Monday, September 25, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home ಕ್ರಿಕೆಟ್

Woman’s World Cup: ಸೆಮಿಫೈನಲ್​ನಲ್ಲಿ ಹೀಲಿ ಆರ್ಭಟ, 158 ರನ್​​ಗಳ ಜಯದ ಮೂಲಕ ಫೈನಲ್​​ಗೆ ಎಂಟ್ರಿಕೊಟ್ಟ ಆಸ್ಟ್ರೇಲಿಯಾ

March 30, 2022
in ಕ್ರಿಕೆಟ್, Cricket
Woman’s World Cup: ಸೆಮಿಫೈನಲ್​ನಲ್ಲಿ ಹೀಲಿ ಆರ್ಭಟ, 158 ರನ್​​ಗಳ ಜಯದ ಮೂಲಕ ಫೈನಲ್​​ಗೆ ಎಂಟ್ರಿಕೊಟ್ಟ ಆಸ್ಟ್ರೇಲಿಯಾ
Share on FacebookShare on TwitterShare on WhatsAppShare on Telegram

ಐಸಿಸಿ ಮಹಿಳಾ ವಿಶ್ವಕಪ್​​ನಲ್ಲಿ ಆಸ್ಟ್ರೇಲಿಯಾದ ಅಜೇಯ ಓಟಕ್ಕೆ ಕಡಿವಾಣ ಹಾಕಲು ಕಷ್ಟವಾಗುತ್ತಿದೆ. ಲೀಗ್​​ನಲ್ಲಿ ಸತತ 7 ಪಂದ್ಯ ಗೆದ್ದಿದ್ದ ಕಾಂಗರೂ ತಂಡ ಈಗ ಸೆಮಿಫೈನಲ್​​ ಹೋರಾಟವನ್ನು ಕೂಡ 158 ರನ್​​ಗಳಿಂದ ಭರ್ಜರಿಯಾಗಿ ಗೆದು ಫೈನಲ್​ ಪ್ರವೇಶಿಸಿದೆ. ಆಸೀಸ್​​ನ ಅಬ್ಬರದ ಆಟಕ್ಕೆ ವೆಸ್ಟ್​​ಇಂಡೀಸ್​​ ಹೇಳ ಹೆಸರಿಲ್ಲದೆ ಮುಗ್ಗರಿಸಿದೆ.

ವೆಲ್ಲಿಂಗ್ಟನ್​​ನಲ್ಲಿ ಮೊದಲು ಬ್ಯಾಟಿಂಗ್​​​ ನಡೆಸಿದ ಆಸ್ಟ್ರೇಲಿಯಾ ವೆಸ್ಟ್​​ಇಂಡೀಸ್​​ ಬೌಲರ್​ಗಳನ್ನು ಮನಸ್ಸಿಗೆ ಬಂದ ಹಾಗೇ ಬೆಂಡೆತ್ತಿತ್ತು. ಅಲಿಸಾ ಹೀಲಿ ಮತ್ತು ರಾಶೆಲ್​​ ಹೇಯ್ನ್ಸ್​​ ಮೊದಲ ವಿಕೆಟ್​​ಗೆ 216 ರನ್​​ಗಳ ಜೊತೆಯಾಟ ಆಡಿದರು.  ಅಬ್ಬರದ ಆಟವಾಡಿದ ಹೀಲಿ ಕೇವಲ 107 ಎಸೆತಗಳಲ್ಲಿ 17 ಬೌಂಡರಿ ಮತ್ತು 1 ಸಿಕ್ಸರ್​​ ನೆರವಿನಿಂದ 129 ರನ್​​ಗಳಿಸಿ ಔಟಾದರು. ರಾಶೆಲ್​​​ ಹೇಯ್ನ್ಸ್​​ 100 ಎಸೆತಗಳಲ್ಲಿ 85 ರನ್​​ಗಳಿಸಿ ಪವೆಲಿಯನ್​​ ಸೇರಿಕೊಂಡರು.  ಆ್ಯಶ್​​ ಗಾರ್ಡನರ್​​ 12 ರನ್​​ಗಳಿಸಿ ಮುಗ್ಗರಿಸಿದರು.

ನಾಯಕಿ ಮೆಗ್​​ ಲ್ಯಾನಿಂಗ್​​ ಮತ್ತು ಬೆಥ್​​ ಮೂನಿ ಫಿನಿಶಿಂಗ್​​ ಟಚ್​​ ಕೊಟ್ಟರು. ಲ್ಯಾನಿಂಗ್​​ ಅಜೇಯ 26 ರನ್​​ಗಳಿಸಿದರೆ, ಮೂನಿ 31 ಎಸೆತಗಳಲ್ಲಿ 43 ರನ್​​ ಸಿಡಿಸಿ ಅಜೇಯರಾಗುಳಿದರು. ನಿಗದಿತ 45 ಓವರುಗಳಲ್ಲಿ ಆಸ್ಟ್ರೇಲಿಯಾ 3 ವಿಕೆಟ್​​ ಕಳೆದುಕೊಂಡು 305 ರನ್​​ಗಳಿಸಿತು.

ಚೇಸಿಂಗ್​​ ವೇಳೆ ವೆಸ್ಟ್​​ಇಂಡೀಸ್​ ಎಲ್ಲೂ ಪ್ರತಿರೋಧವನ್ನೇ ತೋರಲಿಲ್ಲ. ರಶಡಾ ವಿಲಿಯಮ್ಸ್​​​​ ಶೂನ್ಯ ಸುತ್ತಿದರೆ, ಡಿಯಾಂಡ್ರ ಡಾಟಿನ್​ ಮತ್ತು ಹೇಲಿ ಮ್ಯಾಥ್ಯೂಸ್​​​ ತಲಾ 34 ರನ್​​ಗಳಿಸಿದರು. ನಾಯಕಿ ಸ್ಟೆಫಾನಿ ಟೇಲರ್​​ ಒಬ್ಬರೇ 48 ರನ್​​ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರ್ತಿಯರು ಎರಡಂಕಿ ಕೂಡ ಮುಟ್ಟಲಿಲ್ಲ.  ಅನಿಸಾ ಮೊಹಮ್ಮದ್​ ಹಾಗೂ ಹೆನ್ರಿ ಗಾಯದಿಂದಾಗಿ ಬ್ಯಾಟಿಂಗ್​​ಗೆ ಇಳಿಯಲಿಲ್ಲ.  ವೆಸ್ಟ್​​ಇಂಡೀಸ್ 37 ಓವರುಗಳಲ್ಲಿ 8 ವಿಕೆಟ್​​​ ಕಳೆದುಕೊಂಡು 148 ರನ್​​ಗಳಿಸಿದ್ದಾಗ ಇನ್ನಿಂಗ್ಸ್​​ ಅಂತ್ಯ ಮಾಡಿಕೊಂಡಿತು. ಆಸ್ಟ್ರೇಲಿಯಾ 158 ರನ್​​ಗಳ ಭರ್ಜರಿ ಜಯ ದಾಖಲಿಸಿತು.

6ae4b3ae44dd720338cc435412543f62?s=150&d=mm&r=g

admin

See author's posts

Tags: AustraliaICCICC Womans World CupWest indies
ShareTweetSendShare
Next Post
Slow Over Rate: ಸನ್ ನಾಯಕ ಕೇನ್ ಗೆ 12 ಲಕ್ಷ ರೂ. ದಂಡ

Slow Over Rate: ಸನ್ ನಾಯಕ ಕೇನ್ ಗೆ 12 ಲಕ್ಷ ರೂ. ದಂಡ

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

September 25, 2023
IND v AUS: ಆಸೀಸ್‌ ಬೌಲರ್‌ಗಳ ಬೆವರಿಳಿಸಿದ ಗಿಲ್‌: ODIನಲ್ಲಿ 6ನೇ ಶತಕ ದಾಖಲು

IND v AUS: 3ನೇ ಏಕದಿನ ಪಂದ್ಯಕ್ಕೆ ಗಿಲ್‌, ಶಾರ್ದೂಲ್‌ಗೆ ವಿಶ್ರಾಂತಿ ಸಾಧ್ಯತೆ

September 25, 2023
IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

September 24, 2023
IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

IND v AUS: ಗಿಲ್‌-ಅಯ್ಯರ್‌ ಶತಕದ ಅಬ್ಬರ: ಆಸೀಸ್‌ಗೆ 400 ರನ್‌ಗಳ ಕಠಿಣ ಟಾರ್ಗೆಟ್‌

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram