ಡೇವಿಡ್ ವಾರ್ನರ್ ಅವರನ್ನು ವಿಶ್ವ ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ಬ್ಯಾಟ್ಸ್‌ಮನ್. ಇದಲ್ಲದೇ ವಾರ್ನರ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿ ಇರುತ್ತಾರೆ. ಅವರ ಪ್ರತಿಯೊಂದು ಶೈಲಿಯು ಅಭಿಮಾನಿಗಳನ್ನು ಸೆಳೆಯುತ್ತದೆ. ಪುಷ್ಪದಿಂದ ಹಿಡಿದು ರಾಕಿ ಭಾಯ್ ವರೆಗೆ ವಾರ್ನರ್ ಪ್ರತಿ ಪಾತ್ರವನ್ನು ಚೆನ್ನಾಗಿ ಅಭಿನಯಿಸಿದ್ದಾರೆ.

ಇದೀಗ ವಾರ್ನರ್ ತಮ್ಮ ಆಟವನ್ನು ಬದಲಿಸಿಕೊಳ್ಳಲು ನಿರ್ಧರಿಸಿದ್ದಾರೆ. ವಾರ್ನರ್ ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲಿ ತಮ್ಮ ಕೈಚಳಕ ಪ್ರಯತ್ನಿಸುತ್ತಿದ್ದಾರೆ. ಲೆಗ್ ಸ್ಪಿನ್ನರ್ ಆಗಿ ವಾರ್ನರ್ ಕಾಣಿಸಿಕೊಂಡಿದ್ದು, ಅವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ವಾರ್ನರ್ ಬೌಲಿಂಗ್ ಮೂಡ್‌ನಲ್ಲಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ. ಅವರ ಮೊದಲ ಚೆಂಡು ಬ್ಯಾಟ್ಸ್‌ಮನ್‌ನ ಥಾಯ್ ಪ್ಯಾಡ್‌ಗೆ ಬಡಿಯುತ್ತದೆ, ಅದಕ್ಕೆ ವಾರ್ನರ್ ಲೆಗ್ ಸ್ಪಿನ್ ಎಂದು ಸೂಚಿಸಿದರು. ಬ್ಯಾಟ್ಸ್‌ಮನ್ ಪ್ರತಿಕ್ರಿಯಿಸುವುದಿಲ್ಲ ಮತ್ತು ಎರಡನೇ ಎಸೆತದಲ್ಲಿ ವಾರ್ನರ್ ಬ್ಯಾಟ್ಸ್ ಮನ್ ನ ತಲೆಯ ಮೇಲೆ ಚೆಂಡನ್ನು ಎಸೆದರು. ನಂತರದ ಎಸೆತದಲ್ಲಿ ಬ್ಯಾಟ್ಸ್ ಮನ್ ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು. ವಾರ್ನರ್ ಫುಲ್ ಖುಷ್.

ಐಪಿಎಲ್ ಸಮಯದಲ್ಲಿ, ವಾರ್ನರ್ ಅವರ ಪತ್ನಿ ಮತ್ತು ಅವರ ಪುತ್ರಿಯರು ಡೆಲ್ಲಿ ಕ್ಯಾಪಿಟಲ್ಸ್ ಶಿಬಿರದಲ್ಲಿ ಕಾಣಿಸಿಕೊಂಡಿದ್ದಾರೆ. ವಾರ್ನರ್ ಪ್ರತಿ ವಿಜಯದ ನಂತರ ತನ್ನ ಕುಟುಂಬದೊಂದಿಗೆ ವೀಡಿಯೊಗಳನ್ನು ಮಾಡಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ ನಂತರ ಉರಿ – ದಿ ಸರ್ಜಿಕಲ್ ಸ್ಟ್ರೈಕ್ ಚಿತ್ರದ ಹೌ ಈಸ್ ದಿ ಜೋಶ್ ಎಂಬ ಪ್ರಸಿದ್ಧ ಸಂಭಾಷಣೆಯನ್ನು ವಾರ್ನರ್ ಪುನರಾವರ್ತಿಸುತ್ತಿರುವುದು ಕಂಡುಬಂದಿದೆ.