IPL 2022 – Match NO -15 – ಲಕ್ನೋ ಸೂಪರ್ ಜೈಂಟ್ಸ್ – ಡೆಲ್ಲಿ ಕ್ಯಾಪಿಟಲ್ಸ್ – ಪ್ಲೇಯಿಂಗ್ ಇಲೆವೆನ್

ಏಪ್ರಿಲ್ 7. ಸಮಯ ರಾತ್ರಿ 7.30. 15ನೇ ಆವೃತ್ತಿಯ ಐಪಿಎಲ್ ಟೂರ್ನಿ – ಮ್ಯಾಚ್ ನಂಬರ್ 15. ಮುಂಬೈನ ಡಿ.ವೈ. ಪಾಟೀಲ್ ಅಂಗಣ… ನಡೆಯಲಿದೆ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಹೋರಾಟ
ಹೌದು, ಕೆ.ಎಲ್. ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಿಷಬ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಹೋರಾಟ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. IPL 2022 – Match No-15 – LSG vs DC Dream11 Prediction
ಈಗಾಗಲೇ ಲಕ್ನೋ ಸೂಪರ್ ಜೈಂಟ್ಸ್ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಒಂದು ಪಂದ್ಯವನ್ನು ಸೋತಿದೆ. ಹಾಗೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಗೆಲುವು, ಒಂದು ಸೋಲನ್ನು ಕಂಡಿದೆ.
ಇನ್ನು ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಆಗಮನದಿಂದ ತಂಡದ ಬ್ಯಾಟಿಂಗ್ ಬಲ ವನ್ನು ಹೆಚ್ಚಿಸಿದೆ. ಇನ್ನುಳಿದಂತೆ ತಂಡದಲ್ಲಿ ಹೆಚ್ಚಿನ ಬದಲಾವಣೆ ಏನು ಆಗಲ್ಲ. ಆದ್ರೂ ಮನ್ ದೀಪ್ ಸಿಂಗ್ ಮತ್ತು ಕೆ.ಎಸ್. ಭರತ್ ನಡುವೆ 11ರ ಬಳಗದಲ್ಲಿ ಕಾಣಿಸಿಕೊಳ್ಳಲು ಪೈಪೋಟಿ ಇದೆ. ಹಾಗೇ ಯಶ್ ಧೂಲ್ ಕೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

ಇನ್ನೊಂದೆಡೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಚಿಂತೆ ಮಾಡುವ ಅಗತ್ಯವಿಲ್ಲ. ಕೆ.ಎಲ್. ರಾಹುಲ್ ಮತ್ತು ಕ್ವಿಂಟನ್ ಡಿ ಕಾಕ್ ಇನಿಂಗ್ಸ್ ಆರಂಭಿಸಲಿದ್ದಾರೆ. ಮನೀಷ್ ಪಾಂಡೆ ಫಾರ್ಮ್ ಕಂಡುಕೊಳ್ಳಬೇಕಿದೆ. ಹಾಗೇ ಎವಿನ್ ಲೂವಿಸ್ ಮತ್ತು ಆಯೂಷ್ ಬಡೋನಿ ಮಧ್ಯಮ ಕ್ರಮಾಂಕದಲ್ಲಿ ಆಸರೆಯಾಗಲಿದ್ದಾರೆ. ಜೇಸನ್ ಹೋಲ್ಡರ್, ಕೃನಾಲ್ ಪಾಂಡ್ಯ ಮತ್ತು ದೀಪಕ್ ಹೂಡಾ ಆಲ್ ರೌಂಡರ್ ಗಳು ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದ್ದಾರೆ. ಆದ್ರೆ ಬೌಲಿಂಗ್ ವಿಭಾಗದಲ್ಲಿ ಆವೇಶ್ ಖಾನ್ ಮತ್ತು ಆಂಡ್ರ್ಯೂ ಟೈ ಮತ್ತು ರವಿ ಬಿಷ್ಣೋಯ್ ಅವರು ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ.
ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ 11
ಕೆ.ಎಲ್. ರಾಹುಲ್ (ನಾಯಕ)
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್)
ಮನೀಷ್ ಪಾಂಡೆ
ಎವಿನ್ ಲೂವಿಸ್
ಆಯುಷ್ ಬಡೋನಿ
ದೀಪಕ್ ಹೂಡಾ
ಜೇಸನ್ ಹೋಲ್ಡರ್
ಕೃನಾಲ್ ಪಾಂಡ್ಯ
ಆವೇಶ್ ಖಾನ್
ಆಂಡ್ರ್ಯೂ ಟೈ
ರವಿ ಬಿಷ್ಣೋಯ್
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ ಇಲೆವೆನ್
ಡೇವಿಡ್ ವಾರ್ನರ್
ಪೃಥ್ವಿ ಶಾ
ರಿಷಬ್ ಪಂತ್ (ನಾಯಕ)
ಕೆ.ಎಸ್. ಭರತ್
ಲಲಿತ್ ಯಾದವ್
ರೊವ್ಮನ್ ಪೊವೆಲ್
ಶಾರ್ದೂಲ್ ಥಾಕೂರ್
ಅಕ್ಷರ್ ಪಟೇಲ್
ಆನ್ರಿಚ್ ನೊರ್ಟೆಜೆ
ಕುಲದೀಪ್ ಯಾದವ್
ಮುಷ್ತಾಫಿಝುರ್ ರಹಮಾನ್