15ನೇ ಆವೃತ್ತಿಯ ಐಪಿಎಲ್ನಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿರುವ ಮುಂಬೈ ಇಂಡಿಯನ್ಸ್, ತನ್ನ ನೀರಸ ಪ್ರದರ್ಶನದ ಮೂಲಕ ಹಲವು ಮೊದಲುಗಳಿಗೆ ಮುನ್ನುಡಿ ಬರೆದಿದೆ.
ಐಪಿಎಲ್ನ ಐದು ಬಾರಿ ಚಾಂಪಿಯನ್ ಎಂಬ ಹೆಗ್ಗಳಿಕೆ ನಡುವೆಯೂ ಪ್ರಸಕ್ತ ಸೀಸನ್ನಲ್ಲಿ ಮುಂಬೈ ಭಾರೀ ಮುಖಭಂಗ ಕಂಡಿದೆ. ಸತತ ಸೋಲುಗಳನ್ನು ಕಂಡಿರುವ ಮುಂಬೈ, ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ತಂಡದ ಈ ಅಸ್ಥಿರ ಪ್ರದರ್ಶನ, ಐಪಿಎಲ್ ಇತಿಹಾಸದಲ್ಲೇ ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ.
ಮುಂಬೈ ಇಂಡಿಯನ್ಸ್ ಅಪಕೀರ್ತಿಗೆ ಕಾರಣವಾದ ಅಂಶಗಳು:
- ಮೊದಲ ಬಾರಿಗೆ ಒಂದು ಸೀಸನ್ನಲ್ಲಿ 9 ಪಂದ್ಯಗಳನ್ನು ಸೋತಿರುವುದು
- ಮೊದಲ ಬಾರಿಗೆ ಒಂದು ಓವರ್ನಲ್ಲಿ 30+ ರನ್ ನೀಡುವುದು
- ಮೊದಲ ಬಾರಿಗೆ ಒಂದು ಓವರ್ನಲ್ಲಿ 4 ಸತತ ಸಿಕ್ಸ್ ನೀಡಿರುವುದು
- ಮೊದಲ ಬಾರಿಗೆ ಒಂದಕ್ಕಿಂತ ಹೆಚ್ಚು ಶತಕ ಬಿಟ್ಟುಕೊಟ್ಟಿರುವುದು
- ಮೊದಲ ಬಾರಿಗೆ ಕಡೆಯ ಬಾಲ್ನಲ್ಲಿ ಬೌಂಡರಿ ಬಿಟ್ಟುಕೊಡದಿರಲು ವಿಫಲವಾಗಿರುವುದು
- ಮೊದಲ ಬಾರಿಗೆ ಸತತವಾಗಿ 5ಕ್ಕಿಂತ ಹೆಚ್ಚು ಪಂದ್ಯ ಸೋತಿರುವುದು
- ಮೊದಲ ಬಾರಿಗೆ ಕೇವಲ ಇಬ್ಬರು ವಿದೇಶಿ ಆಟಗಾರೊಂದಿಗೆ ಆಡಿದ್ದು
- ಮೊದಲ ಬಾರಿಗೆ ಚೇಸಿಂಗ್ನಲ್ಲಿ ಎದುರಾಳಿ ತಂಡಕ್ಕೆ ಫೈನಲ್ ಓವರ್ನಲ್ಲಿ 15 ರನ್ ನೀಡಿರುವುದು
- ಮೊದಲ ಬಾರಿಗೆ ರೋಹಿತ್ ಸಾರಥ್ಯದಲ್ಲಿ ಸತತವಾಗಿ ಪ್ಲೇ-ಆಫ್ಗೆ ಆಯ್ಕೆಯಾಗದಿರುವುದು
- ಮೊದಲ ಬಾರಿಗೆ ಪಂದ್ಯದಲ್ಲಿ ಸೋತರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿರುವುದು
- ಮೊದಲ ಬಾರಿಗೆ ಐಪಿಎಲ್ ಹರಾಜಿನಲ್ಲಿ ಆಟಗಾರರನನ್ನು 10 ಕೋಟಿಗೂ ಅಧಿಕ ಮೊತ್ತಕ್ಕೆ ಖರೀದಿಸಿದ್ದು
- ಮೊದಲ ಬಾರಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಸ್ಥಾನದೊಂದಿಗೆ ಸೀಸನ್ ಪೂರ್ಣಗೊಳಿಸಿದ್ದು(ಇನ್ನೂ 3 ಪಂದ್ಯ ಬಾಕಿಯಿದೆ)
ಮುಂಬೈ ಪ್ರದರ್ಶನ: IPL 2022ರಲ್ಲಿ
ಪಂದ್ಯಗಳು – 11
ಸೋಲು – 9
ಗೆಲುವು – 2
ಅಂಕಗಳು – 4
ಎನ್ಆರ್ಆರ್ – -0.894