ಮುಕ್ತಾಯದ ಹಂತದಲ್ಲಿರುವ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಈಗಾಗಲೇ ಪ್ಲೇ-ಆಫ್ ರೇಸ್‌ನಿಂದ ಹೊರಗುಳಿದಿರುವ ಮುಂಬೈಗೆ ಇದು ಪ್ರತಿಷ್ಠೆಯ ಪಂದ್ಯವಾದರೆ. ಪ್ಲೇ-ಆಫ್ ಪ್ರವೇಶದ ನಿರೀಕ್ಷೆಯಲ್ಲಿರುವ ಹೈದ್ರಾಬಾದ್‌ಗೆ ಇದು ಪ್ರಮುಖ ಪಂದ್ಯವಾಗಿದೆ.
ವಾಂಖೆಡೆ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮ, ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಇಂದಿನ ಪಂದ್ಯಕ್ಕಾಗಿ ಎರಡು ತಂಡದಲ್ಲೂ ಕೆಲವು ಬದಲಾವಣೆ ಮಾಡಿಕೊಳ್ಳಲಾಗಿದ್ದು, ಮುಂಬೈ ತಂಡದಲ್ಲಿ ಹೃತಿಕ್ ಶೊಕೇನ್ ಹಾಗೂ ಕುಮಾರ್ ಕಾರ್ತಿಕೇಯ ಬದಲಿಗೆ ಮಯಾಂಕ್ ಮಾರ್ಕಂಡೆ ಹಾಗೂ ಸಂಜಯ್ ಯಾದವ್ ಕಣಕ್ಕಿಳಿಯುತ್ತಿದ್ದಾರೆ. ಇನ್ನು ಸನ್‌ರೈಸರ್ಸ್ ತಂಡದಲ್ಲಿ ಶಶಾಂಕ್ ಸಿಂಗ್ ಹಾಗೂ ಮಾಕ್ರೋ ಜಾನ್ಸನ್ ಬದಲಿಗೆ ಪ್ರಿಯಮ್ ಗಾರ್ಗ್ ಮತ್ತು ಫಜ಼ಲ್ ಫರೂಕಿ ಆಡುತ್ತಿದ್ದಾರೆ.
ಮುಂಬೈ ಇಂಡಿಯನ್ಸ್: ಇಶಾನ್ ಕಿಶನ್, ರೋಹಿತ್ ಶರ್ಮ(ನಾಯಕ), ಡೆನಿಯಲ್ ಸ್ಯಾಮ್ಸ್, ತಿಲಕ್ ವರ್ಮ, ರಮಣ್‌ದೀಪ್ ಸಿಂಗ್, ಟ್ರಿಸ್ಟನ್ ಸ್ಟಬ್ಸ್, ಟಿಮ್ ಡೇವಿಡ್, ಸಂಜಯ್ ಯಾದವ್, ಜಸ್ಪ್ರೀತ್ ಬುಮ್ರ, ರಿಲೈ ಮೆರಿಡಿತ್, ಮಯಾಂಕ್ ಮಾರ್ಕಂಡೆ.
ಸನ್‌ರೈಸರ್ಸ್ ಹೈದ್ರಾಬಾದ್: ಅಭಿಷೇಕ್ ಶರ್ಮ, ಪ್ರಿಯಮ್ ಗಾರ್ಗ್, ಕೇನ್ ವಿಲಿಯಂಸನ್(ನಾಯಕ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಂ, ನಿಕೋಲಸ್ ಪೂರನ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಫಜ಼ಲ್ ಫರೂಕಿ, ಉಮ್ರಾನ್ ಮಲ್ಲಿಕ್, ಟಿ.ನಟರಾಜನ್