ಐಪಿಎಲ್ ಅಂದ್ರೆ ಹಾಗೇ… ಇಲ್ಲಿ ಪ್ರತಿ ಪಂದ್ಯವೂ ಬ್ಯಾಟಲ್ ಆಫ್ ಸಿಕ್ಸರ್ಸ್ ಇದ್ದಂತೆ. ಇಲ್ಲಿ ಸ್ಪೋಟಕ ಬ್ಯಾಟಿಂಗ್‌ನಿಂದ ಸಿಕ್ಸರ್‌ಗಳ ಮಳೆಯನ್ನೇ ಸುರಿಸಿದ ಹಲವು ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಿದ್ದಾರೆ. ಇವರ ಸಾಲಿಗೆ ಇದೀಗ ಲಿಯಾಮ್‌ಸ್ಟೋನ್ ಸೇರ್ಪಡೆಗೊಂಡಿದ್ದಾರೆ.

ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಸದ್ದು ಮಾಡಿರುವ ಲಿಯಾಮ್ ಲಿವಿಂಗ್‌ಸ್ಟೋನ್, ಕ್ರಿಕೆಟ್ ಜಗತ್ತಿನಲ್ಲಿ ಅತಿದೊಡ್ಡ ಸಿಕ್ಸರ್ ಬಾರಿಸಿರುವ ಹೆಗ್ಗಳಿಕೆ ಹೊಂದಿದ್ದಾರೆ. ಐಪಿಎಲ್‌ನಲ್ಲೂ ಈಗಾಗಲೇ ತಮ್ಮ ತಾಕತ್ತು ತೋರಿಸಿರುವ ಲಿವಿಂಗ್‌ಸ್ಟೋನ್, ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಬರೋಬ್ಬರಿ 117 ಮೀಟರ್ ದೂರದ ಸಿಕ್ಸರ್ ಬಾರಿಸಿ ಅಬ್ಬರಿಸಿದರು.
livingstone, ipl 2022, sports karnakata
ಗುಜರಾತ್ ನೀಡಿದ 144 ರನ್‌ಗಳನ್ನು ಸುಲಭವಾಗಿ ಚೇಸ್ ಮಾಡಿದ ಪಂಜಾಬ್ ಪರ 2ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಲಿವಿಂಗ್‌ಸ್ಟೋನ್, ಮೊಹಮ್ಮದ್ ಶಮಿ ಮಾಡಿದ ಇನ್ನಿಂಗ್ಸ್‌ನ 16ನೇ ಓವರ್‌ನ ಮೊದಲ ಬಾಲ್‌ನಲ್ಲಿ 117 ಮೀಟರ್ ದೂರದ ಸಿಕ್ಸ್ ಸಿಡಿಸಿದರು. ಆ ಮೂಲಕ 2022ರ ಐಪಿಎಲ್‌ನಲ್ಲಿ ದಾಖಲಾದ ಅತಿದೊಡ್ಡ ಸಿಕ್ಸರ್ ಬಾರಿಸಿದರು. ಅಲ್ಲದೇ ಈ ಓವರ್‌ನಲ್ಲಿ 3 ಸಿಕ್ಸ್, 2 ಬೌಂಡರಿ ಸಹಿತ 28 ರನ್‌ಗಳಿಸಿ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.
ಅತಿದೊಡ್ಡ ಸಿಕ್ಸ್ IPL 2022ರಲ್ಲಿ:
ಲಿವಿಂಗ್‌ಸ್ಟೋನ್ – 117 ಮೀಟರ್
ಡೆವಾಲ್ಡ್ ಬ್ರೇವಿಸ್ – 112 ಮೀಟರ್
ಲಿವಿಂಗ್‌ಸ್ಟೋನ್ – 108 ಮೀಟರ್
ಜಾಸ್ ಬಟ್ಲರ್ – 107 ಮೀಟರ್
ಲಿವಿಂಗ್‌ಸ್ಟೋನ್ – 106 ಮೀಟರ್
ಅತಿದೊಡ್ಡ ಸಿಕ್ಸ್ – ಒಟ್ಟಾರೆ IPLನಲ್ಲಿ
ಅಲ್ಬಿ ಮಾರ್ಕೆಲ್ – 125 ಮೀಟರ್(2008)
ಪ್ರವೀಣ್ ಕುಮಾರ್ – 124 ಮೀಟರ್(2011)
ಆಡಂ ಗಿಲ್ಕ್ರಿಸ್ಟ್ – 122 ಮೀಟರ್(2011)
ರಾಬಿನ್ ಉತ್ತಪ್ಪ – 120 ಮೀಟರ್(2010)
ಕ್ರಿಸ್ ಗೇಯ್ಲ್ – 119 ಮೀಟರ್(2013)
ಯುವರಾಜ್ ಸಿಂಗ್ – 119 ಮೀಟರ್(2009)
ರಾಸ್ ಟೇಲರ್ – 119 ಮೀಟರ್(2008)
ಲಿವಿಂಗ್‌ಸ್ಟೋನ್ – 117 ಮೀಟರ್(2022)*
ಗೌತಮ್ ಗಂಭೀರ್ – 117 ಮೀಟರ್ (2013)
ಬೆನ್ ಕಟ್ಟಿಂಗ್ – 117 ಮೀಟರ್ (2016)