Monday, September 25, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Woman’s World Cup: ಡ್ಯಾನಿ ವ್ಯಾಟ್​​​ ಶತಕದ ಸಂಭ್ರಮ, ಸೆಮಿಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಹೀನಾಯ ಸೋಲಿನ ಶಾಕ್​​

March 31, 2022
in Cricket, ಕ್ರಿಕೆಟ್
Woman’s World Cup: ಡ್ಯಾನಿ ವ್ಯಾಟ್​​​ ಶತಕದ ಸಂಭ್ರಮ, ಸೆಮಿಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಹೀನಾಯ ಸೋಲಿನ ಶಾಕ್​​
Share on FacebookShare on TwitterShare on WhatsAppShare on Telegram

ದಕ್ಷಿಣ ಅಫ್ರಿಕಾ ಫೈನಲ್​​​​ಗೇರುವ ಫೆವರೀಟ್​​ ಆಗಿತ್ತು. ಆದರೆ ಹಾಲಿ ಚಾಂಪಿಯನ್​​ ಇಂಗ್ಲೆಂಡ್​​ ತನ್ನೆಲ್ಲಾ ಶಕ್ತಿಯನ್ನು ಸಂಘಟಿತ ಆಡದ ಮೇಲೆ ಹಾಕಿತ್ತು. ಸೆಮಿಫೈನಲ್​​ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಇಂಗ್ಲೆಂಡ್​​ 137 ರನ್​​ಗಳಿಂದ ಮಣಿಸಿತು. ಆಸ್ಟ್ರೇಲಿಯಾ ವಿರುದ್ಧದ ಫೈನಲ್​​ ಪಂದ್ಯಕ್ಕೆ ಇಂಗ್ಲೆಂಡ್​​​​​​​​​​​​​​ ಟಿಕೆಟ್​​ ಪಡೆದುಕೊಂಡಿತು.

ಮೊದಲು ಬ್ಯಾಟಿಂಗ್​​ ಮಾಡಿದ ಇಂಗ್ಲೆಂಡ್​​ 77 ರನ್​​ಗಳಿಗೆ 3 ವಿಕೆಟ್​​ ಕಳೆದುಕೊಂಡಿತ್ತು. ಟಾಮಿ ಬಿಮೌಂಟ್​​ (7), ನಾಯಕಿ ಹೀದರ್​​ ನೈಟ್​​ (1) ಮತ್ತು ನ್ಯಾಟ್​​ ಸಿವಿರ್​​ (15)ರನ್​ಗಳಿಸಿ ಔಟಾಗಿದ್ದರು. ಇನ್ನೊಂದು ಕಡೆ ಡ್ಯಾನಿ ವ್ಯಾಟ್​​​ ಬಿರುಸಾಗಿ ಆಡುತ್ತಾ ರನ್​​ ರೇಟ್​​ ಕಡಿಮೆ ಆಗದಂತೆ ನೋಡಿಕೊಂಡಿದ್ದರು.

ವ್ಯಾಟ್​​​ಗೆ ಮೊದಲು ಏಮಿ ಜೋನ್ಸ್​​ (28) ಸಾಥ್​ ನೀಡಿದರು. ವ್ಯಾಟ್​​ ಅರ್ಧಶತಕದ ಸಂಭ್ರಮ ಆಚರಿಸಿಕೊಂಡರೂ ಜೋನ್ಸ್​​ ಔಟಾದರು. ಈ ಹಂತದಲ್ಲಿ ವ್ಯಾಟ್​​ಗೆ ಜೊತೆಯಾದ ಸೋಫಿಯಾ ಡಂಕ್ಲಿ 5ನೇ ವಿಕೆಟ್​ಗೆ 116 ರನ್​​ಗಳ ಜೊತೆಯಾಟ ಕಟ್ಟಿ ಇಂಗ್ಲೆಂಡ್​​​ನ ಬೃಹತ್​​ ಮೊತ್ತಕ್ಕೆ ಕಾರಣವಾದರು. ಅಬ್ಬರಿಸುತ್ತಾ ಸಾಗಿದ ವ್ಯಾಟ್​​ ಶತಕ ಸಂಭ್ರ ಆಚರಿಸಿದರು. ವ್ಯಾಟ್​​ 125 ಎಸೆತಗಳಲ್ಲಿ 129 ರನ್​​ಗಳಿಸಿ ಔಟಾದರು. ಡಂಕ್ಲಿ 60 ರನ್​​ಗಳ ಕೊಡುಗೆ ನೀಡಿದರು. ಕೊನೆಯಲ್ಲಿ ಸೋಫಿ ಎಕ್ಲಸ್ಟೋನ್​​ 11 ಎಸೆತಗಳಲ್ಲಿ 24 ರನ್​​ ಸಿಡಿಸಿದರು. ನಿಗದಿತ 50 ಓವರುಗಳಲ್ಲಿ ಇಂಗ್ಲೆಂಡ್​​ 8 ವಿಕೆಟ್​​ ಕಳೆದುಕೊಂಡು 293 ರನ್​​ಗಳಿಸಿತು.

ಸವಾಲಿನ ಮೊತ್ತ ಬೆನ್ನಟ್ಟಿದ ದಕ್ಷಿಣ ಅಫ್ರಿಕಾ ವಿಕೆಟ್​ ಮೇಲೆ ವಿಕೆಟ್​​ ಕಳೆದುಕೊಂಡಿತು. ವೇಗಿ ಅನ್ಯ ಶ್ರುಬ್ಸೋಲ್​​ ಡೇಂಜರಸ್​​​ ಆಟಗಾರ್ತಿ ಲಾರ ವೊಲ್ವಾರ್ಡ್​ (0) ಮತ್ತು ಲಿಝೆಲ್​​ ಲಿ (2) ವಿಕೆಟ್​​​ ವಿಕೆಟ್​​  ಪಡೆದರು. ನಾಯಕಿ ಸುನ್​ ಲಸ್​​ (21) ಕೇಟ್​​ ಕ್ರಾಸ್​​ಗೆ ವಿಕೆಟ್ ಒಪ್ಪಿಸಿದರು.  ಲಾರಾ ಗೂಡಲ್​​ (28) ಚಾರ್ಲಿ ಡೀನ್​ ಎಸೆತದಲ್ಲಿ ಕ್ಲೀನ್​​ ಬೌಲ್ಡ್​​ ಆದರು.

ಎಡಗೈ ಸ್ಪಿನ್ನರ್​​ ಸೋಫಿಯಾ ಎಕ್ಲಸ್ಟೋನ್​​ ದಕ್ಷಿಣ ಆಫ್ರಿಕಾದ ಆಟಗಾರ್ತಿಯರನ್ನು ಗಿರಗಿರನೆ ತಿರುಗಿಸಿದರು.  ಮರಿಝಾನ್​​ ಕಾಪ್​​ (21), ಚೋಲ್​​ ಟ್ರಯನ್​​ (3) ಮತ್ತು ಮಿಗ್ನಾನ್​​ ಡು ಫ್ರಿಝ್​​ (30) ಎಕ್ಲಸ್ಟೋನ್​​ಗೆ ಬಲಿಯಾದಾಗ ಇಂಗ್ಲೆಂಡ್​​ ಜಯ ಖಾತ್ರಿ ಆಗಿತ್ತು. ಕೊನೆಯ ಸರದಿಯ 3 ಆಟಗಾರ್ತಿಯರು ಕೂಡ ಎಕ್ಲಸ್ಟೋನ್​​ ಸ್ಪಿನ್​​ ಬಲೆಯನ್ನು ಬೇಧಿಸಲಿಲ್ಲ.  ದಕ್ಷಿಣ ಆಫ್ರಿಕಾ 38 ಓವರುಗಳಲ್ಲಿ 156 ರನ್​​ಗಳಿಗೆ ಆಲೌಟ್​​ ಆಗಿ 137 ರನ್​​ಗಳ ಸೋಲನುಭವಿಸಿತು.  ಎಕ್ಲಸ್ಟೋನ್​​ 36 ರನ್​​ಗಳಿಗೆ 6 ವಿಕೆಟ್​​ ಪಡೆದು ಮಿಂಚಿದರು. ಸೋಲಿನ ಮೂಲಕ ದಕ್ಷಿಣ ಆಫ್ರಿಕಾ ಟೂರ್ನಿಗೆ ಗುಡ್​​ ಬೈ ಹೇಳಿದರೆ, ಇಂಗ್ಲೆಂಡ್​ ಸತತ 2ನೇ ಬಾರಿಗೆ ಕಪ್​​ ಎತ್ತುವ ಕನಸು ಕಾಣುತ್ತಿದೆ. ​​

 

6ae4b3ae44dd720338cc435412543f62?s=150&d=mm&r=g

admin

See author's posts

Tags: EnglandICC Womans World CupSemifinal MatchSouth Africa
ShareTweetSendShare
Next Post
ವಿರಾಟ್ ಕೊಹ್ಲಿ ಕ್ರಿಕೆಟ್ ನ Cristiano Ronaldo

ವಿರಾಟ್ ಕೊಹ್ಲಿ ಕ್ರಿಕೆಟ್ ನ Cristiano Ronaldo

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

September 25, 2023
IND v AUS: ಆಸೀಸ್‌ ಬೌಲರ್‌ಗಳ ಬೆವರಿಳಿಸಿದ ಗಿಲ್‌: ODIನಲ್ಲಿ 6ನೇ ಶತಕ ದಾಖಲು

IND v AUS: 3ನೇ ಏಕದಿನ ಪಂದ್ಯಕ್ಕೆ ಗಿಲ್‌, ಶಾರ್ದೂಲ್‌ಗೆ ವಿಶ್ರಾಂತಿ ಸಾಧ್ಯತೆ

September 25, 2023
IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

September 24, 2023
IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

IND v AUS: ಗಿಲ್‌-ಅಯ್ಯರ್‌ ಶತಕದ ಅಬ್ಬರ: ಆಸೀಸ್‌ಗೆ 400 ರನ್‌ಗಳ ಕಠಿಣ ಟಾರ್ಗೆಟ್‌

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram