ಐಪಿಎಲ್ 2 ಹೊಸ ತಂಡಗಳಾದ ಲಕ್ನೋ ಮತ್ತು ಅಹಮದಾಬಾದ್ ಫ್ರಾಂಚೈಸಿಗಳಿಗೆ ತಲಾ 3 ಅಟಗಾರರನ್ನು ಆರಿಸಿಕೊಳ್ಳಲು ವಿಶೇಷ ಅಧಿಕಾರ ನೀಡಲಾಗಿತ್ತು. ಐಪಿಎಲ್ ಮೆಗಾ ಹರಾಜಿಗೆ ಮುನ್ನ 2 ಹೊಸ ಫ್ರಾಂಚೈಸಿಗಳು ಒಟ್ಟು 6 ಆಟಗಾರರನ್ನು ಆಯ್ಕೆ ಮಾಡಿಕೊಂಡಿವೆ. ಲಕ್ನೋ ತಂಡ ಕೆ.ಎಲ್. ರಾಹುಲ್ ರನ್ನು ನಾಯಕನಾಗಿ ಆಯ್ಕೆ ಮಾಡಿಕೊಂಡರೆ, ಅಹ್ಮದಾಬಾದ್ ಹಾರ್ದಿಕ್ ಪಾಂಡ್ಯಾರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡಿಕೊಂಡಿದೆ.
ಲಕ್ನೋ ತಂಡ ತನ್ನ ಸ್ಪೆಷಲ್ ಪಿಕ್ ಅಧಿಕಾರವನ್ನು ಬಳಸಿ ಕೆ.ಎಲ್. ರಾಹುಲ್, ರವಿ ಬಿಷ್ಣೋಯಿ ಮತ್ತು ಮಾರ್ಕಸ್ ಸ್ಟೋಯ್ನಿಸ್ ರನ್ನು ಆಯ್ಕೆ ಮಾಡಿದೆ. ರಾಹುಲ್ ಮತ್ತು ರವಿ ಬಿಷ್ಣೋಯಿ ಪಂಜಾಬ್ ತಂಡದಲ್ಲಿದ್ದರು. ಸ್ಟೋಯ್ನಿಸ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು.
ಅಹಮದಾಬಾದ್ ತಂಡ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾಗೆ ಕ್ಯಾಪ್ಟನ್ ಪಟ್ಟ ನೀಡಿದೆ. ಹಾರ್ದಿಕ್ ಜೊತೆಗೆ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಮತ್ತು ಉದಯೋನ್ಮುಖ ಆರಂಭಿಕ ಆಟಗಾರ ಶುಭ್ ಮನ್ ಗಿಲ್ ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಗಿಲ್ ಕೆಕೆಆರ್ ತಂಡವನ್ನು ಈ ಹಿಂದೆ ಪ್ರತಿನಿಧಿಸಿದ್ದರೆ, ರಶೀದ್ ಖಾನ್ ಸನ್ ರೈಸರ್ಸ್ ಹೈದ್ರಾಬಾದ್ ತಂಡದಲ್ಲಿದ್ದರು.
2 ಫ್ರಾಂಚೈಸಿಗಳು ತನ್ನ ಪಾಲಿನ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಂಡಿರುವ ಕಾರಣs ಈಗ ಮೆಗಾ ಹರಾಜಿನಲ್ಲಿ ಈ ಆಟಗಾರರ ಹೆಸರಿರುವುದಿಲ್ಲ. ಅಷ್ಟೇ ಅಲ್ಲಈ ಎರಡು ಫ್ರಾಂಚೈಸಿಗಳ ಹಣದ ಮೊತ್ತ ಕೂಡ ಕಡಿಮೆ ಆಗಲಿದೆ.