ಆಸೀಸ್ ಸ್ಟಾರ್ ಪ್ಲೇಯರ್ ಪ್ಯಾಟ್ ಕಮ್ಮಿನ್ಸ್ ಸಿಡಿಲಬ್ಬರದ ಆಟ ಐಪಿಎಲ್ನ ಐದು ಬಾರಿಯ ಚಾಂಪಿಯನ್ಸ್, ಮುಂಬೈ ಇಂಡಿಯನ್ಸ್ ತಂಡವನ್ನು ಬೆಚ್ಚಿಬೀಳಿಸಿದೆ. ಬೌಂಡರಿ, ಸಿಕ್ಸರ್ಗಳಿಂದ ಧೂಳೆಬ್ಬಿಸಿದ ಕಮ್ಮಿನ್ಸ್ ಆಟಕ್ಕೆ ಐಪಿಎಲ್ನ ಹಲವು ದಾಖಲೆಗಳು ಉಡೀಸ್ ಆಗಿದೆ.
ಪುಣೆಯ ಎಂಸಿಎ ಅಂಗಳದಲ್ಲಿ ನಡೆದ ಮುಂಬೈ ವಿರುದ್ದದ ಫೈಟ್ನಲ್ಲಿ ಪ್ಯಾಟ್ ಕಮ್ಮಿನ್ಸ್ ಆಡಿದ ಸ್ಪೋಟಕ ಆಟ, ಐಪಿಎಲ್ ಇತಿಹಾಸದ ಸರ್ವಶ್ರೇಷ್ಠ ಇನ್ನಿಂಗ್ಸ್ ಅನ್ನೋದ್ರಲ್ಲಿ ಡೌಟೇ ಇಲ್ಲ. ಬೌಂಡರಿ, ಸಿಕ್ಸರ್ಗಳ ಮೂಲಕವೇ ಅಬ್ಬರಿಸಿದ ಪ್ಯಾಟ್ ಕಮ್ಮಿನ್ಸ್, ಐಪಿಎಲ್ನಲ್ಲಿ ವೇಗದ ಅರ್ಧಶತಕ ಬಾರಿಸಿ, ಕೆ.ಎಲ್. ರಾಹುಲ್ ದಾಖಲೆಯನ್ನು ಸರಿಗಟ್ಟಿದ್ದಾರೆ. 14 ಬಾಲ್ಗಳಲ್ಲಿ 5 ಬೌಂಡರಿ, 5 ಸಿಕ್ಸರ್ ನೆರವಿನಿಂದ ಅರ್ಧಶತಕ ಸಿಡಿಸಿ ಅಬ್ಬರಿಸಿದರು.
ಈ ಹಿಂದೆ 2018ರ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕನ್ನಡಿಗ ಕೆ.ಎಲ್. ರಾಹುಲ್, 14 ಬಾಲ್ಗಳಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಇದೀಗ ಪ್ಯಾಟ್ ಕಮ್ಮಿನ್ಸ್, 14 ಬಾಲ್ಗಳಲ್ಲಿ ಅರ್ಧಶತಕ ಬಾರಿಸಿ ಕೆ.ಎಲ್. ರಾಹುಲ್ ದಾಖಲೆ ಸಮಗೊಳಿಸಿದರು. ಪ್ಯಾಟ್ ಕಮ್ಮಿನ್ಸ್ ಅವರ ಈ ಸ್ಪೋಟಕ ಆಟ ಮುಂಬೈ ವಿರುದ್ಧದ ಜಿದ್ದಾಜಿದ್ದಿನ ಪಂದ್ಯದಲ್ಲಿ ಕೊಲ್ಕತ್ತಾ ತಂಡಕ್ಕೆ ಸುಲಭದ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.
ಐಪಿಎಲ್ನಲ್ಲಿ ವೇಗದ ಅರ್ಧಶತಕ
14 ಬಾಲ್ಗಳು – ಕೆ.ಎಲ್.ರಾಹುಲ್ v DC (2018)
14 ಬಾಲ್ಗಳು – ಪ್ಯಾಟ್ ಕಮ್ಮಿನ್ಸ್ v MI (2018)
15 ಬಾಲ್ಗಳು – ಯೂಸಫ್ ಪಠಾಣ್ v SRH (2014)
15 ಬಾಲ್ಗಳು – ಸುನೀಲ್ ನರೈನ್ v RCB (2017)
16 ಬಾಲ್ಗಳು – ಸುರೇಶ್ ರೈನಾ v PBKS (2014)
16 ಬಾಲ್ಗಳು – ಇಶಾನ್ ಕಿಶನ್ v SRH (2021)
ಒಂದು ಓವರ್ನಲ್ಲಿ 34 ರನ್ಗಳು
ಚುಟುಕು ಕ್ರಿಕೆಟ್ ಸಮರದಲ್ಲಿ ಹಲವು ವಿಶ್ವದ ಶ್ರೇಷ್ಠ ಬೌಲರ್ಗಳು ಸೇರಿದಂತೆ ಪ್ರತಿಯೊಬ್ಬ ಆಟಗಾರರು ದುಬಾರಿ ಬೌಲಿಂಗ್ ಪ್ರದರ್ಶಿಸಿದ್ದಾರೆ. ಹಲವು ಬ್ಯಾಟ್ಸ್ಮನ್ಗಳು ಒಂದೇ ಓವರ್ನಲ್ಲಿ ಅತ್ಯಧಿಕ ಸಿಡಿಸಿ ಬೌಲರ್ಗಳ ಮೇಲೆ ಪ್ರಾಬಲ್ಯ ಮೆರೆದಿದ್ದಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಡೆನಿಯಲ್ ಸ್ಯಾಮ್ಸ್ ಮಾಡಿದ 16ನೇ ಓವರ್ನಲ್ಲಿ ಪ್ಯಾಟ್ ಕಮ್ಮಿನ್ಸ್, (6, 4, 6, 6, 4, 6) ಒಟ್ಟು 34 ರನ್ ಸಿಡಿಸಿ ಮಿಂಚಿದರು. ಈ ಹಿಂದೆ 2011ರಲ್ಲಿ ಕ್ರಿಸ್ ಗೇಯ್ಲ್ v KTK ವಿರುದ್ಧ ಹಾಗೂ 2021ರಲ್ಲಿ ರವೀಂದ್ರ ಜಡೇಜಾ v RCB ವಿರುದ್ಧ 36 ರನ್ ಬಾರಿಸಿರುವುದು ಈವರೆಗಿನ ದಾಖಲೆಯಾಗಿದೆ.