15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಕ್ವಾರ್ಟರ್ ಫೈನಲ್ ಎಂದೇ ಬಿಂಬಿತವಾಗಿರುವ ಮಹತ್ವದ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಹೈ-ವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಸೀಸನ್ನಲ್ಲಿ ಈಗಾಗಲೇ ಹೊರಬಿದ್ದಿರುವ ಮುಂಬೈ ಇಂದಿನ ಪಂದ್ಯವನ್ನು ಗೆದ್ದು, ಗೆಲುವಿನೊಂದಿಗೆ ಸೀಸನ್ ಮುಗಿಸುವ ನಿರೀಕ್ಷೆಯಲ್ಲಿದೆ. ಇಡೀ ಆವೃತ್ತಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿರುವ ಮುಂಬೈ, ಇಂದಿನ ಪಂದ್ಯಕ್ಕೂ ಬದಲಾವಣೆ ಮಾಡಿಕೊಂಡಿದ್ದು, ಡೇವಾಲ್ಡ್ ಬ್ರೆವಿಸ್ ಹಾಗೂ ಹೃತಿಕ್ ಶೊಕೇನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಮತ್ತೊಂದೆಡೆ ಪ್ಲೇ-ಆಫ್ ಹೊಸ್ತಿಲಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ಗೆ ಇಂದಿನ ಪಂದ್ಯ ಅತ್ಯಂತ ಮಹತ್ವದ ಪಂದ್ಯವಾಗಿದ್ದು, ಪ್ಲೇ-ಆಫ್ ಹಂತಕ್ಕೇರಲು ಈ ಪಂದ್ಯವನ್ನ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಸಹ ಇಂದಿನ ಪಂದ್ಯಕ್ಕೆ ಏಕೈಕ ಬದಲಾವಣೆ ಮಾಡಿಕೊಂಡಿದ್ದು, ಲಲಿತ್ ಯಾದವ್ ಬದಲಿಗೆ ಕುಲ್ದೀಪ್ ಯಾದವ್ ಅವರನ್ನ ಕಣಕ್ಕಿಳಿಸಿದೆ.
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮ(ನಾಯಕ), ಇಶಾನ್ ಕಿಶನ್, ಡೆನಿಯಲ್ ಸ್ಯಾಮ್ಸ್, ತಿಲಕ್ ವರ್ಮ, ಡೆವಾಲ್ಡ್ ಬ್ರೇವಿಸ್, ಟಿಮ್ ಡೇವಿಡ್, ರಮಣ್ದೀಪ್ ಸಿಂಗ್, ಹೃತಿಕ್ ಶೋಕೇನ್, ಜಸ್ಪ್ರೀತ್ ಬುಮ್ರ, ರೈಲಿ ಮೆರಿಡಿತ್, ಮಯಾಂಕ್ ಮಾರ್ಕಂಡೆ.
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಬ್ ಪಂತ್(ನಾಯಕ), ಸರ್ಫರಾಜ್ ಖಾನ್, ರೋವ್ಮನ್ ಪೊವೆಲ್, ಅಕ್ಸರ್ ಪಟೇಲ್, ಶಾರ್ದೂಲ್ ಥಾಕೂರ್, ಕುಲ್ದೀಪ್ ಯಾದವ್, ಅನ್ರಿಕ್ ನೋಕಿಯೇ, ಕಲೀಲ್ ಅಹ್ಮದ್