ಇಂಡಿಯನ್ ಪ್ರೀಮಿಯರ್ ಲೀಗ್ ಲೆಕ್ಕಾಚಾರಗಳು ವೇಗವಾಗಿ ಬದಲಾಗುತ್ತಿವೆ. ಕೆಲ ದಿನಗಳ ಹಿಂದೆ ಐಪಿಎಲ್ ನಲ್ಲಿ ಸಿಕ್ಸರ್ಗಳ ಸುರಿಮಳೆ ಆಗುತ್ತಿತ್ತು. ಆದರೆ ಈಗ ಬೌಲರ್ಗಳು ಮ್ಯಾಚ್ ವಿನ್ನರ್ಗಳಾಗುತ್ತಿದ್ದಾರೆ. ಸಿಕ್ಸರ್ಗಳ ಲೆಕ್ಕ ಪಂದ್ಯದಿಂದ ಪಂದ್ಯಕ್ಕೆ ಕಡಿಮೆ ಆಗುತ್ತಿದೆ.
ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಸಿಕ್ಸರ್ ಸಿಡಿದಿದ್ದು 2018ರಲ್ಲಿ. ಆ ಸೀಸನ್‌ನಲ್ಲಿ 872 ಸಿಕ್ಸರ್ಗಳು ಸಿಡಿದಿದ್ದವು. ಆದರೆ ಈ ದಾಖಲೆ ಈ ಬಾರಿ ಮುರಿಯಬಹುದು. ಈಗಾಗಲೇ 2022ರ ಐಪಿಎಲ್‌ನಲ್ಲಿ 814 ಸಿಕ್ಸರ್ಗಳು ಸಿಡಿದಿವೆ. ಈ ಟೂರ್ನಿಯಲ್ಲಿ ಇನ್ನೂ 16 ಪಂದ್ಯಗಳು ಬಾಕಿ ಉಳಿದಿವೆ. ಇನ್ನು 59 ಸಿಕ್ಸರ್ಗಳು ಸಿಡಿದರೆ ಸಾಕು ಟೂರ್ನಿಯಲ್ಲಿ ಹೊಸ ದಾಖಲೆ ನಿರ್ಮಾಣವಾಗಲಿದೆ.

1000 ಸಿಕ್ಸರ್ಗಳ ಸೀಸನ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ. 16 ಪಂದ್ಯಗಳಲ್ಲಿ 186 ಸಿಕ್ಸರ್ ಸಿಡಿದರೆ 1000 ಸಿಕ್ಸರ್ಗಳ ದಾಖಲೆ ಸ್ಥಾಪನೆಯಾಗುತ್ತದೆ. ಹೀಗಾಗಿ ಐಪಿಎಲ್‌ನಲ್ಲಿ ಪ್ರತಿಯೊಂದು ಸಿಕ್ಸರ್ಗಳು ಕೂಡ ಈಗ ಲೆಕ್ಕಾಚಾರಕ್ಕಿಂತ ಹೆಚ್ಚು ಮಹತ್ವ ಪಡೆದಿವೆ.
ಸಿಕ್ಸರ್ ಪಟ್ಟಿ
ಸೀಸನ್ ಸಿಡಿದ ಸಿಕ್ಸರ್
- 2008- 620
- 2009- 443
- 2010- 583
- 2011- 638
- 2012- 726
- 2013- 674
- 2014- 714
- 2015- 692
- 2016- 638
- 2017- 705
- 2018- 872
- 2019- 784
- 2020- 734
- 2021- 687
- 2022- 814