IPL 2022- Ravindra jadeja -CSK – ರವೀಂದ್ರ ಜಡೇಜಾ ನಾಯಕತ್ವ ತ್ಯಜಿಸಲು ಧೋನಿಯೇ ಕಾರಣ ?

ರವೀಂದ್ರ ಜಡೇಜಾ.. ಮಿಂಚಿನ ಫೀಲ್ಡರ್.. ನಾಜೂಕಿನ ಬೌಲರ್. ಕ್ರೀಸ್‍ಗೆ ಅಂಟಿಕೊಂಡ್ರೆ ಊಹೆ ಮಾಡದ ರೀತಿಯಲ್ಲಿ ಬ್ಯಾಟಿಂಗ್ ಮಾಡುವ ಚತುರ. ಎದುರಾಳಿ ತಂಡ ಯಾವುದೇ ಇರಲಿ, ಧೈರ್ಯವಾಗಿ ಮುನ್ನುಗ್ಗಿ ಆಟವಾಡು ಕ್ರಿಕೆಟಿಗ.
ಆದ್ರೆ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದಾಗ ರವೀಂದ್ರ ಜಡೇಜಾ ತನ್ನತನವನ್ನು ಕಳೆದುಕೊಂಡ್ರು. ಆಟದ ಎಲ್ಲಾ ವಿಭಾಗದಲ್ಲೂ ವಿಫಲರಾದ್ರು. ನಾಯಕನಾಗಿಯೂ ಯಶ ಸಾಧಿಸಲಿಲ್ಲ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಎಂಟು ಪಂದ್ಯಗಳಿಗೆ ಸಿಎಸ್ ಕೆ ತಂಡದ ನಾಯಕತ್ವ ವಹಿಸಿದ್ದರು. ಇದರಲ್ಲಿ ಗೆದ್ದಿದ್ದು ಎರಡು ಪಂದ್ಯಗಳನ್ನು ಮಾತ್ರ. ಸೋತಿದ್ದು ಆರು ಪಂದ್ಯಗಳನ್ನು.
ಹಾಗಾದ್ರೆ ನಾಯಕನಾಗಿ ರವೀಂದ್ರ ಜಡೇಜಾ ಸಾಲು ಸಾಲು ಸೋಲುಗಳನ್ನು ಕಂಡು ಧೈರ್ಯವನ್ನೇ ಕಳೆದುಕೊಂಡ್ರಾ ಅನ್ನೋ ಪ್ರಶ್ನೆ ಮೂಡುತ್ತದೆ. ನಾಯಕತ್ವ ವೈಯಕ್ತಿಕ ಆಟದ ಮೇಲೆ ಪರಿಣಾಮ ಬೀರುತ್ತಿದೆ ಎಂಬುದನ್ನು ಅರಿತುಕೊಂಡು ನಾಯಕತ್ವವನ್ನು ಮತ್ತೆ ಧೋನಿಯ ಕೈಗಿಟ್ರು.
ಹೌದು, ಐಪಿಎಲ್ ನಲ್ಲಿ ರವೀಂದ್ರ ಜಡೇಜಾಗೆ ಸಿಎಸ್ ಕೆ ತಂಡದ ನಾಯಕತ್ವ ಬಯಸದೇ ಬಂದ ಭಾಗ್ಯವಂತೂ ಅಲ್ಲವೇ ಅಲ್ಲ. ಎಲ್ಲವೂ ಪ್ಲಾನ್ ಪ್ರಕಾರವೇ ನಡೆದಿತ್ತು. ಟೂರ್ನಿ ಶುರುವಾಗುವ ಮುನ್ನ ಸಿಎಸ್ ಕೆ ಟೀಮ್ ಮ್ಯಾನೇಜ್ ಮೆಂಟ್ ರವೀಂದ್ರ ಜಡೇಜಾ ನಾಯಕ ಅಂತ ಘೋಷಣೆ ಮಾಡಿದಾಗ ಹಲವರು ಅಚ್ಚರಿಗೊಂಡಿದ್ದರು.

ಆದ್ರೆ ರವೀಂದ್ರ ಜಡೇಜಾಗೆ ಅಚ್ಚರಿಯಾಗಲಿಲ್ಲ. ಸಿಎಸ್ ಕೆ ಆಟಗಾರರಿಗೂ ಅಚ್ಚರಿಯಾಗಲಿಲ್ಲ. ಯಾಕಂದ್ರೆ ಈ ಬಾರಿಯ ಟೂರ್ನಿಗೆ ರವೀಂದ್ರ ಜಡೇಜಾ ನಾಯಕ ಎಂದು ಮೊದಲೇ ನಿರ್ಧಾರ ಮಾಡಲಾಗಿತ್ತು. ಇನ್ನೊಂದೆಡೆ ರವೀಂದ್ರ ಜಡೇಜಾ ನಾಯಕನಾಗಿ ಹೆಚ್ಚಿನ ಒತ್ತಡ ಏನು ಇಲ್ಲ ಎಂದು ಎಲ್ಲರೂ ಅಂದುಕೊಂಡಿದ್ದರು. ಕಾರಣ ಮಹೇಂದ್ರ ಸಿಂಗ್ ಧೋನಿ ಬೆಂಬಲವಾಗಿ ನಿಂತಿದ್ದರು
ಹೌದು, ಎಂಟು ಪಂದ್ಯಗಳಲ್ಲೂ ಜಡ್ಡು ಬೆಂಬಲವಾಗಿ ನಿಂತಿದ್ದರು. ಆದ್ರೆ ಕೆಲವೊಂದು ಬಾರಿ ಸುಮ್ಮನಿದ್ದರು. ಧೋನಿ ಹೇಳುವ ಹಾಗೇ ಮೊದಲ ಎರಡು ಪಂದ್ಯಗಳಲ್ಲಿ ರವೀಂದ್ರ ಜಡೇಜಾಗೆ ಸಾಥ್ ಕೊಡುತ್ತಿದ್ದೆ. ಆದ್ರೆ ನಂತರದ ಪಂದ್ಯಗಳಲ್ಲಿ ಏನು ಹೇಳುತ್ತಿರಲಿಲ್ಲ. ಯಾಕಂದ್ರೆ ನಾಯಕನಾದವನು ತನ್ನ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಬೇರೆಯವರ ಸಲಹೆಯನ್ನು ಪಡೆದುಕೊಳ್ಳಬೇಕು. ಆದ್ರೆ ಪಂದ್ಯದ ವೇಳೆ ಕ್ಷಣ ಕ್ಷಣಕ್ಕೂ ತನ್ನ ನಿರ್ಧಾರವನ್ನೇ ತೆಗೆದುಕೊಳ್ಳುವ ಗಟ್ಟಿತನ ಇರಬೇಕು. ಹಾಗೇ ತನ್ನ ನಿರ್ಧಾರವನ್ನು ಸಮರ್ಥನೆ ಮಾಡಿಕೊಳ್ಳುವ ತಾಕತ್ತೂ ಇರಬೇಕು ಎಂಬ ಮಾತನ್ನು ಹೇಳಿದ್ದಾರೆ.
ಅಷ್ಟೇ ಅಲ್ಲ, ರವೀಂದ್ರ ಜಡೇಜಾ ಕೇವಲ ಟಾಸ್ ಗಾಗಿ ಹೋಗುವ ನಾಯಕನಾಗಬಾರದು. ಎಲ್ಲವನ್ನು ನಾನೇ ಹೇಳಿಕೊಟ್ರೆ ಅವರು ನಾಮ್ ಕೇ ವಾಸ್ತೆ ನಾಯಕನಾಗುತ್ತಾರೆ. ಹೀಗಾಗಿ ರವೀಂದ್ರ ಜಡೇಜಾ ಪ್ರತಿಯೊಂದನ್ನು ಹೇಳಿಕೊಡುತ್ತಿರಲಿಲ್ಲ. ಅದು ಸರಿನೂ ಅಲ್ಲ. ನಾಯಕ ಅಂದ್ರೆ ಎಲ್ಲ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬ ದಾಟಿಯಲ್ಲಿ ಮಹೇಂದ್ರ ಸಿಂಗ್ ಹೇಳಿದ್ದಾರೆ.
ಹಾಗಿದ್ರೆ ರವೀಂದ್ರ ಜಡೇಜಾ ಎಡವಿದ್ದು ಎಲ್ಲಿ ? ಸಿಎಸ್ ಕೆ ತಂಡದ ನಾಯಕತ್ವ ವಹಿಸುತ್ತೇನೆ ಎಂಬುದು ಮೊದಲೇ ಗೊತ್ತಿತ್ತು. ಅದಕ್ಕಾಗಿ ತಯಾರಿ ಕೂಡ ಮಾಡಬೇಕಿತ್ತು. ಅಲ್ಲದೆ ತಯಾರಿ ನಡೆಸಲು ಸಾಕಷ್ಟು ಸಮಯವಕಾಶವೂ ಇತ್ತು. ಆದ್ರೂ ರವೀಂದ್ರ ಜಡೇಜಾ ಸಪ್ಪೆ ನಾಯಕನಾದ್ರು. ಇದೀಗ ನಾಯಕತ್ವವನ್ನು ತ್ಯಜಿಸುವ ಮೂಲಕ ತನ್ನಲ್ಲಿ ನಾಯಕತ್ವದ ಅರ್ಹತೆಗಳಿಲ್ಲ ಎಂಬ ಆರೋಪಕ್ಕೂ ಕಾರಣರಾದ್ರು.

ಇನ್ನೊಂದೆಡೆ ಸಿಎಸ್ ಕೆ ತಂಡವನ್ನು ಮುನ್ನಡೆಸುವುದು ಅಷ್ಟೊಂದು ಸುಲಭವಿಲ್ಲ. ನಾಲ್ಕು ಬಾರಿ ಚಾಂಪಿಯನ್, ಐದು ಬಾರಿ ರನ್ನರ್ ಅಪ್, ಐಪಿಎಲ್ ನ ಯಶಸ್ವಿ ತಂಡ. ಜೊತೆಗೆ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ. ಅಷ್ಟೇ ಅಲ್ಲ, ಅಭಿಮಾನಿಗಳ ನಿರೀಕ್ಷೆ ಕೂಡ ಹೆಚ್ಚಿರುತ್ತದೆ. ಹೀಗಾಗಿ ರವೀಂದ್ರ ಜಡೇಜಾ ಒತ್ತಡಕ್ಕೆ ಸಿಲುಕಿ ತಂಡವನ್ನು ಮುನ್ನಡೆಸಲು ಆಗಲಿಲ್ಲ.
ಮತ್ತೊಂದೆಡೆ ಮಹೇಂದ್ರ ಸಿಂಗ್ ಧೋನಿಯವರ ಛಾಯೇ ಕೂಡ ಸಿಎಸ್ ಕೆ ತಂಡದ ಮೇಲಿದೆ. ಅಲ್ಲದೆ ತಂಡದಲ್ಲಿ ಹಿರಿಯ ಆಟಗಾರರು ಇದ್ದಾರೆ. ಹೀಗಾಗಿ ರವೀಂದ್ರ ಜಡೇಜಾ ಅವರಿಗೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಂಜಿಕೆಯಾಗುತ್ತಿತ್ತೋ ಎಂಬ ಭಾವನೆ ಕೂಡ ಮೂಡುತ್ತಿದೆ.
ಒಟ್ಟಿನಲ್ಲಿ ಸರ್, ರವೀಂದ್ರ ಜಡೇಜಾ ನಾಯಕತ್ವವನ್ನು ತ್ಯಜಿಸಿ ದೊಡ್ಡ ತಪ್ಪು ಮಾಡಿಬಿಟ್ಟಿದ್ದಾರೆ. ತಪ್ಪುಗಳನ್ನು ಸರಿಪಡಿಸಿಕೊಂಡು ತಂಡವನ್ನು ಯಶಸ್ವಿನತ್ತ ಕೊಂಡೋಯ್ಯುವ ಎಲ್ಲಾ ಸಾಮಥ್ರ್ಯ ವಿದ್ರೂ ಜಡೇಜಾ ಯಾಕೆ ಮಂಕಾದ್ರು ಎಂಬುದೇ ಗೊತ್ತಾಗುತ್ತಿಲ್ಲ.
ನಾಯಕನಾದ ನಂತರ ರವೀಂದ್ರ ಜಡೇಜಾ ಅಷ್ಟೊಂದು ಉತ್ಸಾಹದಲ್ಲಿರಲಿಲ್ಲ. ಮುಖದಲ್ಲಿ ಒತ್ತಡ ಎದ್ದು ಕಾಣುತ್ತಿತ್ತು. ಹೀಗಾಗಿ ಕ್ಯಾಚ್ ಗಳನ್ನು ಕೈಚೆಲ್ಲಿಬಿಟ್ಟಿದ್ದರು. ಒಟ್ಟಾರೆ ಸಿಎಸ್ ಕೆ ತಂಡದ ನಾಯಕತ್ವ ರವೀಂದ್ರ ಜಡೇಜಾ ಅವರ ಆಟದ ಮೇಲೆ ಗಾಢವಾದ ಪರಿಣಾಮ ಬೀರಿತ್ತು ಎಂಬುದು ಸುಳ್ಳಲ್ಲ.