ಟೀಮ್ ಇಂಡಿಯಾವನ್ನು ಮುನ್ನಡೆಸಬಲ್ಲ ಆಟಗಾರರು ತಮ್ಮ ತಂಡದ ಜೊತೆ ಅಖಾಡಕ್ಕೆ ಇಳಿಯುತ್ತಿದ್ದಾರೆ. ರಾಹುಲ್ ಕಟ್ಟಿಹಾಕಲು ಶ್ರೇಯಸ್ ಪ್ಲಾನ್ ಮಾಡಿದ್ರೆ, ಶ್ರೇಯಸ್ ಆಟಕ್ಕೆ ಕಡಿವಾಣ ಹಾಕುಲ ಪ್ಲಾನ್ ರಾಹುಲ್ ಮಾಡಿದ್ದಾರೆ. ವೈಯಕ್ತಿಕ ಫೈಟ್ ಜೊತೆಗೆ ತಂಡದ ಗೆಲುವಿಗೂ ಈ ನಾಯಕರು ರಣತಂತ್ರ ರೂಪಿಸಿದ್ದಾರೆ.
ವೇಗದ ಬೌಲರ್ಗಳ “ತ್ರಿ”ಶೂಲ ಅಸ್ತ್ರ..!
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟರ್ ಗಳಿಗೆ ಶಾರ್ಟ್ ಬಾಲ್ ಅಥವಾ ಶಾರ್ಟ್ ಆಫ್ ಗುಡ್ ಲೆಂಗ್ತ್ ಎಸೆತಗಳು ಮಾರಕವಾಗಿವೆ. ಈ ಬಾರಿಯ ಐಪಿಎಲ್ನಲ್ಲಿ ಕೆಕೆಆರ್ 38 ವಿಕೆಟ್ ಕಳೆದುಕೊಂಡಿದೆ. ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ ಮತ್ತು ನಿತೀಶ್ ರಾಣಾ ಈ ರೀತಿಯ ಎಸೆತಗಳಿಗೆ ಹೆಚ್ಚು ಬಾರಿ ಔಟ್ ಆಗಿದ್ದಾರೆ.
ರನ್ ಕೊಡದ ಬೌಲರ್ಸ್:
ಕೆಕೆಆರ್ ಮತ್ತು ಲಖನೌ ತಂಡದ ವೇಗದ ಬೌಲರ್ಗಳು ಎದುರಾಳಿಗೆ ರನ್ ಬಿಟ್ಟುಕೊಡುವುದು ಅಪರೂಪ. ಐಪಿಎಲ್ 2022ರಲ್ಲಿ ಮೌಸಿನ್ ಖಾನ್ 6.1 ಎಕಾನಮಿಯಲ್ಲಿ ರನ್ ಬಿಟ್ಟಿದ್ದರೆ, ಉಮೇಶ್ ಯಾದವ್ 6.9ರ ಎಕಾನಮಿ ಹೊಂದಿದ್ದಾರೆ. ಟಿಮ್ ಸೌಥಿ ಎಕಾನಮಿ 7.0 ಆಗಿದೆ.
ನಂಬರ್ ಗೇಮ್ :
- ಕಳೆದ 5 ಪಂದ್ಯಗಳಲ್ಲಿ ರಾಹುಲ್ 20.20 ಸರಾಸರಿ ಹಾಗೂ 104.12ರ ಸ್ಟ್ರೈಕ್ ರೇಟ್ನಲ್ಲಿ ಕೇವಲ 101 ರನ್ ಮಾತ್ರಗಳಿಸಿದ್ದಾರೆ. ಮೊದಲ 8 ಪಂದ್ಯಗಳಲ್ಲಿ ರಾಹುಲ್ 61.33 ಸರಾಸರಿ ಹಾಗೂ 147.79 ಸ್ಟ್ರೈಕ್ ರೇಟ್ನಲ್ಲಿ 368 ರನ್ ಬಾರಿಸಿದ್ದರು.
- 16ರಿಂದ 20 ಓವರುಗಳ ತನಕ ಸೂಪರ್ ಜೈಂಟ್ಸ್ ರನ್ ರೇಟ್ 11.30 ಆಗಿದೆ. ಇದು ಈ ಬಾರಿಯ ಐಪಿಎಲ್ನಲ್ಲಿ ದಿ ಬೆಸ್ಟ್. ಮತ್ತೊಂದು ಕಡೆಯಲ್ಲಿ ನೈಟ್ ರೈಡರ್ಸ್ 9.82 ರನ್ರೇಟ್ ಹೊಂದಿ ಕೊನೆಯ ಸ್ಥಾನದಲ್ಲಿದೆ.