IPL 2022- ಆರ್ ಸಿಬಿ ಮತ್ತು ಪುನೀತ್ ರಾಜ್ ಕುಮಾರ್..!

ಟ್ವಿಂಕಲ್ ಟ್ವಿಂಕಲ್ ಲಿಟಿಲ್ ಸ್ಟಾರ್.. ವಿ ಆಲ್ ಲವ್ ಯೂ ಪವರ್ ಸ್ಟಾರ್…!
ಹೌದು, ಇದು ಕರ್ನಾಟಕದ ಯುವರತ್ನ ಪುನೀತ್ ರಾಜ್ ಕುಮಾರ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿದ್ದ ನಂಟು.
ಆದ್ರೆ ಈ ಬಾರಿಯ ಐಪಿಎಲ್ ನೋಡಲು ನಮ್ಮ ಯುವ ರತ್ನನೇ ಇಲ್ಲ. ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಗೇ ಕನ್ನಡ ಚಿತ್ರರಂಗವನ್ನು ಶೂನ್ಯ ಭಾವ ಮೂಡಿಸಿ ಹೊರಟು ಹೋಗಿಬಿಟ್ರು ಪುನಿತ್ ರಾಜ್ ಕುಮಾರ್.
ಆದ್ರೆ ಪುನೀತ್ ರಾಜ್ ಕುಮಾರ್ ಬಿಟ್ಟು ಹೋದ ನೆನಪುಗಳನ್ನು ಕನ್ನಡ ಚಿತ್ರರಂಗ ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಾಗಂತ ಅಪ್ಪು ಕೇವಲ ಕನ್ನಡ ಚಿತ್ರರಂಗಕ್ಕೆ ಸೀಮಿತವಾಗಿರಲಿಲ್ಲ. ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಪುನೀತ್ ರಾಜ್ ಕುಮಾರ್ ಸ್ಪೂರ್ತಿಯ ಚಿಲುಮೆಯಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ಮಾಡಿರುವ ಸಾಧನೆಗಳು, ಸಾಮಾಜಿಕ ಸೇವೆಗಳನ್ನು ನೆನಪು ಮಾಡಿಕೊಂಡಾಗ ಕಣ್ಣಂಚಿನಲ್ಲಿ ನೀರು ಬರುತ್ತೆ.
ಮಾರ್ಚ್ 17ಕ್ಕೆ ಜೀವ ಇರದ ಜೀವಂತ ಹೃದಯಕ್ಕೆ 47ನೇ ಹುಟ್ಟುಹಬ್ಬ. ಆದ್ರೆ ಅದನ್ನು ಸಂಭ್ರಮಿಸಲು ಅವರು ಜೊತೆಗಿಲ್ಲ. ಆದ್ರೆ ಅಭಿಮಾನಿಗಳ ಹೃದಯದಲ್ಲಿ ಅಪ್ಪು ಎಂದಿಗೂ ಅಮರ.
ಅಂದ ಹಾಗೇ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಪುನೀತ್ ರಾಜ್ ಕುಮಾರ್ ನಡುವೆ ಉತ್ತಮವಾದ ಭಾಂಧವ್ಯವಿತ್ತು. 2010ರಲ್ಲಿ ಪುನೀತ್ ರಾಜ್ ಕುಮಾರ್ ಆರ್ ಸಿಬಿ ತಂಡದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಕ್ರೀಡೆಯ ಮೇಲೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದ ಪುನೀತ್ ರಾಜ್ ಕುಮಾರ್ ಅವರು ಪ್ರೋ

ಕಬಡ್ಡಿಯಲ್ಲೂ ಬೆಂಗಳೂರು ಬುಲ್ಸ್ ತಂಡಕ್ಕೂ ಬ್ರಾಂಡ್ ಅಂಬಾಸಿಡರ್ ಆಗಿದ್ದರು.
ಇನ್ನು ಪ್ರತಿ ವರ್ಷ ಐಪಿಎಲ್ ಪಂದ್ಯವನ್ನು ವೀಕ್ಷಣೆ ಮಾಡುತ್ತಿದ್ದರು. ಅದರಲ್ಲೂ ಆರ್ ಸಿಬಿ ತಂಡವನ್ನು ಚಿಯರ್ ಅಪ್ ಮಾಡುತ್ತಿದ್ದರು. ತಮ್ಮ ಅಭಿಮಾನಿಗಳನ್ನು ಆರ್ ಸಿಬಿ ತಂಡದ ಅಭಿಮಾನಿಗಳನ್ನಾಗಿಸಿದ್ದು ಅಲ್ಲದೆ ಆರ್ ಸಿಬಿಯ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಪುನೀತ್ ರಾಜ್ ಕುಮಾರ್ ಪಾತ್ರ ಕೂಡ ದೊಡ್ಡದಿದೆ.
ಆರ್ ಸಿಬಿ ಜೆರ್ಸಿ, ಬಾವುಟಗಳನ್ನು ಕೈಯಲ್ಲಿಟ್ಟುಕೊಂಡು ಅಂಗಣದಲ್ಲಿದ್ರೆ ಅಪ್ಪು ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದರು. IPL 2022- punith rajkumar and royal challengers bengaluru
ಇದೀಗ ಐಪಿಎಲ್ ಪಂದ್ಯ ನೋಡಲು ಅಪ್ಪು ಇಲ್ಲ. ಆರ್ ಸಿಬಿ ತಂಡಕ್ಕೆ ಚಿಯರ್ ಅಪ್ ಮಾಡಲು ಪವರ್ ಸ್ಟಾರ್ ಇಲ್ಲ. ಅವರ ನೆನಪು ಮಾತ್ರ ಸದಾ ಕಾಡುತ್ತಿರುತ್ತದೆ.
ಈ ನಡುವೆ, ಆರ್ ಸಿಬಿ ಮಾಲೀಕರು ಅಪ್ಪು ಅಭಿಮಾನಿಗಳ ಆಸೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಅಪ್ಪು ಅಭಿಮಾನಿಗಳಿಗೆ ಈ ಬಾರಿಯ ಐಪಿಎಲ್ ನಲ್ಲಿ ಡೇವಿಡ್ ವಾರ್ನರ್ ಆರ್ ಸಿಬಿ ತಂಡದ ಪರ ಆಡಬೇಕು ಎಂದು ಬಯಸಿದ್ದರು. ಆದ್ರೆ ಡೇವಿಡ್ ವಾರ್ನರ್ ಅವರನ್ನು ಖರೀದಿ ಮಾಡಲು ಆರ್ ಸಿಬಿಗೆ ಸಾಧ್ಯವಾಗಲಿಲ್ಲ.
ಅದೇನೇ ಇರಲಿ, ವಿಧಿಯಾಟವನ್ನು ತಿಳಿಯಲು ಯಾರಿಂದಲೂ ಸಾಧ್ಯವಿಲ್ಲ. ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ತಂಡಕ್ಕೆ ಚಿಯರ್ ಅಪ್ ಮಾಡಲು ಪವರ್ ಸ್ಟಾರ್ ಇಲ್ಲ. ಆದ್ರೆ ಅವರ ನೆನಪು ಮಾತ್ರ ಇದೆ..!