IPL 2022 – ಕೆ.ಎಲ್. ರಾಹುಲ್ ಸಾರಥ್ಯದ ಲಕ್ನೋ ಸೂಪರ್ ಜೈಂಟ್ಸ್ ತಂಡ ಹೇಗಿದೆ…? ಇಲ್ಲಿದೆ ತಂಡದ ಫುಲ್ ಡಿಟೇಲ್ಸ್…!
ಲಕ್ನೋ ಸೂಪರ್ ಜೈಂಟ್ಸ್.. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಹೊಸ ತಂಡ. ಆರ್ ಪಿಎಸ್ ಜಿ ಗ್ರೂಪ್ ನ ಮಾಲೀಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್. ಜಿಂಬಾಬ್ವೆಯ ಮಾಜಿ ಆಟಗಾರ ಆಂಡಿ ಫ್ಲವರ್ ಅವರು ತಂಡದ ಹೆಡ್ ಕೋಚ್ ಆಗಿದ್ದಾರೆ. ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ವಿಜಯ್ ದಹಿಯಾ ಅವರು ಅಸಿಸ್ಟೆಂಟ್ ಕೋಚ್ ಆಗಿದ್ದಾರೆ. ಸಂಜೀವ್ ಗೋಯೆಂಕ ತಂಡದ ಮಾಲೀಕರಾಗಿದ್ದಾರೆ.
ಕೆ.ಎಲ್. ರಾಹುಲ್ ಸಾರಥ್ಯ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಮೂರು ಮಂದಿ ಕನ್ನಡದ ಆಟಗಾರರಿದ್ದಾರೆ. ಇನ್ನುಳಿದಂತೆ ಆಲ್ ರೌಂಡರ್ ಗಳಾದ ಮಾರ್ಕಸ್ ಸ್ಟೋನಿಸ್, ಜೇಸನ್ ಹೋಲ್ಡರ್, ಕ್ವಿಂಟನ್ ಡಿ ಕಾಕ್ ಅನುಭವಿ ಆಟಗಾರರಿದ್ದಾರೆ. ವೇಗದ ಬೌಲರ್ ಆವೇಶ್ ಖಾನ್ ದೀಪಕ್ ಹೂಡಾ, ರವಿ ಬಿಸ್ನೋಯ್ ನಂತಹ ಮ್ಯಾಚ್ ವಿನ್ನರ್ ಆಟಗಾರರು ಇದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ಜೇಬಿ
ನಲ್ಲಿದ್ದ ಒಟ್ಟು ಹಣ – 90 ಕೋಟಿ
ಹರಾಜಿಗೂ ಮುನ್ನ ಖರೀದಿಸಿದ ಮೂವರು ಆಟಗಾರರ ವೆಚ್ಚ – 30..2 ಕೋಟಿ ರೂ.
ಮೆಗಾ ಹರಾಜಿನಲ್ಲಿ 18 ಆಟಗಾರರನ್ನು ಖರೀದಿ ಮಾಡಿದ ವೆಚ್ಚ- 59.80 ಕೋಟಿ ರೂ.
ಒಟ್ಟು 90 ಕೋಟಿ ರೂಪಾಯಿ ಖರ್ಚು ಮಾಡಿದ ಲಕ್ನೋ ಸೂಪರ್ ಜೈಂಟ್ಸ್
ಲಕ್ನೋ ಸೂಪರ್ ಜೈಂಟ್ ತಂಡದಲ್ಲಿರುವ ಒಟ್ಟು ಆಟಗಾರರು 21
14 ಮಂದಿ ಭಾರತ, 7 ಮಂದಿ ವಿದೇಶಿ ಆಟಗಾರರು
ಲಕ್ನೋ ಸೂಪರ್ ಜೈಂಟ್ಸ್ ತಂಡ ಮೆಗಾ ಹರಾಜಿಗೂ ಮುನ್ನವೇ ಮೂವರು ಆಟಗಾರರನ್ನು 30.2 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ತಂಡದ ನಾಯಕ ಕೆ.ಎಲ್. ರಾಹುಲ್ ಗೆ 17 ಕೋಟಿ ರೂಪಾಯಿ, ಆಲ್ ರೌಂಡರ್ ಮಾರ್ಕಸ್ ಸ್ಟೋನಿಸ್ ಗೆ 9.2 ಕೋಟಿ ರೂ ಹಾಗೂ ರವಿ ಬಿಸ್ನೋಯ್ ಗೆ 4 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. Lucknow Super Giants Players List
ನಂತರ ಮೆಗಾಹರಾಜಿನಲ್ಲಿ 69.80 ಕೋಟಿ ರೂಪಾಯಿ ಖರ್ಚು ಮಾಡಿದ 18 ಆಟಗಾರರನ್ನು ಖರೀದಿ ಮಾಡಿದೆ. ಆವೇಶ್ ಖಾನ್ ಗೆ 10 ಕೋಟಿ ರೂಪಾಯಿ ನೀಡಿದೆ. ಒಟ್ಟು ನಿಗದಿಪಡಿಸಿದ್ದ 90 ಕೋಟಿ ರೂಪಾಯಿಯನ್ನು ವೆಚ್ಚ ಮಾಡಿದ ಒಟ್ಟು 21 ಆಟಗಾರರನ್ನು ಸೇರಿಸಿಕೊಂಡಿದೆ. ಇದರಲ್ಲಿ 14 ಮಂದಿ ಭಾರತದ ಮತ್ತು ಏಳು ಮಂದಿ ವಿದೇಶಿ ಆಟಗಾರರು ಇದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ತಂಡ
ಹರಾಜಿಗೆ ಮುನ್ನ ಖರೀದಿ ಮಾಡಿದ ಆಟಗಾರರು
ಕೆ.ಎಲ್. ರಾಹುಲ್ (ನಾಯಕ) – 17 ಕೋಟಿ ರೂ.
ಮಾರ್ಕಸ್ ಸ್ಟೋನಿಸ್ – 9.2 ಕೋಟಿ ರೂ.
ರವಿ ಬಿಸ್ನೋಯ್ – 4 ಕೋಟಿ ರೂ.
ಮೆಗಾ ಹರಾಜಿನಲ್ಲಿ ಖರೀದಿ ಮಾಡಿದ ಆಟಗಾರರು
ಕ್ವಿಂಟನ್ ಡಿ ಕಾಕ್ – 6.75 ಕೋಟಿ ರೂ.
ಮನೀಷ್ ಪಾಂಡೆ – 4.60 ಕೋಟಿ ರೂ.
ಮನನ್ ವೋಹ್ರಾ – 20 ಲಕ್ಷ ರೂ.
ಎವಿನ್ ಲೂವಿಸ್ – 2 ಕೋಟಿ ರೂ.
ಮಾರ್ಕ್ ವುಡ್ – 7.5 ಕೋಟಿ ರೂ.
ಆವೇಶ್ ಖಾನ್ – 10 ಕೋಟಿ ರೂ.
ಅಂಕಿತ್ ರಜಪೂತ್ – 50 ಲಕ್ಷ ರೂ.
ದುಷ್ಮಂತ ಚಾಮೀರಾ – 2 ಕೋಟಿ ರೂ.
ಶಹಬಾಝ್ ನದೀಮ್ – 50 ಲಕ್ಷ ರೂ.
ಮೊಶ್ಹಿನ್ ಖಾನ್ – 20 ಲಕ್ಷ ರೂ.
ಮಯಾಂಕ್ ಯಾದವ್ – 20 ಲಕ್ಷ ರೂ.
ಜೇಸನ್ ಹೋಲ್ಡರ್ – 8.75 ಕೋಟಿ ರೂ.
ದೀಪಕ್ ಹೂಡಾ – 5.75 ಕೋಟಿ ರೂ.
ಕೃನಾಲ್ ಪಾಂಡ್ಯ – 8.25 ಕೋಟಿ ರೂ.
ಕೆ. ಗೌತಮ್ – 90 ಲಕ್ಷ ರೂ.
ಆಯುಷ್ ಬಡೋನಿ _ 20 ಲಕ್ಷ ರೂ.
ಕೈಲ್ ಮೇಯರ್ಸ್ – 50 ಲಕ್ಷ ರೂ
ಕರನ್ ಶರ್ಮಾ – 20 ಲಕ್ಷ ರೂ.