ಆಸ್ಟ್ರೇಲಿಯನ್ ಓಪನ್ 2022- ಎರಡನೇ ಸುತ್ತಿನಲ್ಲಿ ಆಂಡಿ ಮುರ್ರೆಗೆ ಸೋಲು, ಮೂರನೇ ಸುತ್ತು ಪ್ರವೇಶಿಸಿದ ಸಬಾಲೆಂಕಾ
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ನಲ್ಲಿ ಬ್ರಿಟನ್ ನ ಆಂಡಿ ಮುರ್ರೆ ಅವರು ನಿರಾಸೆ ಅನುಭವಿಸಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ಆಂಡಿ ಮುರ್ರೆ ಅವರು 6-4, 6-4, 6-4 ನೇರ ಸೆಟ್ ಗಳಿಂದ ಜಪಾನ್ ಟಾರೊ ಡೆನಿಯಲ್ ಅವರಿಗೆ ತಲೆಬಾಗಿದ್ರು.
ಮೂರು ಬಾರಿ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಜೊತೆಗೆ ಮಾಜಿ ನಂಬರ್ ವನ್ ಆಟಗಾರನಾಗಿದ್ದ ಆಂಡಿ ಮುರ್ರೆ ಅವರು ಈ ಬಾರಿಯ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್ ಆಟಗಾರನಾಗಿದ್ದರು. ನೊವಾಕ್ ಜಾಕೊವಿಕ್ ಮತ್ತು ರೋಜರ್ ಫೆಡರರ್ ಅನುಪಸ್ಥಿತಿಯಲ್ಲಿ ಕನಿಷ್ಠ ಸೆಮಿಫೈನಲ್ ಪ್ರವೇಶಿಸುವ ಇರಾದೆಯಲ್ಲಿದ್ರು. ಆದ್ರೆ ಆಂಡಿ ಮುರ್ರೆ ಅವರ ಹೋರಾಟ ಎರಡನೇ ಸುತ್ತಿಗೆ ಕೊನೆಗೊಂಡಿದೆ.
ಇನ್ನೊಂದು ಪಂದ್ಯದಲ್ಲಿ ವಿಶ್ವದ ನಾಲ್ಕನೇ ಶ್ರೇಯಾಂಕಿತ ಸ್ಟೆಫಾನೊಸ್ ಸಿಟ್ಸಿಪಾಸ್ 7-6, 6-7, 6-3, 6-4ರಿಂದ ಸೆಬಾಸ್ಟಿಯನ್ ಬಾಯೆಝ್ ಅವರನ್ನು ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ನಲ್ಲಿ ಸಮಂತಾ ಸ್ಟೊಸುರ್ 6-2, 6-2ರಿಂದ ರಷ್ಯಾದ ಅನಾಸ್ಟಾಸಿಯಾ ಪಾವ್ಲ್ಯುಚೆಂಕೊವಾ ವಿರುದ್ಧ ಸೋಲು ಅನುಭವಿಸಿದ್ರು. 37ರ ಹರೆಯದ ಸಮಂತಾ ತಮ್ಮ ವೃತ್ತಿ ಬದುಕಿನ ಕೊನೆಯ ಸಿಂಗಲ್ಸ್ ಗ್ರ್ಯಾಂಡ್ ಸ್ಲ್ಯಾಂ ಪಂದ್ಯವನ್ನು ಆಡಿರುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಡಬಲ್ಸ್ ಕಡೆ ಗಮನ ಹರಿಸುವುದಾಗಿ ಹೇಳಿದ್ದಾರೆ.
ಇನ್ನು ಮಹಿಳೆಯರ ಮತ್ತೊಂದು ಸಿಂಗಲ್ಸ್ ನಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತೆ ಆರ್ಯಾನಾ ಸಬಾಲೆಂಕಾ ಅವರು 1-6, 6-4, 6-2ರಿಂದ ವಾಂಗ್ ಕ್ಸಿಯೂ ಅವರನ್ನು ಸೋಲಿಸಿ ಮೂರನೇ ಸುತ್ತು ಪ್ರವೇಶಿದ್ರು.