IPL 2022- RCB – ಈ ಸಲವಾದ್ರೂ ಆರ್ ಸಿಬಿ ಕಪ್ ಗೆಲ್ಲಲೇಬೇಕು.. ಯಾಕಂದ್ರೆ…!

ಮೂರು ಬಾರಿ ರನ್ನರ್.. ಏಳು ಬಾರಿ ಪ್ಲೇ ಆಫ್ ಪ್ರವೇಶ ಪಡೆದ್ರೂ ಅದ್ಯಾಕೋ ಐಪಿಎಲ್ ಟ್ರೋಫಿ ಗೆಲ್ಲಲು ಆರ್ ಸಿಬಿಗೆ ಇಲ್ಲಿಯವರೆಗೆ ಸಾಧ್ಯವಾಗಿಲ್ಲ.
ಕಳೆದ 14 ವರ್ಷಗಳಿಂದ ನಿರಾಸೆ ಅನುಭವಿಸಿದ್ದ ಆರ್ ಸಿಬಿಗೆ ಈ ಬಾರಿ ಮತ್ತೆ ಐಪಿಎಲ್ ಟ್ರೋಫಿ ಗೆಲ್ಲುವ ಅವಕಾಶ ಸಿಕ್ಕಿದೆ. ಆದ್ರೆ ಈ ಬಾರಿ ಗೆಲ್ಲಬೇಕು ಅಂದ್ರೆ ಸತತ ಮೂರು ಪಂದ್ಯಗಳನ್ನು ಗೆಲ್ಲಬೇಕಿದೆ.
ಹೌದು, ಮೇ 25ರಂದು ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಗೆಲ್ಲಬೇಕು. ಆ ಬಳಿಕ ರಾಜಸ್ತಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ನಡುವಿನ ಹೋರಾಟದಲ್ಲಿ ಸೋತ ತಂಡದ ವಿರುದ್ಧ ಆಡಬೇಕು. ಬಳಿಕ ಫೈನಲ್ ನಲ್ಲಿ ಆಡಬೇಕು. ಹೀಗೆ ಮೂರು ಮಹತ್ವದ ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ರೆ, ಆರ್ ಸಿಬಿ ಅಭಿಮಾನಿಗಳ ಆಸೆ ಈಡೇರುತ್ತದೆ.

ಆದ್ರೆ ಯಕ್ಷ ಪ್ರಶ್ನೆಯಾಗಿರುವುದು ಆರ್ ಸಿಬಿ ಗೆಲ್ಲುತ್ತಾ ಅನ್ನೋದು. ಸದ್ಯದ ಮಟ್ಟಿಗೆ ಅಂತಹ ಭರವಸೆಯೊಂದು ಮೂಡಿದೆ. ಕಾರಣ ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಂಡಿರುವುದು. ಈ ಬಾರಿಯ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಲೀಗ್ ನ ಕೊನೆಯ ಪಂದ್ಯದಲ್ಲಿ ಅದ್ಭುತವಾದ ಆಟವನ್ನಾಡಿದ್ರು. ಅಲ್ಲದೆ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಕೂಡ ದಾಖಲಿಸಿದ್ದರು. ಹೀಗಾಗಿ ಆರ್ ಸಿಬಿ ಗೆಲ್ಲುತ್ತೆ ಎಂಬ ಆಸೆ ಮೂಡಿದೆ.
ಇನ್ನೊಂದೆಡೆ ಆರ್ ಸಿಬಿ ಕಪ್ ಗೆಲ್ಲಲೇಬೇಕು. ವಿರಾಟ್ ಕೊಹ್ಲಿಗಾಗಿಯಾದ್ರೂ ಆರ್ ಸಿಬಿ ಪ್ರಶಸ್ತಿ ಗೆಲ್ಲಬೇಕು. ಕಳೆದ 15 ವರ್ಷಗಳಿಂದ ಆರ್ ಸಿಬಿ ತಂಡದ ಆಧಾರಸ್ತಂಭವಾಗಿರುವ ವಿರಾಟ್ ಅಮೋಘ ಆಟವನ್ನಾಡಿದ್ದಾರೆ. ಆರ್ ಸಿಬಿ ತಂಡದ ಪರ ಆಡಿ, ಹಲವು ದಾಖಲೆಗಳನ್ನು ಐಪಿಎಲ್ ನಲ್ಲಿ ಬರೆದಿದ್ದಾರೆ. ನಾಯಕನಾಗಿಯೂ ಅಮೋಘ ಆಟವನ್ನಾಡಿದ್ದಾರೆ. ಆದ್ರೆ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಅನ್ನೋ ಕೊರಗು ಅವರನ್ನು ಕಾಡುತ್ತಿದೆ. ಹೀಗಾಗಿ ಆರ್ ಸಿಬಿ ನಾಯಕ ಫಾಫ್ ಡು ಪ್ಲೇಸಸ್ ಮತ್ತು ಆಟಗಾರರು ವಿರಾಟ್ ಗಾಗಿ ಈ ಬಾರಿ ಕಪ್ ಗೆಲ್ಲಬೇಕು ಎಂಬ ನಿರ್ಧಾರಕ್ಕೆ ಬಂದು ಆಡಬೇಕು.
ಈ ಹಿಂದೆ ಟೀಮ್ ಇಂಡಿಯಾದಲ್ಲಿ ಸಚಿನ್ ತೆಂಡುಲ್ಕರ್ ಐದು ಬಾರಿ ವಿಶ್ವಕಪ್ ಆಡಿದ್ರೂ ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಹಾಗಾಗಿ ಆರನೇ ವಿಶ್ವಕಪ್ ವೇಳೇ, ಅಂದ್ರೆ 2011ರ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಆಟಗಾರರು ಸಚಿನ್ ಗಾಗಿ ವಿಶ್ವಕಪ್ ಗೆಲ್ಲಬೇಕು ಎಂದು ಸಂಕಲ್ಪ ಮಾಡಿದ್ದರು. ಅಂದುಕೊಂಡಂತೆ ಆರನೇ ಬಾರಿಯ ವಿಶ್ವಕಪ್ ನಲ್ಲಿ ಸಚಿನ್ ಗೆ ವಿಶ್ವಕಪ್ ಗೆಲ್ಲಲು ಸಾಧ್ಯವಾಯ್ತು. IPL 2022- RCB -RCB to Win IPL 2022 For Virat Kohli

ಅದೇ ರೀತಿ ಆರ್ ಸಿಬಿ ಆಟಗಾರರು ವಿರಾಟ್ ಗಾಗಿ ಗೆಲ್ಲಬೇಕು ಎಂದು ಸಂಕಲ್ಪ ಮಾಡಿಕೊಂಡು ಆಡಿದ್ರೆ ಕಪ್ ಗೆದ್ರೂ ಗೆಲ್ಲಬಹುದು.
ಒಟ್ಟಿನಲ್ಲಿ 15 ವರ್ಷಗಳ ಪ್ರಶಸ್ತಿ ಬರ ಈ ಬಾರಿ ನೀಗಿಸಿಕೊಳ್ಳಲು ಆರ್ ಸಿಬಿ ಪ್ಲಾನ್ ಮಾಡಿಕೊಂಡಿದೆ. ಮುಂಬೈ ಗೆಲ್ಲುತ್ತಿದ್ದಂತೆ, ಡೆಲ್ಲಿ ಸೋಲುತ್ತಿದ್ದಂತೆ, ಆರ್ ಸಿಬಿ ಪ್ಲೇ ಆಫ್ ಗೆ ಎಂಟ್ರಿಕೊಟ್ಟಾಗ ಆಟಗಾರರು ಸಂಭ್ರಮ ಮುಗಿಲುಮುಟ್ಟಿತ್ತು. ಈ ಸಂಭ್ರಮ ಪೂರ್ಣವಾಗಬೇಕಾದ್ರೆ ಆರ್ ಸಿಬಿ ಫೈನಲ್ ನಲ್ಲಿ ಟ್ರೋಫಿ ಹಿಡಿದು ಸಂಭ್ರಮಿಸಬೇಕು.
ಆದ್ರೆ ಅದೆಲ್ಲಾ ಆಗುತ್ತಾ ಅನ್ನೋದು ಇನ್ನೊಂದು ಪ್ರಶ್ನೆ. ಯಾಕಂದ್ರೆ ಆರ್ ಸಿಬಿ ಮೇಲೆ ನಂಬಿಕೆ ಇಲ್ಲ. ಕೆಲವೊಂದು ಬಾರಿ ಅದ್ಭುತವಾಗಿ ಆಡ್ತಾರೆ.. ಮತ್ತೆ ಕೆಲವು ಬಾರಿ ಹೀನಾಯವಾಗಿ ಸೋಲುತ್ತಾರೆ. ಆದ್ರೂ ಕಪ್ ಗೆಲ್ಲಲೇಬೇಕು ಎಂಬುದು ಹಣೆಬರೆಹದಲ್ಲಿದ್ರೆ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಅದು ಅಲ್ಲದೆ ಕರಣ್ ಶರ್ಮ ಅನ್ನೋ ಲಕ್ಕಿ ಹುಡುಗ ಕೂಡ ತಂಡದಲ್ಲಿದ್ದಾರೆ.
ಒಟ್ಟಿನಲ್ಲಿ ಆರ್ ಸಿಬಿ ಗೆಲ್ಲಲೇಬೇಕು.. ಪ್ರಶಸ್ತಿ ಗೆಲ್ಲಬೇಕು ಎಂಬುದು ಆರ್ ಸಿಬಿ ಅಭಿಮಾನಿಗಳ ಇಚ್ಛೆಯಾಗಿದೆ. ಈ ನಡುವೆ ಮಳೆ ಬಂದು ಏನಾದ್ರೂ ಅಡಚಣೆ ಮಾಡಿದ್ರೆ ಮತ್ತೆ ಪ್ರಶಸ್ತಿ ಗೆಲ್ಲುವ ಆಸೆ ಕಮರಿ ಹೋಗಬಹುದು. ಯಾವುದಕ್ಕೂ ಅದೃಷ್ಟ ಬೇಕು..!