ಫುಕೆಟ್ ನಲ್ಲಿ ನಡೆಯುತ್ತಿರುವ ಥೈಲ್ಯಾಂಡ್ ಓಪನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ಪಂದ್ಯವಳಿಯಲ್ಲಿ ಭಾರತೀಯ ಬಾಕ್ಸರ್ ಗಳ ಪ್ರಾಭಲ್ಯ ಮುಂದುವರೆದಿದೆ. ಆಶಿಶ್ ಕುಮಾರ್, ಮೋನಿಕಾ, ಗೋವಿಂದ್ ಸಹಾನಿ, ವರೀಂದರ್ ಸಿಂಗ್ ಫೈನಲ್ ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಪುರುಷರ ೮೧ ಕೆಜಿ ವಿಭಾಗದ ಉಪಾಂತ್ಯ ಪಂದ್ಯದಲ್ಲಿ ಆಶಿಶ್ ೫-೦ ಯಿಂದ ಇಂಡೋನೇಷ್ಯಾದ ಮೈಕೆಲ್ ರಾಬರ್ಟ್ ಮಸ್ಚಿತಾ ವಿರುದ್ಧ ಜಯ ಸಾಧಿಸಿದರು. ಕಳೆದ ಋತುವಿನ ೭೫ ಕೆಜಿಯಲ್ಲಿ ಚಿನ್ನದ ಪದಕ ಗೆದ್ದಿದ್ದ ಆಶಿಶ್, ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು.
೨೬ರ ಹರೆಯದ ಮೋನಿಕಾ ಅವರು ಮಹಿಳೆಯರ ೪೮ಕೆಜಿ ನಾಲ್ಕರ ಘಟ್ಟದ ಪಂದ್ಯದಲ್ಲಿ ತಮ್ಮ ಪ್ರತಿಸ್ಪರ್ಧಿ ವಿಯೆಟ್ನಾಂನ ಟ್ರಾನ್ ಥಿ ಡೈಮ್ ವಿರುದ್ಧ ಸಮನಾದ ಅಂಕಗಳನ್ನು ಭರ್ಜರಿ ಪ್ರದರ್ಶನ ನೀಡಿದರು.
ಇನ್ನೋರ್ವ ಬಾಕ್ಸರ್ ಗೋವಿಂದ್ ಕುಮಾರ್ ಸಹಾನಿ ಆರಂಭದಲ್ಲಿ ಅಂಕಗಳನ್ನು ಬಿಟ್ಟುಕೊಟ್ಟರೂ, ನಂತರ ವಿಯೆಟ್ನಾಂನ ನ್ಗುಯೆನ್ ಲಿನ್ ಫುಂಗ್ ವಿರುದ್ಧ ಸೊಗಸಾದ ಆಟವಾಡಿ ಗಮನ ಸೆಳೆದರು. ಸೆಮೀಸ್ ಕಾದಾಟದಲ್ಲಿ ಗೋವಿಂದ್ ೪-೧ ರಿಂದ ಜಯ ಸಾಧಿಸಿದರು.
ಪುರುಷರ ೬೦ ಕೆಜಿ ವಿಭಾಗದ ಸೆಮಿಫೈನಲ್ನಲ್ಲಿ ವರೀಂದರ್ ಸಿಂಗ್ ಅವರು ಪ್ಯಾಲೆಸ್ತೀನ್ನ ಅಬ್ದೆಲ್ ರೆಹಮಾನ್ ಅಬುನಾಬ್ ವಿರುದ್ಧ ವಾಕ್ಓವರ್ ಪಡೆದರು.
Championship, Thailand, Boxing, Ashish, Monika
#championship, #thailand, #boxing, #ashish, #monika