IPL 2022- MI- GT- Match No-51 – ಹೊಸ ಮುಖಗಳಿಗೆ ಅವಕಾಶ ನೀಡುತ್ತಾ ಮುಂಬೈ ಇಂಡಿಯನ್ಸ್ – Mumbai Indians Probable XI

ಐಪಿಎಲ್ ನಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಏಕೈಕ ತಂಡ ಮುಂಬೈ ಇಂಡಿಯನ್ಸ್. ಪ್ರತಿ ಟೂರ್ನಿಯಲ್ಲೂ ಬಲಿಷ್ಠ ತಂಡ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದ ತಂಡ. ಆದ್ರೆ ಈ ಬಾರಿಯ ಟೂರ್ನಿಯಲ್ಲಿ ಅತೀ ದುರ್ಬಲ ತಂಡವಾಗಿದೆ.
ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ಮುಂಬೈ ಇಂಡಿಯನ್ಸ್ ಟೂರ್ನಿಯಿಂದ ಹೊರಬಿದ್ದಿದೆ. ಸತತವಾಗಿ ಎಂಟು ಪಂದ್ಯಗಳನ್ನು ಸೋತಿದ್ದ ಮುಂಬೈ ಇಂಡಿಯನ್ಸ್ ತಂಡ 9ನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಆಡಿರುವ 9 ಪಂದ್ಯಗಳಲ್ಲಿ ಎಂಟು ಸೋಲು ಮತ್ತು ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಹೀಗಾಗಿ ಟೂರ್ನಿಯ ಮುಂದಿನ ಪಂದ್ಯಗಳು ಮುಂಬೈ ಇಂಡಿಯನ್ಸ್ ತಂಡಕ್ಕೆ ಅಳಿವು ಉಳಿವಿನ ಪಂದ್ಯವಾಗಿದೆ. ಸೋತ್ರೂ ಗೆದ್ರೂ ಕಳೆದುಕೊಳ್ಳುವುದು ಏನಿಲ್ಲ. ಒಟ್ಟಿನಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ತಪ್ಪಿಸಲು ಹೋರಾಟ ಮಾತ್ರ ನಡೆಸಬೇಕಿದೆ.
ಆದ್ರೂ ಗುಜರಾತ್ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪ್ರಯೋಗಕ್ಕೆ ಮುಂದಾಗಬಹುದು. ಈಗಾಗಲೇ ಹೆಡ್ ಕೋಚ್ ಮಹೇಲಾ ಜಯವರ್ಧನೆ ತಂಡದಲ್ಲಿ ಮಹತ್ತರವಾದ ಬದಲಾವಣೆ ಮಾಡುವ ಸೂಚನೆಯನ್ನು ನೀಡಿದ್ದಾರೆ. ಹೀಗಾಗಿ ಗುಜರಾತ್ ವಿರುದ್ಧ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಗಳು ಹೆಚ್ಚಿವೆ.

ಅದ್ರಲ್ಲೂ ಸಚಿನ್ ತೆಂಡುಲ್ಕರ್ ಮಗ ಅರ್ಜುನ್ ತೆಂಡುಲ್ಕರ್ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ. ಆದ್ರೂ ಯಾರ ಸ್ಥಾನವನ್ನು ಅಕ್ರಮಿಸಿಕೊಳ್ಳುತ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. IPL 2022- MI- GT- Match No-51 – Mumbai Indians Probable XI
ಇನ್ನು ಮುಂಬೈ ತಂಡದ ಪರ ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶಾನ್ ಕಣಕ್ಕಿಳಿಯುವುದರಲ್ಲಿ ಸಂದೇಹವಿಲ್ಲ. ಹಾಗೇ ಸೂರ್ಯ ಕುಮಾರ್ ಯಾದವ್, ತಿಲಕ್ ವರ್ಮಾ, ಡೆವಾಲ್ಡ್ ಬ್ರೇವಿಸ್ ಸ್ಥಾನವೂ ಗಟ್ಟಿಯಾಗಿದೆ. ಕಿರಾನ್ ಪೊಲಾರ್ಡ್ ಮತ್ತು ಡೇನಿಯಲ್ ಸ್ಯಾಮ್ಸ್ ಇನ್ನಷ್ಟು ಪರಿಣಾಮಕಾರಿಯಾಬೇಕಿದೆ. ಪೊಲಾರ್ಡ್ ಆಟವಂತೂ ಈ ಬಾರಿಯ ಐಪಿಎಲ್ ನಲ್ಲಿ ಮಿಂಚು ಹರಿಸಿಲ್ಲ. ಒಂದು ವೇಳೆ ಬದಲಾವಣೆ ಮಾಡಿದ್ರೂ ಇವರಿಬ್ಬರ ಸ್ಥಾನದಲ್ಲಿ ಬೇರೆಯವರು ಆಡಿದ್ರೂ ಆಡಬಹುದು. ಮೂವರು ವಿದೇಶಿ ಆಟಗಾರರನ್ನು ಆಡಿಸುವ ತೀರ್ಮಾನ ತೆಗೆದುಕೊಂಡ್ರೆ ಆಗ ಅರ್ಜುನ್ ತೆಂಡುಲ್ಕರ್ ಇವರಿಬ್ಬರ ಪೈಕಿ ಒಬ್ಬರ ಸ್ಥಾನವನ್ನು ಆಕ್ರಮಿಸಿಕೊಳ್ಳಬಹುದು.

ಇನ್ನುಳಿದಂತೆ ಜಸ್ಪ್ರಿತ್ ಬೂಮ್ರಾ, ರಿಲೇಯ್ ಮೆರೆಡಿತ್ ತಂಡದ ವೇಗದ ಅಸ್ತ್ರಗಳು. ಕುಮಾರ್ ಕಾರ್ತಿಕೆಯ ಮತ್ತು ಹೃತಿಕ್ ಶೋಕಿನ್ ಈಗಾಗಲೇ ಗಮನ ಸೆಳೆದಿರುವುದರಿಂದ ಅವರಿಗೆ ಅವಕಾಶ ನೀಡಬಹುದು.
ಒಟ್ಟಿನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ಸಿಗಬಹುದು. ಮುಂದಿನ ಟೂರ್ನಿಗೆ ತಂಡವನ್ನು ಬಲಿಷ್ಠಗೊಳಿಸಲು ಮುಂಬೈ ಇಂಡಿಯನ್ಸ್ ಪ್ಲಾನ್ ಮಾಡಿಕೊಳ್ಳುತ್ತಿದೆ.
ಇನ್ನೊಂದೆಡೆ ಗುಜರಾತ್ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲೂ ಬಲಿಷ್ಠವಾಗಿರುವುದರಿಂದ ಮುಂಬೈ ಇಂಡಿಯನ್ಸ್ ಸಾಕಷ್ಟು ಹೋಮ್ ವರ್ಕ್ ಮಾಡಿಕೊಳ್ಳಬೇಕಿದೆ.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ ಇಲೆವೆನ್
ರೋಹಿತ್ ಶರ್ಮಾ (ನಾಯಕ)
ಇಶಾನ್ ಕಿಶಾನ್ (ವಿಕೆಟ್ ಕೀಪರ್)
ಸೂರ್ಯ ಕುಮಾರ್ ಯಾದವ್
ತಿಲಕ್ ವರ್ಮಾ
ಡೇವಾಲ್ಡ್ ಬ್ರೇವಿಸ್
ಕಿರಾನ್ ಪೊಲಾರ್ಡ್
ಹೃತಿಕ್ ಶೋಕೀನ್
ಡೇನಿಯಲ್ ಸ್ಯಾಮ್ಸ್
ಜಸ್ಪ್ರಿತ್ ಬೂಮ್ರಾ
ಕುಮಾರ್ ಕಾರ್ತಿಕೆಯ
ರಿಲೇಯ್ ಮೆರೆಡಿತ್