IPL 2022 – ಪಂಜಾಬ್ ತಂಡದ ಸ್ಟ್ರೇಂತ್ ಮತ್ತು ವೀಕ್ ನೆಸ್..! ಈ ಬಾರಿಯ ತಂಡ ಹೀಗಿದೆ..!

ಪಂಜಾಬ್ ಕಿಂಗ್ಸ್.. ಐಪಿಎಲ್ ಟೂರ್ನಿಯ ನತದೃಷ್ಟ ತಂಡ. ನೆಸ್ ವಾಡಿಯಾ, ಪ್ರೀತಿ ಝಿಂಟಾ, ಮೋಹಿತ್ ಬರ್ಮನ್ ಮತ್ತು ಕರಣ್ ಪೌಲ್ ಮಾಲೀಕತ್ವದ ಪಂಜಾಬ್ ತಂಡ ಗ್ರೂಪ್ ಹಂತಕ್ಕೆ ಸೀಮಿತವಾಗಿದೆ.
2008ರಲ್ಲಿ ಸೆಮಿಫೈನಲ್ ಮತ್ತು 2014ರಲ್ಲಿ ಫೈನಲ್ ತಲುಪಿದ್ದು ಬಿಟ್ರೆ ಪಂಜಾಬ್ ಕಿಂಗ್ಸ್ ತಂಡದ ಸಾಧನೆ ಅಷ್ಟಕ್ಕಷ್ಟೇ. ತಂಡದಲ್ಲಿ ಸರ್ವ ಶ್ರೇಷ್ಠ ಆಟಗಾರರು ಇದ್ರೂ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಸಹ ಮಾಲೀಕರಾದ ಪ್ರೀತಿ ಝಿಂಟಾ ಪ್ರತಿ ಪಂದ್ಯವನ್ನು ವೀಕ್ಷಣೆ ಮಾಡುತ್ತಾರೆ. ಪ್ರತಿ ಬಾರಿಯೂ ನಿರಾಸೆ ಅನುಭವಿಸುತ್ತಾರೆ.
2020ರ ತನಕ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 2021ರಲ್ಲಿ ಪಂಜಾಬ್ ಕಿಂಗ್ಸ್ ಅಂತ ಹೆಸರನ್ನು ಕೂಡ ಬದಲಾವಣೆ ಮಾಡಿಕೊಂಡಿತ್ತು. ಅನಿಲ್ ಕುಂಬ್ಳೆ ತಂಡದ ಹೆಡ್ ಕೋಚ್ ಆಗಿದ್ದಾರೆ. ತಂಡದ ನಾಯಕರಾಗಿದ್ದ ಕೆ.ಎಲ್. ರಾಹುಲ್ ಈಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ಸಾರಥಿಯಾಗಿದ್ದಾರೆ. ಹೀಗಾಗಿ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ ವಾಲ್ ಅವರು 2022ರ ಸಾಲಿನ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ರಿಟೇನ್ ಮಾಡಿಕೊಂಡ ಆಟಗಾರರು
ಮಯಾಂಕ್ ಅಗರ್ ವಾಲ್ – 12 ಕೋಟಿ ರೂ.
ಆರ್ಶದೀಪ್ ಸಿಂಗ್ – 4 ಕೋಟಿ ರೂ.
ಪಂಜಾಬ್ ಕಿಂಗ್ಸ್ ಒಟ್ಟು ಖರ್ಚು -86.55 ಕೋಟಿ ರೂ.
ಜೇಬಿನಲ್ಲಿ ಉಳಿಸಿಕೊಂಡ ಹಣ – 3.45 ಕೋಟಿ ರೂ.
ಬಿಡ್ಡಿಂಗ್ ಖರೀದಿನಲ್ಲಿ ಖರ್ಚು 70.55 ಕೋಟಿ ರೂ.
ರಿಟೇನ್ ಆಟಗಾರರ ಖರ್ಚು – 16 ಕೋಟಿ ರೂ.
ತಂಡದಲ್ಲಿರುವ ಆಟಗಾರರ ಸಂಖ್ಯೆ -25
18 ಮಂದಿ ಭಾರತ ಮತ್ತು 7 ಮಂದಿ ವಿದೇಶಿ ಆಟಗಾರರು

ಪಂಜಾಬ್ ಕಿಂಗ್ಸ್ ತಂಡ ಕೇವಲ ಇಬ್ಬರು ಆಟಗಾರರನ್ನು ಮಾತ್ರ ರಿಟೇನ್ ಮಾಡಿಕೊಂಡಿದೆ. ಮಯಾಂಕ್ ಅಗರ್ ವಾಲ್ 12 ಕೋಟಿ ಮತ್ತು ಬೌಲರ್ ಅರ್ಶದೀಪ್ ಸಿಂಗ್ 4 ಕೋಟಿ ರೂಪಾಯಿ ನೀಡಿ ತಂಡದಲ್ಲಿ ಉಳಿಸಿಕೊಂಡಿದೆ.
ಇನ್ನುಳಿದಂತೆ 23 ಆಟಗಾರರನ್ನು ಐಪಿಎಲ್ ಮೆಗಾ ಹರಾಜಿನಲ್ಲಿ ಖರೀದಿ ಮಾಡಿದೆ. ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡ 74 ಕೋಟಿ ರೂಪಾಯಿ ಜೇಬಿನಲ್ಲಿಟ್ಟುಕೊಂಡಿತ್ತು. ಅಲ್ಲದೆ 70.55 ಕೋಟಿ ರೂಪಾಯಿ ಖರ್ಚು ಮಾಡಿ 23 ಆಟಗಾರರನ್ನು ಖರೀದಿ ಮಾಡಿದೆ. ಇದರಲ್ಲಿ ಏಳು ಮಂದಿ ವಿದೇಶಿ ಮತ್ತು 18 ಮಂದಿ ಭಾರತದ ಆಟಗಾರರು ಇದ್ದಾರೆ.

ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ಈ ಹಿಂದೆ ಮಾಡಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನು ಮಾಡಿದೆ. ಶಿಖರ್ ಧವನ್, ಶಾರೂಕ್ ಖಾನ್, ಜಾನಿ ಬೇರ್ ಸ್ಟೋವ್, ಒಡಿಯನ್ ಸ್ಮಿತ್, ಕಾಗಿಸೊ ರಬಾಡ, ಲಿಯಾಮ್ ಲಿವಿಂಗ್ ಸ್ಟೋನ್, ರಾಹುಲ್ ಚಾಹರ್ ಮೊದಲಾದ ಆಟಗಾರರನ್ನು ದುಬಾರಿ ಬೆಲೆ ನೀಡಿ ಖರೀದಿ ಮಾಡಿದೆ.
ಮೇಲ್ನೋಟಕ್ಕೆ ಪಂಜಾಬ್ ಕಿಂಗ್ಸ್ ಬಲಿಷ್ಠವಾಗಿಯೇ ಕಂಡುಬರುತ್ತದೆ. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಸ್ವಲ್ಪ ಮಟ್ಟಿನ ವೀಕ್ ಇದೆ ಅಂತ ಅನ್ಸುತ್ತೆ. ಮಯಾಂಕ್ ಮತ್ತು ಧವನ್ ಇನಿಂಗ್ಸ್ ಆರಂಭಿಸಿದ್ರೆ, ಶಾರೂಕ್ ಖಾನ್ ಮ್ಯಾಚ್ ಫೀನಿಶರ್ ಆಗಿದ್ದಾರೆ. ಲಿವಿಂಗ್ ಸ್ಟೋನ್ ಮತ್ತು ಜಾನಿ ಬೇರ್ ಸ್ಟೋವ್ ಅವರು ಮಧ್ಯಮ ಕ್ರಮಾಂಕದಲ್ಲಿ ಆಧಾರವಾಗಬೇಕಿದೆ. ಬೌಲಿಂಗ್ ನಲ್ಲಿ ಕಾಗಿಸೊ ರಬಾಡ ಟ್ರಂಪ್ ಕಾರ್ಡ್ ಬೌಲರ್. ರಾಹುಲ್ ಚಾಹರ್ ಸ್ಪಿನ್ ವಿಭಾಗದ ಉಸ್ತುವಾರಿ ವಹಿಸಬೇಕಿದೆ.
ಈಗಾಗಲೇ ತಂಡದ ಬಗ್ಗೆ ಸಹ ಮಾಲೀಕರಾದ ನೆಸ್ ವಾಡಿಯಾ ಕೂಡ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಕೆಲಸ ಮುಗಿದಿದೆ. ಇನ್ನೂ ಏನು ಇದ್ರೂ ತಂಡದ ನಿರ್ವಹಣೆ ಯಾವ ರೀತಿ ಇರುತ್ತದೆ ಅನ್ನೋದು ಮುಖ್ಯ ಅಂತ ಹೇಳಿದ್ದಾರೆ. IPl 2022 – punjab kings full team details
ಪಂಜಾಬ್ ಕಿಂಗ್ಸ್ ತಂಡ ಹೀಗಿದೆ..!
ಬ್ಯಾಟ್ಸ್ ಮೆನ್ ಗಳು
ಮಯಾಂಕ್ ಅಗರ್ ವಾಲ್ – 12 ಕೋಟಿ ರೂ.
ಶಿಖರ್ ಧವನ್ – 8.25 ಕೋಟಿ ರೂ.
ಶಾರೂಕ್ ಖಾನ್ – 9 ಕೋಟಿ ರೂ.
ಪ್ರೇರಕ್ ಮಂಕಡ್ – 20 ಲಕ್ಷ ರೂ.
ಭಾನುಕಾ ರಾಜಪಕ್ಷೆ – 50 ಲಕ್ಷ ರೂ.
ಪ್ರಬ್ ಸಿಮ್ರಾನ್ ಸಿಂಗ್ – 60 ಲಕ್ಷ ರೂ.
ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ಗಳು
ಜಾನಿ ಬೇರ್ ಸ್ಟೋವ್ – 6.75 ಲಕ್ಷ ರೂ.
ಜಿತೇಶ್ ಶರ್ಮಾ – 20 ಲಕ್ಷ ರೂ.
ಆಲ್ ರೌಂಡರ್ ಗಳು
ಬೆನ್ನಿ ಹೊವೆಲ್ – 40 ಲಕ್ಷ ರೂ.
ಬಲ್ಜಿತ್ ಸಿಂಗ್ – 20 ಲಕ್ಷ ರೂ.
ಅನೀಶ್ ಪಟೇಲ್ – 20 ಲಕ್ಷ ರೂ.
ಲಿಯಾಮ್ ಲಿವಿಂಗ್ ಸ್ಟೋನ್ – 11.50 ಕೋಟಿ ರೂ.
ರಿಶಿ ಧವನ್ – 55 ಲಕ್ಷ ರೂ.
ಅಥರ್ವ ಟೈಡ್ – 20 ಲಕ್ಷ ರೂ.
ಬೌಲರ್ ಗಳು
ಆರ್ಶದೀಪ್ ಸಿಂಗ್ -4 ಕೋಟಿ ರೂ.
ವೃಥಿಕ್ ಚಟರ್ಜಿ – 20 ಲಕ್ಷ ರೂ.
ಒಡಿಯನ್ ಸ್ಮಿತ್ – 6 ಕೋಟಿ ರೂ.
ಸಂದೀಪ್ ಶರ್ಮಾ – 50 ಲಕ್ಷ ರೂ.
ರಾಜ್ ಬಾವಾ – 2 ಕೋಟಿ ರೂ.
ನಥಾನ್ ಎಲಿಸ್ – 75 ಲಕ್ಷ ರೂ.
ವೈಭವ್ ಆರೋರ – 2 ಕೋಟಿ ರೂ.
ಇಶಾನ್ ಪೊರೆಲ್ – 25 ಲಕ್ಷ ರೂ.
ಹಪ್ರೀತ್ ಬ್ರಾರ್ – 3.80 ಕೋಟಿ ರೂ.
ರಾಹುಲ್ ಚಾಹರ್ – 5.25 ಕೋಟಿ ರೂ.
ಕಾಗಿಸೊ ರಬಾಡ – 9.25 ಕೋಟಿ ರೂ.