ipL 2022- ಚೆನ್ನೈ ಕ್ಯಾಂಪ್ ನಲ್ಲಿ ಹೆಡ್ ಮಾಸ್ಟರ್ ಧೋನಿಯಿಂದ ಕ್ರಿಕೆಟ್ ಪಾಠ…!

15ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರದಿಂದ ತಯಾರಿ ನಡೆಸುತ್ತಿದೆ.
ಸೂರತ್ ನಲ್ಲಿ ಅಭ್ಯಾಸದಲ್ಲಿ ನಿರತರಾಗಿರುವ ತಂಡ ಕಠಿಣ ಅಭ್ಯಾಸ ನಡೆಸುತ್ತಿದೆ.
ನಾಯಕ ಮಹೇಂದ್ರ ಸಿಂಗ್ ಧೋನಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಜೊತೆಗೆ ಸಹ ಆಟಗಾರರಿಗೆ ಕೆಲವೊಂದು ಟಿಪ್ಸ್ ಗಳನ್ನು ನೀಡುತ್ತಿದ್ದಾರೆ.
ಅದರಲ್ಲೂ ಮುಖ್ಯವಾಗಿ ಯುವ ಆಟಗಾರ ರಾಜ್ಯವರ್ಧನ್ ಹಂಗರ್ಗೆಕರ್ ಅವರಿಗೆ ಧೋನಿ ಕೆಲವೊಂದು ಟಿಪ್ಸ್ ಗಳನ್ನು ನೀಡಿದ್ದಾರೆ. ಧೋನಿ ನೀಡುತ್ತಿರುವ ಟಿಪ್ಸ್ ಗಳ ವಿಡಿಯೋವನ್ನು ಸಿಎಸ್ ಕೆ ತಂಡ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದೆ.
ರಾಜ್ಯವರ್ಧನ್ ಅವರು ಮೊದಲು ಬೌಲಿಂಗ್ ಅಭ್ಯಾಸ ನಡೆಸಿದ್ರು. ಆನಂತರ ಪ್ಯಾಟ್ ಕಟ್ಟಿಕೊಂಡು ಬ್ಯಾಟಿಂಗ್ ತಾಲೀಮ್ ಕೂಡ ನಡೆಸಿದ್ದರು. ಈ ವೇಳೆ ಧೋನಿ ರಾಜ್ಯವರ್ಧನ್ ಅವರಿಗೆ ಬ್ಯಾಟಿಂಗ್ ಬಗ್ಗೆ ಮಾರ್ಗದರ್ಶನವನ್ನು ನೀಡಿದ್ದರು. IPL 2022– Rajvardhan Hangargekar Receives Advice From MS Dhoni
ರಾಜ್ಯವರ್ಧನ್ ಹಂಗರ್ಗೆಕರ್ ಅವರು 19 ವಯೋಮಿತಿ ವಿಶ್ವಕಪ್ ನಲ್ಲಿ ಅದ್ಭುತವಾದ ಪ್ರದರ್ಶನವನ್ನು ನೀಡಿದ್ದರು. ಹೀಗಾಗಿ ಐಪಿಎಲ್ ಮೆಗಾ ಹರಾಜಿನಲ್ಲಿ 2.50 ಕೋಟಿ ರೂಪಾಯಿ ನೀಡಿ ಸಿಎಸ್ ಕೆ ಖರೀದಿ ಮಾಡಿತ್ತು.
ಮಾರ್ಚ್ 26ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಸಿಎಸ್ ಕೆ ತಂಡ ಕೆಕೆಆರ್ ತಂಡವನ್ನು ಎದುರಿಸಲಿದೆ. ಹಾಲಿ ಚಾಂಪಿಯನ್ ಆಗಿರುವ ಸಿಎಸ್ ಕೆ ತಂಡ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ.