ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ 15 ನೇ ಆವೃತ್ತಿ ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ತನ್ನ ಎರಡನೇ ಪಂದ್ಯಕ್ಕಾಗಿ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ನಲ್ಲಿ ನೆಟ್ಸ್ನಲ್ಲಿ ಬೆವರು ಹರಿಸಿತು.
ಈ ಸಮಯದಲ್ಲಿ ತಂಡದ ಐಕಾನ್ ಸಚಿನ್ ತೆಂಡೂಲ್ಕರ್ ಆಟಗಾರರಿಗೆ ಸಲಹೆಯನ್ನು ನೀಡಿದರು. ಬ್ಯಾಟಿಂಗ್ ದಿಗ್ಗಜ ತೆಂಡೂಲ್ಕರ್ ಕೋಚಿಂಗ್ ಸಿಬ್ಬಂದಿಯೊಂದಿಗೆ ಭಾಗವಹಿಸಿದ ಮೊದಲ ತರಬೇತಿ ಅವಧಿ ಇದಾಗಿದೆ. ಕೆಲವು ದಿನಗಳ ಹಿಂದೆ ಕಡ್ಡಾಯ ಕ್ವಾರಂಟೈನ್ ಅವಧಿಯ ನಂತರ ಸಚಿನ್ ತಂಡವನ್ನು ಸೇರಿಕೊಂಡರು.
Aryan bhai, humein bhi batao kya tips mila? 🤩#OneFamily #DilKholKe #MumbaiIndians @sachin_rt pic.twitter.com/GbOu5apERR
— Mumbai Indians (@mipaltan) March 30, 2022
ಸಚಿನ್ ಮಂಗಳವಾರ ಮಧ್ಯಾಹ್ನ ನೆಟ್ಸ್ ನಲ್ಲಿ ಕಳೆದರು. ಆಟಗಾರರನ್ನು ಸೂಕ್ಷ್ಮವಾಗಿ ಗಮನಿಸಿದರು. ಮತ್ತು ಯುವ ಆಟಗಾರರಾದ ತಿಲಕ್ ವರ್ಮಾ, ಡೆವಾಲ್ಡ್ ಬ್ರೆವಿಸ್ ಮತ್ತು ಆರ್ಯನ್ ಜುಯಲ್ ಅವರೊಂದಿಗೆ ಮಾತುಕತೆ ನಡೆಸಿ ಬ್ಯಾಟಿಂಗ್ ಸುಧಾರಿಸಲು ಸಲಹೆ ನೀಡಿದರು. ಅವರಿಗೆ ವಿಭಿನ್ನ ಸ್ಟ್ರೋಕ್ಗಳು, ಫುಟ್ವರ್ಕ್, ಬ್ಯಾಟಿಂಗ್ ಕುರಿತು ಟಿಪ್ಸ್ ನೀಡಿದರು. ಸೋಮವಾರ ಒಳಾಂಗಣ ಜಿಮ್ ಸೆಷನ್ ಮಾಡಿದ ನಂತರ, ಏಪ್ರಿಲ್ 2 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ತಯಾರಿ ನಡೆಸುತ್ತಿದೆ. ನೆಟ್ ಸೆಷನ್ನ ಹೊರತಾಗಿ, ತಂಡವು ಮುಂದಿನ ಪಂದ್ಯಕ್ಕೆ ಸಿದ್ಧರಾಗಲು ಫೀಲ್ಡಿಂಗ್ ಅಭ್ಯಾಸವನ್ನೂ ಮಾಡಿದೆ.
ಮುಂಬೈ ಇಂಡಿಯನ್ಸ್ ತನ್ನ IPL 2022 ರ ಅಭಿಯಾನವನ್ನು ನಿರಾಶಾದಾಯಕವಾಗಿ ಪ್ರಾರಂಭಿಸಿತು. ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋಲು ಕಂಡಿತ್ತು. ಇದೀಗ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸುವ ಮೂಲಕ ಮೊದಲ ಗೆಲುವಿನ ನಗೆ ಬೀರಲು ಮುಂಬೈ ಪ್ಲಾನ್ ಮಾಡಿಕೊಂಡಿದೆ. ಸಂಜು ಸ್ಯಾಮ್ಸನ್ ನೇತೃತ್ವದ ರಾಯಲ್ಸ್ ಮಂಗಳವಾರ ರಾತ್ರಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 61 ರನ್ಗಳ ಜಯದೊಂದಿಗೆ ತನ್ನ ಅಭಿಯಾನವನ್ನು ಅದ್ಭುತವಾಗಿ ಆರಂಭಿಸಿದೆ.