IPL 2022- LSG Vs KKR – ಲಕ್ನೋ ವಿರುದ್ದದ ಪಂದ್ಯಕ್ಕೆ ಕೆಕೆಆರ್ ಪ್ಲೇಯಿಂಗ್ ಇಲೆವೆನ್ – Kolkata Knight Riders Probable Playing XIs

15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪ್ಲೇ ಆಫ್ ಗೆ ಎಂಟ್ರಿ ಪಡೆಯುವುದು ಅಸಾಧ್ಯ. ಆದ್ರೂ ಬೇರೆ ಪಂದ್ಯಗಳ ಫಲಿತಾಂಶ ಉಲ್ಟಾಪಲ್ಟಾವಾದ್ರೆ ಒಂದು ಅವಕಾಶ ಸಿಗಬಹುದು. ಆದ್ರೂ ಗ್ಯಾರಂಟಿ ಇಲ್ಲ.
ಆಡಿರುವ 13 ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದಿರುವ ಶ್ರೇಯಸ್ ಬಳಗ ಏಳು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಅಂಕಪಟ್ಟಿಯಲ್ಲಿ ಸದ್ಯ ಆರನೇ ಸ್ಥಾನದಲ್ಲಿದೆ. ಆದ್ರೆ ರನ್ ಧಾರಣೆ ಮಾತ್ರ ಪ್ಲಸ್ ನಲ್ಲಿದೆ. ಹೀಗಾಗಿ ಪ್ಲೇ ಆಫ್ ಪ್ರವೇಶದ ಒಂದು ಆಶಾಭಾವನೆಯಂತೂ ಇದ್ದೇ ಇದೆ.
ಇದೀಗ ಲೀಗ್ ನ ಕೊನೆಯ ಪಂದ್ಯವನ್ನು ಕೆಕೆಆರ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಲಿದೆ. ಮುಂಬೈ ನ ಡಿ.ವೈ ಪಾಟೀಲ್ ಅಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕೆಕೆಆರ್ ತಂಡ ಗೆಲುವನ್ನೇ ಎದುರು ನೋಡುತ್ತಿದೆ.
ಮೇಲ್ನೋಟಕ್ಕೆ ಕೆಕೆಆರ್ ತಂಡ ಬಲಿಷ್ಠವಾಗಿಯೇ ಇದೆ. ಆದ್ರೆ ಸಂಘಟಿತ ಮತ್ತು ಹೊಂದಾಣಿಕೆಯ ಆಟವನ್ನು ಆಡಲು ಸಂಪೂರ್ಣವಾಗಿ ವಿಫಲವಾಗಿದೆ.
ಆರಂಭಿಕ ವೆಂಕಟೇಶ್ ಅಯ್ಯರ್ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಹೊಡಿಬಡಿ ಆಟದ ಮೂಲಕ ಗಮನ ಸೆಳೆಯುವ ವೆಂಕಟೇಶ್ ಅಯ್ಯರ್ ಸ್ಥಿರ ಪ್ರದರ್ಶನ ನೀಡಿಲ್ಲ. ಇನ್ನು ಇನ್ನೊಬ್ಬ ಆರಂಭಿಕ ಆಟಗಾರನ ಸಮಸ್ಯೆಯೂ ಕೆಕೆಆರ್ ತಂಡವನ್ನು ಕಾಡುತ್ತಿದೆ. ಆರೋನ್ ಫಿಂಚ್ ತಂಡದಲ್ಲಿದ್ರೂ 11ರ ಬಳಗದಲ್ಲಿ ಅವಕಾಶ ಸಿಗುತ್ತಿಲ್ಲ. ಅಜಿಂಕ್ಯಾ ರಹಾನೆ ಕೂಡ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಬಾಬಾ ಇಂದ್ರಜಿತ್ ಅವರು ವೆಂಕಟೇಶ್ ಅಯ್ಯರ್ ಜೊತೆ ಇನಿಂಗ್ಸ್ ಆರಂಭಿಸಬಹುದು.

ಇನ್ನು ನಾಯಕ ಶ್ರೇಯಸ್ ಅಯ್ಯರ್ ಸಂಪೂರ್ಣವಾಗಿ ಗೊಂದಲದಲ್ಲಿದ್ದಾರೆ. ಒಂದು ಕಡೆ ತಂಡದ ಕಳಪೆ ಪ್ರದರ್ಶನ, ಟೀಮ್ ಮ್ಯಾನೇಜ್ ಮೆಂಟ್ ನ ಕಿರಿಕ್, ನಾಯಕತ್ವದ ಒತ್ತಡದಿಂದ ಶ್ರೇಯಸ್ ಅಯ್ಯರ್ ಅವರಿಗೆ ನೈಜ ಆಟವನ್ನಾಡಲು ಸಾಧ್ಯವಾಗುತ್ತಿಲ್ಲ.
ಇನ್ನುಳಿದಂತೆ ನಿತೇಶ್ ರಾಣಾ, ರಿಂಕು ಸಿಂಗ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಸುನೀಲ್ ನರೇನ್ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರೂ ಬ್ಯಾಟಿಂಗ್ ಅನ್ನು ಮರೆತಿದ್ದಾರೆ. ಆಂಡ್ರ್ಯೂ ರಸೆಲ್ ಆಲ್ ರೌಂಡ್ ಆಟವಾಡುತ್ತಿರುವುದು ಪ್ಲಸ್ ಪಾಯಿಂಟ್. IPL 2022- LSG Vs KKR – Kolkata Knight Riders Probable Playing XIs

ಇನ್ನು ಉಮೇಶ್ ಯಾದವ್ ಅವರ ಆರಂಭದ ಘರ್ಜನೆ ಈಗ ಕಡಿಮೆಯಾಗಿದೆ. ಪ್ಯಾಟ್ ಕಮಿನ್ಸ್ ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲ. ಹೀಗಾಗಿ ಅವರ ಜಾಗದಲ್ಲಿ ಟೀಮ್ ಸೌಥಿ ಕಣಕ್ಕಿಳಿಯಬಹುದು. ಸ್ಪಿನ್ನರ್ ವರುಣ್ ಚಕ್ರವರ್ತಿ ಇನ್ನಷ್ಟು ಪರಿಣಾಮಕಾರಿಯಾಗಬೇಕಿದೆ.
ಒಟ್ಟಿನಲ್ಲಿ ಕೆಕೆಆರ್ ತಂಡ ಲೀಗ್ ನ ಕೊನೆಯ ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಉತ್ತಮ ಪಡಿಸಿಕೊಳ್ಳಲು ಹೋರಾಟ ನಡೆಸಲಿದೆ. ಅದೇ ರೀತಿ ಅದೃಷ್ಟದ ಬೆಂಬಲಕ್ಕಾಗಿ ಕಾಯುತ್ತಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್ ಇಲೆವೆನ್
ವೆಂಕಟೇಶ್ ಅಯ್ಯರ್
ಬಾಬಾ ಇಂದ್ರಜಿತ್
ಶ್ರೇಯಸ್ ಅಯ್ಯರ್ (ನಾಯಕ)
ನಿತೇಶ್ ರಾಣಾ
ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್)
ರಿಂಕು ಸಿಂಗ್
ಆಂಡ್ರೆ ರಸೆಲ್
ಸುನೀಲ್ ನರೇನ್
ಉಮೇಶ್ ಯಾದವ್
ಟೀಮ್ ಸೌಥಿ
ವರುಣ್ ಚಕ್ರವರ್ತಿ