ವಿಶ್ವ ಕ್ರಿಕೆಟ್ನ ಶ್ರೇಷ್ಠ ಲೀಗ್ ಎನಿಸಿರುವ ಐಪಿಎಲ್ನಲ್ಲಿ ಹಲವು ಆಟಗಾರರು ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಕಮಾಲ್ ಮಾಡಿದ್ದಾರೆ. ಬೌಂಡರಿ, ಸಿಕ್ಸರ್ಗಳ ಮೂಲಕವೇ ಅಬ್ಬರಿಸಿರುವ ಬ್ಯಾಟ್ಸ್ಮನ್ಗಳ ಸಾಲಿಗೆ ಇದೀಗ ಶ್ರೀಲಂಕಾದ ಬನುಕ ರಾಜಪಕ್ಸ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.
ಮೊದಲ ಬಾರಿಗೆ ಐಪಿಎಲ್ಗೆ ಎಂಟ್ರಿಕೊಟ್ಟಿರುವ ರಾಜಪಕ್ಸ, ಪಂಜಾಬ್ ಕಿಂಗ್ಸ್ ತಂಡದ ಬ್ಯಾಟಿಂಗ್ ಅಸ್ತ್ರವಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಿದ ತಮ್ಮ ಚೊಚ್ಚಲ ಐಪಿಎಲ್ ಪಂದ್ಯದಲ್ಲೇ ಅಬ್ಬರಿಸಿದ್ದ ಬನುಕ ರಾಜಪಕ್ಸ, 22 ಬಾಲ್ಗಳಲ್ಲಿ 43 ರನ್ ಸಿಡಿಸಿ ಪಂಜಾಬ್ ಗೆಲುವಿನ ಹೀರೋ ಆಗಿ ಮಿಂಚಿದ್ದರು. ಆ ಮೂಲಕ ಚುಟುಕು ಕ್ರಿಕೆಟ್ ಮಹಾಸಮರಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದರು.
ಇಂದು ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ಬನುಕ ರಾಜಪಕ್ಸ ಅಬ್ಬರದ ಬ್ಯಾಟಿಂಗ್ನಿಂದ ಘರ್ಜಿಸಿದರು. 1ನೇ ಕ್ರಮಾಂಕದಲ್ಲಿ ಬಂದ ರಾಜಪಕ್ಸ, 344.44ರ ಸ್ಟ್ರೈಕ್ ರೇಟ್ನಲ್ಲಿ 9 ಬಾಲ್ಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಮೂಲಕ 31 ರನ್ಗಳಿಸಿ ತಂಡದ ಮೊತ್ತವನ್ನ ಹೆಚ್ಚಿಸಿದರು. ಇದರ ಮೂಲಕ ಆಡಿರುವ ಎರಡ ಪಂದ್ಯಗಳಲ್ಲಿ 238.71ರ ಸ್ಟ್ರೈಕ್ ರೇಟ್ನಲ್ಲಿ 74 ರನ್ಗಳಿಸಿದ್ದು, 7 ಸಿಕ್ಸ್ ಹಾಗೂ 5 ಬೌಂಡರಿಗಳಿಸಿದ್ದಾರೆ.
ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಬನುಕ ರಾಜಪಕ್ಸ, ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ 50 ಲಕ್ಷ ರೂ.ಗಳಿಗೆ ಪಂಜಾಬ್ ಕಿಂಗ್ಸ್ ಸೇರ್ಪಡೆಗೊಂಡಿದ್ದಾರೆ. ಆರಂಭಿಕ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ನಿಂದ ಅಬ್ಬರಿಸಿರುವ 31 ವರ್ಷದ ಬನುಕ ರಾಜಪಕ್ಸ, ಮುಂದಿನ ಪಂದ್ಯಗಳಲ್ಲಿ ಇನ್ನಷ್ಟು ಮತ್ತಷ್ಟು ದೊಡ್ಡ ಇನ್ನಿಂಗ್ಸ್ ಆಡುವ ಮುನ್ಸೂಚನೆ ನೀಡಿದ್ದಾರೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಆಟವಾಡಿದ ರಾಜಪಕ್ಸ, ಐಪಿಎಲ್ನಲ್ಲಿ ಮೊದಲ 9 ಬಾಲ್ಗಳಲ್ಲಿ ಅತ್ಯಧಿಕ ರನ್ಗಳಿಸಿದ ಆಟಗಾರರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. 2017ರ ಐಪಿಎಲ್ನಲ್ಲಿ ಪುಣೆ ತಂಡದ ವಿರುದ್ಧ 9 ಬಾಲ್ಗಳಲ್ಲಿ 38 ರನ್ಗಳಿಸಿದ್ದ ಕ್ರಿಸ್ ಮೊರಿಸ್ ನಂ.1 ಸ್ಥಾನದಲ್ಲಿದ್ದರೆ. ಎಬಿ ಡಿವಿಲಿಯನ್ಸ್ 2015ರಲ್ಲಿ 37 ರನ್ಗಳಿಸಿ 2ನೇ ಸ್ಥಾನದಲ್ಲಿದ್ದಾರೆ. ಸ್ಪೋಟಕ ಬ್ಯಾಟ್ಸಮನ್ ಕ್ರಿಸ್ ಗೇಯ್ಲ್ 35 ರನ್ಗಳಿಸಿ 3ನೇ ಸ್ಥಾನದಲ್ಲಿದ್ದರೆ.