IPL 2022- RCB Vs CSK – ಚೆನ್ನೈ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಆರ್ ಸಿಬಿ -RCB Predicted Playing 11

15ನೇ ಆವೃತ್ತಿಯ ಐಪಿಎಲ್ ಟೂರ್ನಿಯ 49 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಹೋರಾಟ ನಡೆಸಲಿವೆ.
ಪುಣೆಯ ಎಮ್ ಸಿಎ ಅಂಗಣದಲ್ಲಿ ನಡೆಯಲಿರುವ ಈ ಪಂದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಯಾಕಂದ್ರೆ ಐಪಿಎಲ್ ನಲ್ಲಿ ಸಿಎಸ್ ಕೆ ಮತ್ತು ಆರ್ ಸಿಬಿ ನಡುವಿನ ಹೋರಾಟವೇ ಅಂತಹುದ್ದು. ಐಪಿಎಲ್ ನ ಯಶಸ್ವಿ ತಂಡ ಎಂಬ ಹೆಗ್ಗಳಿಕೆ ಸಿಎಸ್ ಕೆ ತಂಡಕ್ಕಿದ್ರೆ, ಐಪಿಎಲ್ ನ ಅತ್ಯಂತ ಜನಪ್ರಿಯತೆಯ ತಂಡ ಎಂಬ ಹೆಮ್ಮೆ ಆರ್ ಸಿಬಿಯದ್ದು. ಹೀಗಾಗಿ ಧೋನಿ ನಾಯಕತ್ವದ ಸಿಎಸ್ ಕೆ ಮತ್ತು ಫಾಫ್ ಡು ಪ್ಲೇಸಸ್ ಸಾರಥ್ಯದ ಆರ್ ಸಿಬಿ ನಡುವಿನ ಮುಖಾಮುಖಿ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಟೂರ್ನಿಯ ಮೊದಲ ಪಂದ್ಯದಲ್ಲಿ ಆರ್ ಸಿಬಿ ಸಿಎಸ್ ಕೆ ವಿರುದ್ಧ ಸೋಲು ಅನುಭವಿಸಿದೆ. ಈ ಸೋಲಿಗೆ ಈಗ ಆರ್ ಸಿಬಿ ಪ್ರತಿಕಾರ ತೀರಿಸಿಕೊಳ್ಳುವ ತವಕದಲ್ಲಿದೆ. ಆದ್ರೆ ಆರ್ ಸಿಬಿ ತಂಡಕ್ಕೆ ಸತತ ಮೂರು ಪಂದ್ಯಗಳ ಸೋಲು ಕಾಡುತ್ತಿದೆ. ಆಡಿರುವ ಹತ್ತು ಪಂದ್ಯಗಳಲ್ಲಿ ಆರ್ ಸಿಬಿ ಐದು ಪಂದ್ಯಗಳನ್ನು ಗೆದ್ದಿದೆ. ಐದು ಪಂದ್ಯಗಳನ್ನು ಸೋತಿದೆ. ಅಲ್ಲದೆ ರನ್ ರೇಟ್ ನಲ್ಲೂ ಮೈನಸ್ ನಲ್ಲಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ.
ಇದೀಗ ಆರ್ ಸಿಬಿ 11ನೇ ಪಂದ್ಯವನ್ನು ಆಡುತ್ತಿದೆ. ಪ್ಲೇ ಆಫ್ ಗೆ ಎಂಟ್ರಿ ಪಡೆದುಕೊಳ್ಳಬೇಕಾದ್ರೆ ಗೆಲುವು ಅನಿವಾರ್ಯ. ಹಾಗಂತ ಈ ಪಂದ್ಯಕ್ಕೆ ಮಾತ್ರವಲ್ಲ. ಮುಂದಿನ ನಾಲ್ಕು ಪಂದ್ಯಗಳನ್ನು ಗೆದ್ರೆ ಮಾತ್ರ ಪ್ಲೇ ಆಫ್ ಗೆ ಎಂಟ್ರಿ. ಇಲ್ಲದೆ ಇದ್ರೆ ಮತ್ತೊಮ್ಮೆ ನಿರಾಸೆ ಅನುಭವಿಸಬೇಕಾಗುತ್ತದೆ.

ಇನ್ನು ಆರ್ ಸಿಬಿ ತಂಡದ 11ರ ಬಳಗದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗುವ ಸಾಧ್ಯತೆಗಳಿಲ್ಲ. ಈಗಾಗಲೇ ಸಾಕಷ್ಟು ಬದಲಾವಣೆಗಳನ್ನು ಕೂಡ ಮಾಡಿದೆ. ಆದ್ರೂ ಪ್ರಯೋಜನವಾಗಿಲ್ಲ. IPL 2022- RCB Vs CSK -Match No-49- RCB Predicted Playing 11
ಮುಖ್ಯವಾಗಿ ತಂಡದಿಂದ ಸ್ಥಿರ ಪ್ರದರ್ಶನ ಬರುತ್ತಿಲ್ಲ. ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಂಡಿರುವುದು ತುಸು ಸಮಾಧಾನಕರ ಸಂಗತಿ. ಆದ್ರೆ ನಾಯಕ ಫಾಫ್ ಡು ಪ್ಲೇಸಸ್, ಗ್ಲೇನ್ ಮ್ಯಾಕ್ಸ್ ವೆಲ್ ನಿರೀಕ್ಷಿತ ಆಟವನ್ನು ಆಡುತ್ತಿಲ್ಲ. ದಿನೇಶ್ ಕಾರ್ತಿಕ್ ಅಬ್ಬರ ಕೂಡ ಕಡಿಮೆಯಾಗಿದೆ. ಶಹಬಾಝ್ ಅಹಮ್ಮದ್, ರಜತ್ ಪಟಿದಾರ್, ಮಹಿಪಾಲ್ ಅವರಿಂದ ಹೆಚ್ಚಿನ ನಿರೀಕ್ಷೆಗಳನ್ನು ಮಾಡುವಂತಿಲ್ಲ.
ಹಾಗೇ ಬೌಲಿಂಗ್ ನಲ್ಲೂ ಆರ್ ಸಿಬಿ ತಂಡ ವೀಕ್ ಆಗಿದೆ. ವನಿಂದು ಹಸರಂಗ ಪರಿಣಾಮಕಾರಿಯಾಗುತ್ತಿಲ್ಲ. ಮಹಮ್ಮದ್ ಸೀರಾಜ್ ಮತ್ತು ಹರ್ಷೆಲ್ ಪಟೇಲ್, ಜೋಶ್ ಹ್ಯಾಝೆಲ್ ವುಡ್ ಲಯಬದ್ಧವಾಗಿ ಬೌಲಿಂಗ್ ಮಾಡುವುದನ್ನು ಮರೆತುಬಿಟ್ಟಿದ್ದಾರೆ.

ಒಟ್ಟಿನಲ್ಲಿ ಆರ್ ಸಿಬಿಯ ಆರಂಭದ ಶೂರತ್ವ ಈಗಿಲ್ಲ. ಇದೀಗ ಹೊಸ ಹುರುಪು ಮತ್ತು ಆತ್ಮವಿಶ್ವಾಸವನ್ನು ವೃದ್ದಿಸಿಕೊಂಡು ಸಿಎಸ್ ಕೆ ಸವಾಲನ್ನು ಎದುರಿಸಬೇಕಿದೆ.
ಇನ್ನೊಂದೆಡೆ ಆರ್ ಸಿಬಿ ಅಭಿಮಾನಿಗಳಲ್ಲೂ ನಿರೀಕ್ಷೆಗಳು ಕಮ್ಮಿಯಾಗಿದೆ. ಈ ಬಾರಿಯೂ ಕಪ್ ಗೆಲ್ಲುವುದಿಲ್ಲ ಎಂಬ ಭಾವನೆ ಮೂಡಿದೆ. ಜೈ ಅರ್ ಸಿಬಿ, ಈ ಸಲ ಕಪ್ ನಮ್ದೆ ಅಂತ ಬೀಗುತ್ತಿದ್ದ ಆರ್ ಸಿಬಿ ಫ್ಯಾನ್ಸ್, ಆರ್ ಸಿಬಿ ತಂಡದ ಮೇಲೆ ಭರವಸೆಯನ್ನು ಕಳೆದುಕೊಂಡಿದ್ದಾರೆ.
ಒಟ್ಟಿನಲ್ಲಿ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಗೆದ್ರೆ ಫ್ಲೇ ಆಫ್ ಎಂಟ್ರಿ ಸುಲಭವಾಗಬಹುದು. ಇಲ್ಲದೆ ಇದ್ರೆ ಬಲು ಕಷ್ಟ. ಎಂದಿನಂತೆ ಮುಂದಿನ ಬಾರಿ ಕಪ್ ನಮ್ದೆ ಅಂತ ಅಭಿಯಾನ ಮಾಡಬೇಕಾಗುತ್ತದೆ.
ಆರ್ ಸಿಬಿ ಪ್ಲೇಯಿಂಗ್ ಇಲೆವೆನ್
ಫಾಫ್ ಡು ಪ್ಲೇಸಸ್ (ನಾಯಕ)
ವಿರಾಟ್ ಕೊಹ್ಲಿ
ರಜತ್ ಪಟಿದಾರ್
ಗ್ಲೇನ್ ಮ್ಯಾಕ್ಸ್ ವೆಲ್
ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್)
ಶಹಬಾಝ್ ಅಹಮ್ಮದ್
ಮಹಿಪಾಲ್ ಲೊಮ್ರೋರ್
ವನಿಂದು ಹಸರಂಗ
ಹರ್ಷೆಲ್ ಪಟೇಲ್
ಮಹಮ್ಮದ್ ಸೀರಾಜ್
ಜೋಶ್ ಹ್ಯಾಝೆಲ್ ವುಡ್