IPL 2022- LSG – Krunal Pandya – Deepak Hooda ಕೃನಾಲ್ ಪಾಂಡ್ಯ ನನ್ನ ಅಣ್ಣ – ಅಣ್ಣ – ತಮ್ಮಂದಿರ ಜಗಳ ಸಹಜ – ದೀಪಕ್ ಹೂಡಾ

ಕೃನಾಲ್ ಪಾಂಡ್ಯ ಮತ್ತು ದೀಪಕ್ ಹೂಡಾ… ಟೀಮ್ ಇಂಡಿಯಾದ ಆಲ್ ರೌಂಡರ್ ಗಳು. ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಲ್ ರೌಂಡರ್ ಗಳು.. ಹಾಗೇ ಬರೋಡಾ ತಂಡದ ಆಲ್ ರೌಂಡರ್ ಗಳು ಕೂಡ ಆಗಿದ್ದರು.
ಆದ್ರೆ 2021ರ ರಣಜಿ ಋತುವಿನಲ್ಲಿ ಕೃನಾಲ್ ಪಾಂಡ್ಯ ಮತ್ತು ದೀಪಕ್ ಹೂಡಾ ಅವರು ಜಗಳ ಮಾಡಿಕೊಂಡಿದ್ದರು. ಒಬ್ಬರನ್ನು ಕಂಡ್ರೆ ಒಬ್ರಿಗೆ ಆಗುತ್ತಿರಲಿಲ್ಲ. ಅಲ್ಲದೆ ಕೃನಾಲ್ ಪಾಂಡ್ಯ ಬರೋಡಾ ತಂಡದ ನಾಯಕ ಕೂಡ ಆಗಿದ್ದರು. ಹೀಗಾಗಿ ದೀಪಕ್ ಹೂಡಾ ವಿರುದ್ಧ ಬರೋಡಾ ಕ್ರಿಕೆಟ್ ಸಂಸ್ಥೆಯು ಶಿಸ್ತು ಕ್ರಮ ತೆಗೆದುಕೊಂಡಿತ್ತು.
ಆಗ ದೀಪಕ್ ಹೂಡಾ ಅವರ ನೆರವಿಗೆ ಬಂದಿದ್ದು ಇರ್ಫಾನ್ ಪಠಾಣ್ ಮತ್ತು ಯುಸೂಫ್ ಪಠಾಣ್ ಬ್ರದರ್ಸ್. ದೀಪಕ್ ಹೂಡಾ ತನ್ನ ಕ್ರಿಕೆಟ್ ಬದುಕು ಮುಗಿದು ಹೋಯ್ತು ಅಂತ ಅಂದುಕೊಂಡಿದ್ದರು. ಈ ಸಮಯದಲ್ಲಿ ದೀಪಕ್ ಹೂಡಾ ಅವರಿಗೆ ರಾಜಸ್ತಾನ ತಂಡದ ಪರವಾಗಿ ಆಡುವಂತೆ ಇರ್ಫಾನ್ ಪಠಾಣ್ ಸಲಹೆ ಮತ್ತು ಮಾರ್ಗದರ್ಶನ ನೀಡಿದ್ದರು. ರಾಜಸ್ತಾನ ತಂಡದ ಪರ ಅತ್ಯುತ್ತಮ ಆಟವನ್ನಾಡಿದ್ದ ದೀಪಕ್ ಹೂಡಾ ಟೀಮ್ ಇಂಡಿಯಾಗೂ ಎಂಟ್ರಿಯಾಗಿದ್ದರು. ವಿಶೇಷ ಅಂದ್ರೆ ಪಾಂಡ್ಯ ಬ್ರದರ್ಸ್ ಸ್ಥಾನಕ್ಕೆ ದೀಪಕ್ ಹೂಡಾ ಆಯ್ಕೆಯಾಗಿದ್ದರು. ಉತ್ತಮ ಪ್ರದರ್ಶನ ನೀಡಿದ್ದ ದೀಪಕ್ ಹೂಡಾ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಸೂಚನೆಯನ್ನು ನೀಡಿದ್ದರು.
ಇದೀಗ ಐಪಿಎಲ್ ನಲ್ಲಿ ಕೃನಾಲ್ ಪಾಂಡ್ಯ ಮತ್ತು ದೀಪಕ್ ಹೂಡಾ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಇವರಿಬ್ಬರನ್ನು ಒಂದೇ ತಂಡದಲ್ಲಿ ಆಡುವಂತೆ ಮಾಡಿದ್ದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್.
ಜೊತೆಯಾಗಿ ಒಂದೇ ತಂಡದ ಪರವಾಗಿ ಆಡುವಾಗ ದ್ವೇಷವನ್ನು ಮರೆಯಬೇಕಾಗುತ್ತದೆ.

ಹೀಗಾಗಿ ಕೃನಾಲ್ ಪಾಂಡ್ಯ ಮತ್ತು ದೀಪಕ್ ಹೂಡಾ ದೋಸ್ತಿಗಳಾಗಿದ್ದಾರೆ. ಹಳೆಯ ಕೆಟ್ಟ ಘಟನೆಯನ್ನು ಮರೆತು ಜೊತೆಯಾಗಿದ್ದಾರೆ. IPL 2022- LSG – Krunal Pandya is my brother & brothers do fight: Deepak Hooda
ಅಷ್ಡೇ ಅಲ್ಲ, ದೀಪಕ್ ಹೂಡಾ ಅವರು ಕೃನಾಲ್ ಪಾಂಡ್ಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಕೃನಾಲ್ ಪಾಂಡ್ಯ ನನಗೆ ಅಣ್ಣನಿದ್ದಂತೆ. ಅಣ್ಣ ತಮ್ಮ ಜಗಳ ಮಾಡುವುದು ಸಹಜ. ನಾವು ಒಂದೇ ಉದ್ದೇಶವನ್ನಿಟ್ಟುಕೊಂಡು ಆಡುತ್ತಿದ್ದೇವೆ. ನಮ್ಮ ಗುರಿ ಗೆಲ್ಲುವುದು ಅಷ್ಟೇ ಎಂದು ದೀಪಕ್ ಹೂಡಾ ಹೇಳಿದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ ದೀಪಕ್ ಹೂಡಾ ಅವರನ್ನು ಖರೀದಿ ಮಾಡಲು ಆರು ಫ್ರಾಂಚೈಸಿಗಳು ಮುಂದೆ ಬಂದಿದ್ದವು. ಅಂತಿಮವಾಗಿ ಲಕ್ನೋ ಸೂಪರ್ ಜೈಂಟ್ಸ್ 5.75 ಕೋಟಿಗೆ ಖರೀದಿ ಮಾಡಿತ್ತು. ಹಾಗೇ ಕೃನಾಲ್ ಪಾಂಡ್ಯ ಅವರನ್ನು 8.25 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು.
ಇದೀಗ ಇಬ್ಬರು ಆಲ್ ರೌಂಡರ್ ಗಳು ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಕೊಟ್ಟ ದುಡ್ಡಿಗೂ ಮೋಸವಿಲ್ಲ. ಹಾಗೇ ಹಳೆಯ ದ್ವೇಷವನ್ನು ಮರೆತು ಜೊತೆಯಾಗಿ ಆಡುತ್ತಿದ್ದಾರೆ.