ರಾಹುಲ್ ತ್ರಿಪಾಠಿ(76) ಭರ್ಜರಿ ಅರ್ಧಶತಕ, ಪ್ರಿಯಂ ಗಾರ್ಗ್(42) ಹಾಗೂ ನಿಕೋಲಸ್ ಪೂರನ್(38) ಅವರುಗಳ ಜವಾಬ್ದಾರಿಯ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದ್ರಾಬಾದ್ 193 ರನ್ಗಳ ಅದ್ಭುತ ಮೊತ್ತ ಕಲೆಹಾಕಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತ ಸನ್ರೈಸರ್ಸ್ ಹೈದ್ರಾಬಾದ್ ಬ್ಯಾಟಿಂಗ್ ಅವಕಾಶ ಪಡೆಯಿತು. ಬ್ಯಾಟ್ಸ್ಮನ್ಗಳ ಜವಾಬ್ದಾರಿಯುತ ಪ್ರದರ್ಶನದಿಂದ ಸನ್ರೈಸರ್ಸ್ ಹೈದ್ರಾಬಾದ್ 20 ಓವರ್ಗಳಲ್ಲಿ 6 ವಿಕೆಟ್ಗೆ 193 ರನ್ಗಳಿಸಿತು. ಎಸ್ಆರ್ಎಚ್ ಪರ ತ್ರಿಪಾಠಿ(76), ಗಾರ್ಗ್(42) ಹಾಗೂ ಪೂರನ್(38) ರನ್ಗಳಿಸಿ ತಂಡಕ್ಕೆ ಆಸರೆಯಾದರು.

ಆಸರೆಯಾದ ಪ್ರಿಯಂ ಗಾರ್ಗ್:
ಹೈದ್ರಾಬಾದ್ ಪರ ಇನ್ನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮ(9) ನಿರೀಕ್ಷಿತ ಆಟವಾಡುವಲ್ಲಿ ವಿಫಲವಾದರು. ನಂತರ ಜೊತೆಯಾದ ಪ್ರಿಯಾಮ್ ಗಾರ್ಗ್ 42 ರನ್(26 ಬಾಲ್, 4 ಬೌಂಡರಿ, 2 ಸಿಕ್ಸ್) ಉತ್ತಮ ಆಟವಾಡಿದರು. ಅಲ್ಲದೇ 2ನೇ ವಿಕೆಟ್ಗೆ ರಾಹುಲ್ ತ್ರಿಪಾಠಿ ಜೊತೆಗೂಡಿ 78(43) ರನ್ಗಳ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು. ಆದರೆ ಉತ್ತಮವಾಗಿ ಆಡುತ್ತಿದ್ದ ಗಾರ್ಗ್, ವೈಯಕ್ತಿಯ 42 ರನ್ಗಳಿಸಿ ಹೊರ ನಡೆದರು.
TRIPATHI, IPL 2022, SPORTS KARNATAKAತ್ರಿಪಾಠಿ ಅಬ್ಬರದ ಬ್ಯಾಟಿಂಗ್:
ಪ್ರಿಯಾಮ್ ಗಾರ್ಗ್ ವಿಕೆಟ್ ಪತನದ ನಂತರವೂ ಜವಾಬ್ದಾರಿಯ ಆಟವಾಡಿದ ರಾಹುಲ್ ತ್ರಿಪಾಠಿ 76 ರನ್(44 ಬಾಲ್, 9 ಬೌಂಡರಿ, 3 ಸಿಕ್ಸ್) ಮೂಲಕ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮುಂಬೈ ಬೌಲರ್ಗಳ ದಾಳಿಯನ್ನ ಸಮರ್ಥವಾಗಿ ಎದುರಿಸಿದ ತ್ರಿಪಾಠಿ, ಬೌಂಡರಿ ಹಾಗೂ ಸಿಕ್ಸರ್ಗಳನ್ನು ಸಿಡಿಸಿದರು. ಆ ಮೂಲಕ 2022ರ ಐಪಿಎಲ್ನ 3ನೇ ಹಾಗೂ ಒಟ್ಟಾರೆ ಐಪಿಎಲ್ನ 10ನೇ ಅರ್ಧಶತಕ ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಿಕೋಲಸ್ ಪೂರನ್ 38 ರನ್(22 ಬಾಲ್, 2 ಬೌಂಡರಿ, 3 ಸಿಕ್ಸ್) ಉಪಯುಕ್ತ ಕಾಣಿಕೆ ನೀಡಿದರು. ಅಲ್ಲದೇ 3ನೇ ವಿಕೆಟ್ಗೆ ಇವರಿಬ್ಬರು 76(42) ರನ್ಗಳ ಜೊತೆಯಾಟದ ಕಾಣಿಕೆ ನೀಡಿದರು.
RAMANDEEP, IPL 2022, SPORTS KARNATAKAಕೊನೆ ಹಂತದಲ್ಲಿ ಬಂದ ಐಡೆನ್ ಮಾರ್ಕ್ರಂ(2), ನಾಯಕ ಕೇನ್ ವಿಲಿಯಂಸನ್ 8* ಹಾಗೂ ವಾಷಿಂಗ್ಟನ್ ಸುಂದರ್ 9 ಉಪಯುಕ್ತ ಕಾಣಿಕೆ ನೀಡಿದರು. ಮುಂಬೈ ಇಂಡಿಯನ್ಸ್ ಪರ ರಮಣದೀಪ್ ಸಿಂಗ್(3/20) ಉತ್ತಮ ಬೌಲಿಂಗ್ ಪ್ರದರ್ಶಿಸಿದರೆ. ಡೆನಿಯಲ್ ಸ್ಯಾಮ್ಸ್(1/39) ಹಾಗೂ ರೈಲಿ ಮೆರಿಡಿತ್(1/44), ಜಸ್ಪ್ರೀತ್ ಬುಮ್ರ (1/32) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.