ಐಪಿಎಲ್ 2022 ರ 61 ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಆಟಗಾರರು ಬಿರುಸಿನ ಅಭ್ಯಾಸ ನಡೆಸಿದ್ದಾರೆ. ಹೈದರಾಬಾದ್ ಆಟಗಾರರು ಸಹ ತಾಲೀಮು ನಡೆಸಿದ್ದಾರೆ. ಅದರಲ್ಲಿ ಒಬ್ಬ ಆಟಗಾರನೊಬ್ಬನ ವಿಡಿಯೋ ಸನ್ ತಂಡ ಹಾಕಿದ್ದುಮ ವೈರಲ್ ಆಗುತ್ತಿದೆ.
ಪ್ರತಿಭಾವಂತ ಬ್ಯಾಟ್ಸ್‌ಮನ್ ಶಶಾಂಕ್ ಅಭ್ಯಾಸದ ವೇಳೆ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಅನೇಕ ಹೊಡೆತಗಳನ್ನು ಆಡಿದರು.
One step back, one smash forward. 💥@shashank2191 | #OrangeArmy #ReadyToRise #TATAIPL pic.twitter.com/E5df0q1FRb
— SunRisers Hyderabad (@SunRisers) May 10, 2022
ಹೈದರಾಬಾದ್ ವಿಡಿಯೋವನ್ನು ಟ್ವೀಟ್ ಮಾಡಿದೆ. ಇದರಲ್ಲಿ ಶಶಾಂಕ್ ಬ್ಯಾಟಿಂಗ್ ಮಾಡುತ್ತಿರುವುದು ಕಂಡು ಬರುತ್ತದೆ. ನೆಟ್ಸ್‌ನಲ್ಲಿ ಅಭ್ಯಾಸದ ಸಮಯದಲ್ಲಿ ಅವರು ಅನೇಕ ಉತ್ತಮ ಹೊಡೆತಗಳನ್ನು ಹೊಡೆಯುತ್ತಾರೆ. ಅವರ ಈ ವಿಡಿಯೋಗೆ ಅಭಿಮಾನಿಗಳು ಹಲವು ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅವರ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಕೆಲವೇ ಸಮಯದಲ್ಲಿ 400 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

ಶಶಾಂಕ್ ಸಿಂಗ್ ಅವರನ್ನು ಹೈದರಾಬಾದ್ 20 ಲಕ್ಷಕ್ಕೆ ಖರೀದಿಸಿತ್ತು. ಇದು ಅವರ ಮೂಲ ಬೆಲೆಯಾಗಿತ್ತು. ಇದು ಶಶಾಂಕ್ ಅವರ ಮೊದಲ ಐಪಿಎಲ್ ಸೀಸನ್. ಆದರೂ ಅವರು ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ ಕೇವಲ 58 ರನ್ ಗಳಿಸಿದ್ದಾರೆ. ಈ ವೇಳೆ ಶಶಾಂಕ್ ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 25 ರನ್ ಆಗಿದೆ. ಶಶಾಂಕ್ ದೇಶಿಯ ಪಂದ್ಯಗಳಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶನ ನೀಡಿದ್ದಾರೆ.