭಿಮಾನಿಗಳು ಗ್ಲೇನ್ ಮ್ಯಾಕ್ಸ್ ವೆಲ್ ಯಾವಾಗ ಆಡ್ತಾರೆ ಅಂತ ಕೇಳುತ್ತಿದ್ದಾರೆ.
ಹೌದು, ಗ್ಲೇನ್ ಮ್ಯಾಕ್ಸ್ ವೆಲ್ ಅವರು ಏಪ್ರಿಲ್ ಮೊದಲ ವಾರ ಆರ್ ಸಿಬಿ ಕ್ಯಾಂಪ್ ಅನ್ನು ಸೇರಿಕೊಳ್ಳುತ್ತಾರೆ. ಆದ್ರೆ ಮೂರನೇ ಪಂದ್ಯಕ್ಕೆ ಮಾತ್ರ ಅಲಭ್ಯರಾಗುತ್ತಾರೆ.

ಇದಕ್ಕೆ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾ. ಐಪಿಎಲ್ ನಲ್ಲಿ ಆಡುವ ಆಸ್ಟ್ರೇಲಿಯಾದ ಗುತ್ತಿಗೆ ಆಟಗಾರರು ಏಪ್ರಿಲ್ 6ರವರೆಗೆ ಐಪಿಎಲ್ ನಲ್ಲಿ ಆಡಬಾರದು ಎಂದು ತಾಕೀತು ಮಾಡಿದೆ.
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪಾಕ್ ಪ್ರವಾಸ ಏಪ್ರಿಲ್ 6ಕ್ಕೆ ಕೊನೆಗೊಳ್ಳುತ್ತದೆ. ಆ ನಂತರ ಆಸೀಸ್ ಆಟಗಾರರು ಐಪಿಎಲ್ ನಲ್ಲಿ ಆಡಬಹುದು. ಹೀಗಾಗಿ ಗ್ಲೇನ್ ಮ್ಯಾಕ್ಸ್ ವೆಲ್ ಮತ್ತು ಜೋಶ್ ಹ್ಯಾಝಲ್ ವುಡ್ ಅವರು ಆರ್ ಸಿಬಿಯ ನಾಲ್ಕನೇ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ.
ಈಗಾಗಲೇ ಗ್ಲೇನ್ ಮ್ಯಾಕ್ಸ್ ವೆಲ್ ಅವರು ಆರ್ ಸಿಬಿ ಅಭಿಮಾನಿಗಳ ಪ್ರೀತಿಯನ್ನು ಗಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದ ಮ್ಯಾಕ್ಸ್ ವೆಲ್ ಅವರನ್ನು ಆರ್ ಸಿಬಿ ರಿಟೇನ್ ಕೂಡ ಮಾಡಿಕೊಂಡಿತ್ತು. ಇನ್ನೊಂದೆಡೆ ಹೊಸ ನಾಯಕನ ಸಾರಥ್ಯದಲ್ಲಿ ಆರ್ ಸಿಬಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಮೂಡಿಸಿದೆ. ಮತ್ತೊಂದೆಡೆ ಮ್ಯಾಕ್ಸ್ ವೆಲ್ ಕೂಡ ತಂಡವನ್ನು ಸೇರಿಕೊಂಡ್ರೆ ಆರ್ ಸಿಬಿ ಮತ್ತಷ್ಟು ಬಲಿಷ್ಠವಾಗುತ್ತದೆ ಎಂಬುದು ಅಭಿಮಾನಿಗಳ ಅಭಿಮತವಾಗಿದೆ.
ಹಾಗೇ ನೋಡಿದ್ರೆ, ಗ್ಲೇನ್ ಮ್ಯಾಕ್ಸ್ ವೆಲ್ ಅವರು ಐಪಿಎಲ್ ನಲ್ಲಿ ಅಷ್ಟೊಂದು ಅದ್ಭುತವಾದ ಪ್ರದರ್ಶನ ನೀಡಿಲ್ಲ. ಈ ಹಿಂದೆ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿರುವಾಗ ಮ್ಯಾಕ್ಸ್ ವೆಲ್ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯ್ತು. ಸೆಹ್ವಾಗ್ ಅವರಂತೂ ನೇರವಾಗಿ ಮ್ಯಾಕ್ಸ್ ವೆಲ್ ವಿರುದ್ಧ ಟೀಕೆ ಮಾಡಿದ್ದರು. ಆದ್ರೆ ಕಳೆದ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು.

ಅಲ್ಲದೆ ಮ್ಯಾಕ್ಸ್ ವೆಲ್ ಕಳೆದ ಒಂದು ವರ್ಷದಿಂದ ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಅಪಾಯಕಾರಿ ಬ್ಯಾಟ್ಸ್ ಮೆನ್ ಆಗಿರುವ ಮ್ಯಾಕ್ಸ್ ವೆಲ್ ಅವರು ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮಥ್ರ್ಯ ಮತ್ತು ಪ್ರತಿಭೆಯೂ ಇದೆ. ಈ ಬಾರಿಯ ಬಿಗ್ ಬ್ಯಾಷ್ ಟೂರ್ನಿಯಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದರು. ಹೀಗಾಗಿ ಗ್ಲೇನ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. IPl 2022 – RCB – When will Glenn Maxwell join Royal Challengers Bangalore camp ?
ಒಟ್ಟಿನಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಅವರನ್ನು ಆರ್ ಸಿಬಿ ಕೆಜಿಎಫ್ ಮಾದರಿಯಲ್ಲಿ ಬಿಲ್ಡಪ್ ಕೊಡುತ್ತಿದೆ. ಕೊಹ್ಲಿ, ಗ್ಲೇನ್ ಮ್ಯಾಕ್ಸ್ ವೆಲ್, ಫಾಫ್ ಡುಪ್ಲೆಸಸ್ ಅವರನ್ನು ಕೆಜಿಎಫ್ ಅಂತನೂ ವೈರಲ್ ಮಾಡಲಾಗುತ್ತಿದೆ. ರಣ ಬೇಟೆಗಾರ ಗ್ಲೇನ್ ಮ್ಯಾಕ್ಸ್ ವೆಲ್ ಈ ಬಾರಿಯ ಐಪಿಎಲ್ ನಲ್ಲಿ ಸದ್ದು ಮಾಡ್ತಾರೋ ಇಲ್ವೋ ಅನ್ನೋದನ್ನು ಕಾದು ನೋಡೋಣ.