IPL 2022- Match No -16 – ಗುಜರಾತ್ ಟೈಟಾನ್ಸ್ – ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್..!

2022ರ ಐಪಿಎಲ್ ಟೂರ್ನಿ- ಏಪ್ರಿಲ್ 8- ಮ್ಯಾಚ್ ನಂಬರ್ -16. ಬ್ರೆಬೋರ್ನ್ ಅಂಗಣ. ಸಮಯ – ರಾತ್ರಿ 7.30 – ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಫೈಟ್.
ಹೌದು, ಇದು ಬಲಿಷ್ಠ ತಂಡಗಳ ನಡುವಿನ ಕಾದಾಟ. ಬ್ಯಾಟ್ಸ್ ಮೆನ್ ಗಳನ್ನೇ ಹೆಚ್ಚು ನಂಬಿಕೊಂಡಿರುವ ಉಭಯ ತಂಡಗಳಿಗೆ ಬ್ರೆಬೋನ್ ಅಂಗಣದಲ್ಲಿ ರನ್ ಗಳ ಸುರಿಮಳೆಯಾಗುವ ಸಾಧ್ಯತೆ ಇದೆ.
ಪಂಜಾಬ್ ಕಿಂಗ್ಸ್ ತಂಡ ನಾಲ್ಕನೇ ಪಂದ್ಯವನ್ನು ಆಡಲಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಒಂದು ಪಂದ್ಯವನ್ನು ಸೋತಿದೆ. ಅಂಕ ಪಟ್ಟಿಯಲ್ಲಿ ಸದ್ಯಕ್ಕೆ ಐದನೇ ಸ್ಥಾನದಲ್ಲಿದೆ.

ಅದೇ ರೀತಿ ಗುಜರಾತ್ ಟೈಟಾನ್ಸ್ ನಿರೀಕ್ಷೆಗೂ ಮೀರಿದ ಪ್ರದರ್ಶನವನ್ನು ನೀಡುತ್ತಿದೆ. ಮೂರನೇ ಪಂದ್ಯವನ್ನು ಆಡಲಿರುವ ಹಾರ್ದಿಕ್ ಬಳಗ ಗೆಲುವಿನ ಆಮಲಿನಲ್ಲಿದೆ. ಆಡಿರುವ ಎರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಗುಜರಾತ್ ಟೈಟಾನ್ಸ್ ತಂಡ ಹ್ಯಾಟ್ರಿಕ್ ಗೆಲುವಿನ ಹಂಬಲದಲ್ಲಿದೆ. IPL 2022- Match No -16 -Punjab Kings vs Gujarat Titans Probable XIs
ಎರಡು ತಂಡಗಳ ಬಲಾಬಲವನ್ನು ನೋಡಿದಾಗ ಪಂಜಾಬ್ ಕಿಂಗ್ಸ್ ತುಸು ಬಲಿಷ್ಠವಾಗಿ ಕಂಡುಬರುತ್ತಿದೆ. ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅನುಭವಿ ಆಟಗಾರರನ್ನು ಹೊಂದಿದೆ. ಅದೇ ರೀತಿ ಗುಜರಾತ್ ಟೈಟಾನ್ಸ್ ದಲ್ಲಿ ಏಕಾಂಗಿ ಪಂದ್ಯವನ್ನು ಗೆಲ್ಲಿಸಿಕೊಡುವಂತಹ ಆಟಗಾರರು ಇದ್ದಾರೆ. ಹೀಗಾಗಿ ಎರಡು ತಂಡಗಳ ನಡುವೆ ಜಿದ್ದಾಜಿದ್ದಿನ ಹೋರಾಟವನ್ನು ಎದುರು ನೋಡಬಹುದು.
ಪಂಜಾಬ್ ಕಿಂಗ್ಸ್ ಪ್ಲೇಯಿಂಗ್ ಇಲೆವೆನ್
ಮಯಾಂಕ್ ಅಗರ್ ವಾಲ್ (ನಾಯಕ)
ಶಿಖರ್ ಧವನ್
ಭಾನುಕಾ ರಾಜಪಕ್ಷೆ
ಲಿಯಾಮ್ ಲಿವಿಂಗ್ ಸ್ಟೋನ್
ಶಾರೂಖ್ ಖಾನ್
ಒಡಿಯನ್ ಸ್ಮಿತ್
ಜಿತೇಶ್ ಶರ್ಮಾ (ವಿಕೆಟ್ ಕೀಪರ್)
ರಾಹುಲ್ ಚಾಹರ್
ಕಾಗಿಸೊ ರಬಾಡ
ಆರ್ಶಾದೀಪ್ ಸಿಂಗ್
ವೈಭವ್ ಆರೋರ
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ ಇಲೆವೆನ್
ಶುಬ್ಮನ್ ಗಿಲ್
ಮ್ಯಾಥ್ಯೂ ವಾಡೆ (ವಿಕೆಟ್ ಕೀಪರ್)
ವಿಜಯ್ ಶಂಕರ್
ಹಾರ್ದಿಕ್ ಪಾಂಡ್ಯ (ನಾಯಕ)
ಅಭಿನವ್ ಮನೋಹರ್
ಡೇವಿಡ್ ಮಿಲ್ಲರ್
ರಾಹುಲ್ ಟೆವಾಟಿಯಾ
ರಶೀದ್ ಖಾನ್
ವರುಣ್ ಆರೋನ್
ಲೂಕಿ ಫಗ್ರ್ಯುಸನ್
ಮಹಮ್ಮದ್ ಶಮಿ