Rahul dravid ಪ್ರತಿ ದಿನವೂ ಕಲಿಯುತ್ತಲೇ ಇರುತ್ತೇನೆ.. ! ಅಷ್ಟಕ್ಕೂ ದ್ರಾವಿಡ್ ಕಲಿಯುತ್ತಿರುವುದು ಏನು ?

ತರಬೇತುದಾರನಾಗಿ ನಾನು ಪ್ರತಿ ದಿನ ಕಲಿಯುತ್ತಲೇ ಇದ್ದೇನೆ. ಸುಧಾರಣೆಗೊಳ್ಳುತ್ತಲೇ ಇರುತ್ತೇನೆ. ಉತ್ತಮಗೊಳಿಸುವುದನ್ನು ಎದುರು ನೋಡುತ್ತಿರುತ್ತೇನೆ. ಹಾಗೇ ತಂಡ ಕೂಡ ಅದನ್ನು ಮಾಡಲು ಬಯಸುತ್ತಿದೆ ಎಂದು ನಾನು ಭಾವಿಸುತ್ತೇನೆ. ಇದು ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಮನದ ಮಾತು.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ-20 ಸರಣಿಯನ್ನು ಕ್ಲೀನ್ ಸ್ವಿಪ್ ಮಾಡಿಕೊಂಡ ಬಳಿಕ ರಾಹುಲ್ ದ್ರಾವಿಡ್ ನಿರಾಳರಾಗಿದ್ದಾರೆ.
ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ ಫೆಬ್ರವರಿ 17ಕ್ಕೆ ನೂರು ದಿನ ಪೂರೈಸಿದ್ದಾರೆ. ಈ ನೂರು ದಿನಗಳಲ್ಲಿ ರಾಹುಲ್ ದ್ರಾವಿಡ್ ಸಾಕಷ್ಟು ಪಾಠಗಳನ್ನು ಕಲಿತಿದ್ದಾರೆ. ಕೆಲವು ಟೀಕೆಗಳನ್ನು ಎದುರಿಸಿದ್ದಾರೆ. ಆದ್ರೆ ಅದಕ್ಕೆಲ್ಲಾ ರಾಹುಲ್ ದ್ರಾವಿಡ್ ತಲೆಕೆಡಿಸಿಕೊಂಡಿಲ್ಲ.
ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ ಮೊದಲ ಯತ್ನದಲ್ಲಿ ಸಫಲರಾಗಿದ್ದಾರೆ. ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಯನ್ನು ಟೀಮ್ ಇಂಡಿಯಾ 3-0 ಯಿಂದ ಗೆದ್ದುಕೊಂಡಿತ್ತು.

ಆದಾದ ನಂತರ ದಕ್ಷಿಣ ಆಫ್ರಿಕಾದಲ್ಲಿ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸಿತ್ತು. ಟೆಸ್ಟ್ ಮತ್ತು ಏಕದಿನ ಸರಣಿಯಲ್ಲಿ ಸೋತಾಗ ಟೀಕೆಗಳು ಕೇಳಿಬಂದಿದ್ದವು. ಅಲ್ಲದೆ ವಿರಾಟ್ ಕೊಹ್ಲಿ ಅವರ ನಾಯಕತ್ವ ವಿಚಾರವೂ ಚರ್ಚೆಗೆ ಗುರಿಯಾಗಿದ್ದವು. ಹಾಗೇ ಸದ್ಯ ವೃದ್ದಿಮಾನ್ ಸಾಹಾ ಅವರ ಹೇಳಿಕೆಯೂ ಸ್ವಲ್ಪ ಮಟ್ಟಿಗೆ ಸದ್ದು ಮಾಡುತ್ತಿದೆ.
ಅದೇನೇ ಇರಲಿ, ರಾಹುಲ್ ದ್ರಾವಿಡ್ ಒಬ್ಬ ತರಬೇತುದಾರನಾಗಿ ಇನ್ನೂ ಕಲಿಯುತ್ತಲೇ ಇದ್ದಾರಂತೆ. ನಾನು ಪ್ರತಿ ದಿನ ಕಲಿಯುತ್ತಿದ್ದೇನೆ. ತಪ್ಪುಗಳನ್ನು ಯಾರು ಮಾಡಬಾರದು ಎಂದು ಹೇಳುತ್ತಿಲ್ಲ. ನಾನು ತಪ್ಪುಗಳನ್ನು ಮಾಡುತ್ತೇನೆ. ಆದ್ರೆ ಅದನ್ನು ಸರಿಪಡಿಸುವುದು ಹೇಗೆ ಎಂಬುದರ ಬಗ್ಗೆ ಯೋಚನೆ ಮಾಡುತ್ತಿರುತ್ತೇನೆ ಹಾಗಾಗಿ ಫಲಿತಾಂಶದ ಬಗ್ಗೆ ಹೆಚ್ಚು ಆದ್ಯತೆ ನೀಡಲಿಲ್ಲ. ತಂಡ ಉತ್ತಮ ಪ್ರದರ್ಶನ ನೀಡಿ, ಸರಿಯಾದ ದಿಕ್ಕಿನಲ್ಲಿ ಮುನ್ನಡೆಯಬೇಕು ಎಂಬುದನ್ನು ನಾನು ಎದುರು ನೋಡುತ್ತಿರುತ್ತೇನೆ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.
ಮುಂದಿನ ಟಿ-20 ವಿಶ್ವಕಪ್ ಟೂರ್ನಿಗೆ ಯಾವ ರೀತಿ ಬಲಿಷ್ಠ ತಂಡವನ್ನು ಕಟ್ಟ ಬೇಕು ಎಂಬುದರ ಬಗ್ಗೆ ಟೀಮ್ ಮ್ಯಾನೇಜ್ ಮೆಂಟ್, ನಾಯಕ, ನನಗೆ ಮತ್ತು ಆಯ್ಕೆ ಸಮಿತಿಗೆ ಗೊತ್ತಾಗುತ್ತಿದೆ. ನಾವು ಕೇವಲ 15 ಆಟಗಾರರಿಗೆ ಸೀಮಿತಗೊಳ್ಳಬಾರದು. ಯುವ ಆಟಗಾರರಿಗೆ ಅವಕಾಶ ನೀಡಬೇಕು. ಕಳಪೆ ಫಾರ್ಮ್ ನೀಡಿದಾಗ ಅವರ ಬೆಂಬಲಕ್ಕೆ ನಿಲ್ಲಬೇಕು. ಆಗ ಮಾತ್ರ ನಾವು ಬಲಿಷ್ಠ ತಂಡವನ್ನು ಕಟ್ಟಲು ಸಾಧ್ಯ ಎಂಬುದು ಟೀಮ್ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್ ಅವರ ಅಭಿಮತವಾಗಿದೆ. I learn, I’ll improve and get better. I hope the team wants to do that
ನಾವು ಯಾವುದೇ ನಿರ್ದಿಷ್ಟವಾದ ಫಾರ್ಮು¯ಗೆ ಅಂಟಿಕೊಂಡ್ರೆ ಯಶ ಸಾಧಿಸುವುದು ಕಷ್ಟ. ಬ್ಯಾಲೆನ್ಸ್ ಆಗಿರುವ ತಂಡವನ್ನು ಕಟ್ಟಲು ಸಾಧ್ಯವಿಲ್ಲ. ವಿಶ್ವ ಕಪ್ ಟೂರ್ನಿಗೆ ಇನ್ನೂ ಏಳೆಂಟು ತಿಂಗಳು ಇವೆ. ಪ್ರತಿ ಆಟಗಾರನಿಗೆ ಕನಿಷ್ಠ 10ರಿಂದ 15 ಪಂದ್ಯಗಳನ್ನು ಆಡುವಂತಹ ಅವಕಾಶ ನೀಡಬೇಕು. ಆಗ ತಂಡದ ಕಾಂಬಿನೇಷನ್ ಹೇಗಿರಬೇಕು ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ ಅಂತಾರೆ ರಾಹುಲ್ ದ್ರಾವಿಡ್.