ಕಗೀಸೋ ರಬಾಡ(4/33) ಪರಿಣಾಮಕಾರಿ ಬೌಲಿಂಗ್ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್(62*) ಅದ್ಭುತ ಅರ್ಧಶತಕದ ನೆರವಿನಿಂದ ಬಲಿಷ್ಠ ಕಮ್‌ಬ್ಯಾಕ್ ಮಾಡಿದ ಪಂಜಾಬ್ ಕಿಂಗ್ಸ್, ಗುಜರಾತ್ ಟೈಟನ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಸಿದೆ.
Shikhar & Rajapaksa, IPL 2022, SPORTS KARNATAKA
ಡಿ.ವೈ.ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್, 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್‌ಗಳಿಸಿತು. ಈ ಟಾರ್ಗೆಟ್ ಬೆನ್ನತ್ತಿದ ಪಂಜಾಬ್ ಕಿಂಗ್ಸ್ 16 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 145 ರನ್‌ಗಳಿಸಿ ಗೆದ್ದುಬೀಗಿತು. ಪಂಜಾಬ್ ಪರ ಧವನ್(62*), ರಾಜಪಕ್ಸ(40) ಹಾಗೂ ಲಿವಿಂಗ್‌ಸ್ಟೋನ್(30*) ಗೆಲುವಿನ ರೂವಾರಿಗಳಾದರು. ಈಗೆಲುವಿನೊಂದಿಗೆ ಪಂಜಾಬ್ ಅಂಕಪಟ್ಟಿಯಲ್ಲಿ 10 ಪಾಯಿಂಟ್ಸ್‌ನೊಂದಿಗೆ 5ನೇ ಸ್ಥಾನಕ್ಕೇರಿತು.
SHIKHAR DHAWAN, IPL 2022, SPORTS KARNATAKA
ಕಿಂಗ್ಸ್ ಭರ್ಜರಿ ಬ್ಯಾಟಿಂಗ್:
ಗುಜರಾತ್ ನೀಡಿದ 144 ರನ್‌ಗಳ ಟಾರ್ಗೆಟ್ ಎದುರಿಸಿದ ಪಂಜಾಬ್ ಕಿಂಗ್ಸ್, ಆರಂಭಿಕ ಬ್ಯಾಟ್ಸ್‌ಮನ್ ಜಾನಿ ಬೈರ್ಸ್ಟೋವ್(1) ಅವರನ್ನ ಬಹುಬೇಗನೆ ಕಳೆದುಕೊಂಡಿತು. ಆದರೆ ನಂತರ ಜೊತೆಯಾದ ಶಿಖರ್ ಧವನ್ 62* ರನ್(53 ಬಾಲ್, 8 ಬೌಂಡರಿ, 1 ಸಿಕ್ಸ್) ಹಾಗೂ ಬನುಕಾ ರಾಜಪಕ್ಸ 40 ರನ್(28 ಬಾಲ್, 5 ಬೌಂಡರಿ, 1 ಸಿಕ್ಸ್) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೇ 2ನೇ ವಿಕೆಟ್‌ಗೆ 87 ರನ್‌ಗಳ ಅದ್ಭುತ ಜೊತೆಯಾಟವಾಡಿದ ಈ ಜೋಡಿ, ಪಂಜಾಬ್ ಗೆಲುವಿನ ಹಾದಿಯನ್ನ ಸುಗಮಗೊಳಿಸಿದರು.

ನಂತರ ಬಂದ ಲಿಯಾಮ್ ಲಿವಿಂಗ್‌ಸ್ಟೋನ್ 30* ರನ್(10 ಬಾಲ್, 2 ಬೌಂಡರಿ, 3 ಸಿಕ್ಸ್) ಸ್ಪೋಟಕ ಆಟವಾಡಿದರು. ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ ಶಮಿ ಬೌಲಿಂಗ್‌ನಲ್ಲಿ 28 ರನ್‌ಗಳಿಸಿದ ಲಿವಿಂಗ್‌ಸ್ಟೋನ್, ಪಂಜಾಬ್ ತಂಡವನ್ನು ಗೆಲುವಿನ ದಡಸೇರಿಸಿದರು. ಅಲ್ಲದೇ 3ನೇ ವಿಕೆಟ್‌ಗೆ ಇವರಿಬ್ಬರು 48* ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು.
SHUBMAN GILL, IPL 2022, SPORTS KARNATAKAಟೈಟನ್ಸ್ ಬ್ಯಾಟಿಂಗ್ ವೈಫಲ್ಯ:
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ಟೈಟನ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಶುಭ್ಮನ್ ಗಿಲ್(9) ಬಹುಬೇಗ ವಿಕೆಟ್ ಒಪ್ಪಿಸಿದರು. ಇದಾದ ಕೆಲವೇ ಹೊತ್ತಿನಲ್ಲಿ ವೃದ್ಧಿಮಾನ್ ಸಾಹ(21) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ(1) ಬ್ಯಾಟಿಂಗ್ ವೈಫಲ್ಯ ಎದುರಿಸಿದರು. ೀ ಹಂತದಲ್ಲಿ ಕಣಕ್ಕಿಳಿದ ಡೇವಿಡ್ ಮಿಲ್ಲರ್(11) ಉತ್ತಮ ಆರಂಭ ಪಡೆದರು, ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಎಡವಿದರು. ಪರಿಣಾಮ ಗುಜರಾತ್ 67 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
SAI SUDHARSAN, IPL 2022, SPORTS KARNATAKA
ಸುದರ್ಶನ್ ಅರ್ಧಶತಕ:
ಈ ಹಂತದಲ್ಲಿ ಜೊತೆಯಾದ ಸಾಯಿ ಸುದರ್ಶನ್ 64* ರನ್(50 ಬಾಲ್, 5 ಬೌಂಡರಿ, 1 ಸಿಕ್ಸ್) ಅದ್ಭುತ ಆಟವಾಡಿದರು. ಪಂಜಾಬ್ ಕಿಂಗ್ಸ್ ಬೌಲರ್‌ಗಳಿಗೆ ದಿಟ್ಟ ಉತ್ತರ ನೀಡಿದ ಸುದರ್ಶನ್, ಐಪಿಎಲ್‌ನ ಚೊಚ್ಚಲ ಅರ್ಧಶತಕ ಬಾರಿಸಿ ಮಿಂಚಿದರು. ಅಲ್ಲದೇ 5ನೇ ವಿಕೆಟ್‌ಗೆ ರಾಹುಲ್ ತೇವಾಟಿಯ(11) ಜೊತೆಗೂಡಿ 45(30) ರನ್‌ಗಳಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಿದರು. 6ನೇ ಕ್ರಮಾಂಕದಲ್ಲಿ ಬಂದ ರಶೀದ್ ಖಾನ್(0), ಪ್ರದೀಪ್ ಸಾಂಗ್ವಾನ್(2), ಲೊಕ್ಕಿ ಫೆರ್ಗುಸನ್(5) ಬಹುಬೇಗನೆ ಔಟಾಗಿ ನಿರಾಸೆ ಮೂಡಿಸಿದರು.

ರಬಾಡ ಮಾರಕ ದಾಳಿ:
ಪಂಜಾಬ್ ಪರ ಬೌಲರ್‌ಗಳು ಸಾಂಘಿಕ ಪ್ರದರ್ಶನದ ಮೂಲಕ ಗುಜರಾತ್ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು. ಪ್ರಮುಖವಾಗಿ ಪಂಜಾಬ್ ಕಿಂಗ್ಸ್ ಪರ ಮಾರಕ ದಾಳಿ ನಡೆಸಿದ ಕಗೀಸೋ ರಬಾಡ(4/33) ಅದ್ಭುತ ಬೌಲಿಂಗ್ ಪ್ರದರ್ಶಿಸಿದರೆ. ರಿಶಿ ಧವನ್(1/26), ಅರ್ಶದೀಪ್ ಸಿಂಗ್(1/35), ಲಿವಿಂಗ್‌ಸ್ಟೋನ್(1/15) ಹಾಗೂ ಉತ್ತಮ ಬೌಲಿಂಗ್ ಪ್ರದರ್ಶಿಸಿದರು.