IPL 2022 -RCB vs KKR Head to Head Records – ಆರ್ ಸಿಬಿ – ಕೆಕೆಆರ್ ನಡುವಿನ ಅಂಕಿ ಅಂಶಗಳು ಹೇಳುವುದೇನು..!

ಮಾರ್ಚ್ 30. ಮುಂಬೈನ ಡಿ.ವೈ. ಪಾಟೀಲ್ ಅಂಗಣ. ಸಮಯ ರಾತ್ರಿ 7.30. ಮ್ಯಾಚ್ ನಂಬರ್ 6. ಮಾಜಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಹೋರಾಟ.
ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿದೆ. ಇನ್ನೊಂದೆದಡೆ ಕೆಕೆಆರ್ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ಆತ್ಮವಿಶ್ವಾಸದಲ್ಲಿದೆ.
ಮೊದಲ ಪಂದ್ಯದ ಸೋಲು ಮತ್ತು ಒತ್ತಡಗಳಿಂದ ಆರ್ ಸಿಬಿ ತಂಡ ಹೊರಬರಲೇಬೇಕಿದೆ. ಲಯ ತಪ್ಪಿ ಹೋಗಿರುವ ಆರ್ ಸಿಬಿ ತಂಡದ ಬೌಲಿಂಗ್ ವಿಭಾಗ ಸಾಕಷ್ಟು ಸುಧಾರಣೆಯಾಗಬೇಕಿದೆ. ಫಾಫ್ ಡುಪ್ಲೆಸಸ್ ಮತ್ತು ವಿರಾಟ್ ಕೊಹ್ಲಿ ಜವಾಬ್ದಾರಿಯುತವಾಗಿ ಆಡಲೇಬೇಕಿದೆ. ಒಟ್ಟಿನಲ್ಲಿ ಆರ್ ಸಿಬಿ ಗೆಲುವನ್ನು ಎದುರು ನೋಡುತ್ತಿದೆ.
ಇನ್ನೊಂದೆಡೆ, ಶ್ರೇಯಸ್ ಅಯ್ಯರ್ ಸಾರಥ್ಯದ ಕೆಕೆಆರ್ ತಂಡ ಕೂಡ ಕೆಲವೊಂದು ವಿಭಾಗದಲ್ಲಿ ಸುಧಾರಣೆಯಾಗಬೇಕಿದೆ. ಹೊಡಿಬಡಿ ಆಟಗಾರ ವೆಂಟಕಟೇಶ್ ಅಯ್ಯರ್ ಸಿಡಿದ್ರೆ ಆರ್ ಸಿಬಿಗೆ ಅಪಾಯ ತಪ್ಪಿದ್ದಲ್ಲ.
ಇನ್ನು ಆರ್ ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದ ರೋಚಕತೆಯೇ ಬೇರೆ. ಸೆಲೆಬ್ರಿಟಿ ಫ್ರಾಂಚೈಸಿಗಳ ನಡುವಿನ ಹೋರಾಟ ವನ್ನು ನೋಡಲು ಅಭಿಮಾನಿಗಳು ಕೂಡ ತುದಿಗಾಲಿನಲ್ಲಿ ನಿಂತಿದ್ದಾರೆ.
ಜಿದ್ದಾಜಿದ್ದಿನ ಹೋರಾಟವಿರುವ ಈ ಪಂದ್ಯದಲ್ಲಿ ಆರ್ ಸಿಬಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಶೇ.58ರಷ್ಟು ಆರ್ ಸಿಬಿ ಪರ ಇದ್ರೆ, ಶೇ.42ರಷ್ಟು ಕೆಕೆಆರ್ ಪರ ಇದೆ.
ಆದ್ರೆ ಹಳೆಯ ಅಂಕಿ ಅಂಶಗಳನ್ನು ನೋಡಿದಾಗ ಆರ್ ಸಿಬಿಗಿಂತ ಕೆಕೆಆರ್ ಹೆಚ್ಚು ಪ್ರಾಬಲ್ಯ ಸಾಧಿಸಿದೆ.

ಕಳೆದ 14 ಐಪಿಎಲ್ ಟೂರ್ನಿಗಳಲ್ಲಿ ಕೆಕೆಆರ್ ಮತ್ತು ಆರ್ ಸಿಬಿ ಒಟ್ಟು 30 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 13 ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆದ್ರೆ, 17 ಬಾರಿ ಕೊಲ್ಕತ್ತಾ ನೈಟ್ ರೈಡರ್ಸ್ ಗೆಲುವಿನ ನಗೆ ಬೀರಿದೆ.
ಇನ್ನು ಕಳೆದ ಐದು ಪಂದ್ಯಗಳ ಅಂಕಿ ಅಂಶಗಳ ಪ್ರಕಾರ, ಕೆಕೆಆರ್ ಮೂರು ಬಾರಿ ಗೆದ್ರೆ, ಆರ್ ಸಿಬಿ ಎರಡು ಬಾರಿ ಜಯ ಸಾಧಿಸಿದೆ. IPL 2022 -RCB vs KKR Head to Head Records
ಹಾಗೇ 2021ರ ಐಪಿಎಲ್ ನಲ್ಲಿ ಕೆಕೆಆರ್ ಮತ್ತು ಆರ್ ಸಿಬಿ ಮೂರು ಬಾರಿ ಹೋರಾಟ ನಡೆಸಿದೆ. ಇದರಲ್ಲಿ ಆರ್ ಸಿಬಿ ಒಂದು ಪಂದ್ಯವನ್ನು ಗೆದ್ರೆ, ಕೆಕೆಆರ್ ಎರಡು ಪಂದ್ಯವನ್ನು ಗೆದ್ದುಕೊಂಡಿದೆ.
ಇನ್ನು ಆರ್ ಸಿಬಿ ಮೊದಲು ಬ್ಯಾಟಿಂಗ್ ಮಾಡಿದ್ದ ಮೂರು ಪಂದ್ಯಗಳನ್ನು ಗೆದ್ರೆ, ಕೆಕೆಆರ್ ಏಳು ಪಂದ್ಯಗಳನ್ನು ಗೆದ್ದಿದೆ.
ಹಾಗೇ ಸೆಕೆಂಡ್ ಬ್ಯಾಟಿಂಗ್ ಮಾಡಿದ್ದ 10 ಪಂದ್ಯಗಳನ್ನು ಆರ್ ಸಿಬಿ ಗೆದ್ರೆ, ಕೆಕೆಆರ್ ಕೂಡ 10 ಪಂದ್ಯಗಳನ್ನು ಗೆದ್ದಿದೆ.
ಒಟ್ಟಿನಲ್ಲಿ ಆರ್ ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದಲ್ಲಿ ಗೆಲ್ಲೋರು ಯಾರು ಅನ್ನೋದನ್ನು ಕಾದು ನೋಡಬೇಕು.