ಕೊನೆಯ ಬಾಲ್ ವರೆಗೂ ಕುತೂಹಲ ಮೂಡಿಸಿದ್ದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್, ಬಲಿಷ್ಠ ಗುಜರಾತ್ ಟೈಟನ್ಸ್ ವಿರುದ್ಧ 5 ರನ್ಗಳ ರೋಚಕ ಗೆಲುವು ಸಾಧಿಸಿತು.
ಬ್ರೆಬೋರ್ನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಮುಂಬೈಗೆ ಮೊದಲು ಬ್ಯಾಟಿಂಗ್ ಮಾಡೋ ಅವಕಾಶ ಸಿಕ್ತು. ಮುಂಬೈ ಪರ ಇನ್ನಿಂಗ್ಸ್ ಆರಂಭಿಸಿದ ಇಶಾನ್ ಕಿಶನ್(43) ಹಾಗೂ ರೋಹಿತ್ ಶರ್ಮ(45) ಸಖತ್ ಆಟವಾಡಿದರು. ಮೊದಲ ವಿಕೆಟ್ಗೆ 74 ರನ್ ಚಚ್ಚಿದ ಈ ಜೋಡಿ, ಭರ್ಜರಿ ಓಪನಿಂಗ್ ನೀಡಿದ್ರು. ಆದ್ರೆ ಸೀಸನ್ ನಲ್ಲಿ ಮುಂಬೈ ಬ್ಯಾಟಿಂಗ್ ಸ್ಟ್ರೆಂಥ್ ಆಗಿ ಮಿಂಚಿರೋ ಸೂರ್ಯಕುಮಾರ್(13) ಹಾಗೂ ತಿಲಕ್ ವರ್ಮ(21) ಹೆಚ್ಚಿನ ಕಮಾಲ್ ಮಾಡ್ಲಿಲ್ಲ. ಮಿಡಲ್ ಆರ್ಡರ್ ನಲ್ಲಿ ಬಂದ ಕೈರನ್ ಪೊಲಾರ್ಡ್(1) ಹಾಗೂ ಡೆನಿಯಲ್ ಸ್ಯಾಮ್ಸ್(0) ಬಂದಷ್ಟೇ ಬೇಗನೆ ಪೆವಿಲಿಯ್ ಸೇರಿದ್ರು. ಆದ್ರೆ ಬಿರುಸಿನ ಆಟವಾಡಿದ ಟಿಮ್ ಡೇವಿಡ್, ಕೇವಲ 21 ಬಾಲ್ಗಳಲ್ಲಿ 4 ಸಿಕ್ದ್, 2 ಬೌಂಡರಿ ಮೂಲಕ 44* ರನ್ ಗಳಿಸಿ ಮಿಂಚಿದ್ರು. ಪರಿಣಾಮ ಮುಂಬೈ ಇಂಡಿಯನ್ಸ್, 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 177 ರನ್ ಕಲೆಹಾಕಿತು. ಗುಜರಾತ್ ಪರ ರಶೀದ್ ಖಾನ್ 2, ಅಲ್ಜರಿ ಜೋಸೆಫ್, ಫರ್ಗುಸನ್ ಹಾಗೂ ಸಾಂಗ್ವಾನ್ ತಲಾ 1 ವಿಕೆಟ್ ಪಡೆದ್ರು.

*ಟೈಟನ್ಸ್ ಓಪನಿಂಗ್ ಸೂಪರ್*
ಮುಂಬೈ ಇಂಡಿಯನ್ಸ್ ನೀಡಿದ 178 ರನ್ ಟಾರ್ಗೆಟ್ ಚೇಸ್ ಮಾಡಿದ ಗುಜರಾತ್ ಟೈಟನ್ಸ್ ಬೊಂಬಾಟ್ ಆರಂಭ ಪಡೆಯಿತು. ಓಪನರ್ ಗಳಾಗಿ ಬಂದ ವೃದ್ಧಿಮಾನ್ ಸಾಹ 55 ರನ್(40 ಬಾಲ್, 6 ಬೌಂಡರಿ, 2 ಸಿಕ್ಸ್) ಹಾಗೂ ಶುಭ್ಮನ್ ಗಿಲ್ 52 ರನ್(36 ಬಾಲ್, 6 ಬೌಂಡರಿ, 2 ಸಿಕ್ಸ್) ಆಕರ್ಷಕ ಹಾಫ್ ಸೆಂಚುರಿ ಬಾರಿಸಿದರು. ಮೊದಲ ವಿಕೆಟ್ಗೆ 106 ರನ್ಗಳ ಸ್ಟಾರ್ಟ್ ನೀಡಿದ ಈ ಜೋಡಿ, ತಂಡದ ಗೆಲುವಿನ ದಾರಿ ಸುಗಮಗೊಳಿಸಿದರು.
ಓಪನಿಂಗ್ ಜೋಡಿಯ ಭರ್ಜರಿ ಪ್ರದರ್ಶನದಿಂದ ಗುಜರಾತ್ ಟೈಟನ್ಸ್, ಸುಲಭದ ಗೆಲುವು ಸಿಗಲಿದೆ ಅನ್ನೋ ನಿರೀಕ್ಷೆಯಲ್ಲಿತ್ತು. ಆದ್ರೆ ಓಪನರ್ಸ್ ಔಟ್ ಆದ ನಂತರ ಬಂದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ(24) ಹಾಗೂ ಸಾಯಿ ಸುದರ್ಶನ್(14) ತಂಡದ ಕೈಹಿಡಿಯಲಿಲ್ಲ. ಇವರ ಬೆನ್ನಲ್ಲೇ ರಾಹುಲ್ ತೇವಾಟಿಯಾ(3) ರನ್ ಗಳಿಸುವ ಅವಸರದಲ್ಲಿ ರನೌಟ್ ಬಲೆಗೆ ಬಿದ್ದರು. ಪರಿಣಾಮ ಒಂದು ಹಂತದಲ್ಲಿ ಗೆಲುವಿನ ಹಾದಿಯಲ್ಲಿದ್ದ ಗುಜರಾತ್ ದಿಢೀರ್ ಕುಸಿತ ಕಂಡಿತು. 15 ಓವರ್ ವರೆಗೂ ಜಯದ ಆಸೆ ಕೈಚಲ್ಲಿದ್ದ ಮುಂಬೈ ಇಂಡಿಯನ್ಸ್ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಿತು. ಸಂಪೂರ್ಣ ಮೇಲುಗೈ ಹೊಂದಿದ್ದ ಗುಜರಾತ್ ಟೈಟನ್ಸ್ ಆಟಕ್ಕೆ ಮುಂಬೈ ಬ್ರೇಕ್ ಹಾಕಿದ ಪರಿಣಾಮ, ಗುಜರಾತ್ ತಂಡಕ್ಕೆ ಕೊನೆ ಓವರ್ ನಲ್ಲಿ ಗೆಲ್ಲಲು 9 ರನ್ ಬೇಕಿತ್ತು. ಆದ್ರೆ ಚಾಣಾಕ್ಷ ಬೌಲಿಂಗ್ ಮಾಡಿದ ಡೆನಿಯಲ್ ಸ್ಯಾಮ್ಸ್, ಕೇವಲ 3 ರನ್ ಕೊಟ್ಟು ಮುಂಬೈಗೆ ರೋಚಕ ಗೆಲುವು ತಂದುಕೊಟ್ರು. ಟೈಟನ್ಸ್ ಪರ ಡೇವಿಡ್ ಮಿಲ್ಲರ್(19*) ಕೊನೆವರೆಗೂ ಹೋರಾಡಿದ್ರು ಗೆಲುವು ಸಿಗಲಿಲ್ಲ.
ಮುಂಬೈ ಪರ ಮುರುಗನ್ ಅಶ್ವಿನ್ 2, ಪೊಲಾರ್ಡ್ 1 ವಿಕೆಟ್ ಪಡೆದರೆ. 2 ವಿಕೆಟ್ ರನೌಟ್ ರೂಪದಲ್ಲಿ ಸಿಕ್ತು. ಅದ್ಭುತ ಬೌಲಿಂಗ್ ಮೂಲಕ ಮುಂಬೈ ಗೆಲುವಿನ ಹೀರೋ ಆದ ಡೆನಿಯಲ್ ಸ್ಯಾಮ್ಸ್, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದು ಮಿಂಚಿದ್ರು. ಈ ಗೆಲುವಿನಿಂದ ಮುಂಬೈ ಇಂಡಿಯನ್ಸ್ 15ನೇ ಸೀಸನ್ ನಲ್ಲಿ ಎರಡನೇ ಗೆಲುವು ಕಂಡಿತು.