ipl 2022- Mumbai indians – ಮುಂಬೈ ಇಂಡಿಯನ್ಸ್ ಗೆ ಗುಡ್ ನ್ಯೂಸ್..! ತಂಡವನ್ನು ಸೇರಿಕೊಂಡ ಸ್ಕೈ..!

ಮುಂಬೈ ಇಂಡಿಯನ್ಸ್ ತಂಡಕ್ಕೆ ಇದು ಗುಡ್ ನ್ಯೂಸ್.. ತಂಡದ ಸ್ಟಾರ್ ಆಟಗಾರ ಸೂರ್ಯ ಕುಮಾರ್ ಯಾದವ್ ಅವರು ಮುಂಬೈ ಇಂಡಿಯನ್ಸ್ ಕ್ಯಾಂಪ್ ಅನ್ನು ಸೇರಿಕೊಂಡಿದ್ದಾರೆ.
ಏಪ್ರಿಲ್ 2ರಂದು ನಡೆಯಲಿರುವ ರಾಜಸ್ತಾನ ರಾಯಲ್ಸ್ ವಿರುದ್ದದ ಪಂದ್ಯಕ್ಕೆ ಸೂರ್ಯ ಕುಮಾರ್ ಯಾದವ್ ಲಭ್ಯರಾಗಲಿದ್ದಾರೆ.
ವೆಸ್ಟ್ ಇಂಡೀಸ್ ಸರಣಿಯ ವೇಳೆ ಸೂರ್ಯ ಕುಮಾರ್ ಯಾದವ್ ಕೈ ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಹೀಗಾಗಿ ಅವರು ಎನ್ ಸಿಎನಲ್ಲಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಇದೀಗ ಫಿಟ್ ಆಂಡ್ ಫೈನ್ ಆಗಿರುವ ಸೂರ್ಯ ಕುಮಾರ್ ಯಾದವ್ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಅಷ್ಟೇ ಅಲ್ಲ, ತಂಡದ ಫಿಟ್ ನೆಸ್ ಶಿಬಿರದಲ್ಲೂ ಭಾಗಿಯಾಗಿದ್ದಾರೆ.

ಸೂರ್ಯ ಕುಮಾರ್ ಯಾದವ್ ತಂಡವನ್ನು ಸೇರಿಕೊಂಡಿರುವುದರಿಂದ ಮುಂಬೈ ಇಂಡಿಯನ್ಸ್ ತಂಡದ ಮಧ್ಯಮ ಕ್ರಮಾಂಕದ ಬಲ ಇನ್ನಷ್ಟು ಬಲಿಷ್ಠವಾಗಿದೆ. ಸೂರ್ಯ ಕುಮಾರ್ ಅದ್ಭುತ ಫಾರ್ಮ್ ನಲ್ಲಿದ್ದು,ಕಳೆದ ಎರಡು ವರ್ಷಗಳಿಂದ ಮುಂಬೈ ಪರ ಅಮೋಘ ಆಟವನ್ನಾಡಿದ್ರು. ಹೀಗಾಗಿಯೇ ಅವರು ಟೀಮ್ ಇಂಡಿಯಾದಲ್ಲೂ ಸ್ಥಾನ ಪಡೆದುಕೊಂಡಿದ್ದರು.
ಈಗಾಗಲೇ ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯದಲ್ಲೇ ಸೋಲು ಅನುಭವಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅಚ್ಚರಿಯ ಸೋಲು ಅನುಭವಿಸಿದೆ. 178 ರನ್ ಗಳ ಸವಾಲು ಒಡ್ಡಿದ್ರೂ ಮುಂಬೈ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಬಗ್ಗುಬಡಿದಿತ್ತು. ಅಕ್ಷರ್ ಪಟೇಲ್ ಮತ್ತು ಜಯಂತ್ ಯಾದವ್ ಅವರ ಸ್ಪೋಟಕ ಬ್ಯಾಟಿಂಗ್ ಮುಂದೆ ಮುಂಬೈ ತಂಡದ ಬೌಲರ್ ಗಳು ಚಕಿತಗೊಂಡಿದ್ದರು.
ಇದೀಗ ಏಪ್ರಿಲ್ 2ರಂದು ನಡೆಯಲಿರುವ ಪಂದ್ಯವನ್ನು ಮುಂಬೈ ಇಂಡಿಯನ್ ಎದುರು ನೋಡುತ್ತಿದ್ದು, ಗೆಲ್ಲಲೇಬೇಕು ಎಂಬ ಹಠದಲ್ಲೂ ಇದೆ.